ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ಬುಡಕಟ್ಟು ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ಮಾತನಾಡುವಾಗ ʻಇಂತಾ ಘಟನೆಗಳು ನಡೆಯುತ್ತಲೇ ಇರುತ್ತವೆʼ ಎಂದಿದ್ದಾರೆ.
ಶುಕ್ರವಾರ ಜಾರ್ಖಂಡ್ನ ದುಮ್ಕಾ ಗ್ರಾಮದಲ್ಲಿ 14 ವರ್ಷದ ಗರ್ಭಿಣಿ ಬಾಲಕಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಕುರಿತು ಕೇಳಲಾದ ಪ್ರಶ್ನೆಗೆ ಹೇಮಂತ್ ಸೊರೆನ್, “ಇಂತಾ ಘಟನೆಗಳು ನಡೆಯುತ್ತಲೇ ಇರುತ್ತವೆ. ಅವು ಎಲ್ಲಿ ಸಂಭವಿಸುವುದಿಲ್ಲ?” ಎಂದಿದ್ದು, ಪ್ರತಿಪಕ್ಷಗಳಿಂದ ಕಟು ಟೀಕೆಗೆ ಒಳಗಾಗಿದ್ದಾರೆ.
ಸೋರೆನ್ ಮುಖ್ಯಮಂತ್ರಿಯಾದ ನಂತರ ರಾಜ್ಯದಲ್ಲಿ ಮಹಿಳೆಯರ ವಿರುದ್ಧ ಸಾವಿರಾರು ಅಪರಾಧಗಳು ನಡೆದಿವೆ ಎಂದು ಬಿಜೆಪಿ ಹೇಳಿಕೊಂಡಿದೆ.
BREAKING NEWS : ಬಿಹಾರದ ಗಂಗಾ ನದಿಯಲ್ಲಿ 55 ಜನರಿದ್ದ ದೋಣಿ ಮುಳುಗಡೆ… ಮುಂದುವರೆದ ರಕ್ಷಣಾ ಕಾರ್ಯಾಚರಣೆ
BIG NEWS : ಇಂದು ಭಾರತಕ್ಕೆ ಬಾಂಗ್ಲಾದೇಶ ಪ್ರಧಾನಿ ʻಶೇಖ್ ಹಸೀನಾʼ ಭೇಟಿ: ಮೋದಿಯೊಂದಿಗೆ ಮಾತುಕತೆ