ವಿಜಯಪುರ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದು, ಹಳ್ಳ. ಕೊಳ್ಳದಲ್ಲಿ ನೀರು ತುಂಬಿ ಹರಿಯುತ್ತಿದೆ.
ಮಳೆಯಿಂದ ಮುದ್ದೇಬಿಹಾಳ ತಾಲೂಕಿನ ಚವನಭಾವಿ ನಾಲತವಾಡ ರಸ್ತೆ ಸಂಪರ್ಕ ಬಂದ್ ಆಗಿದೆ.ಮಳೆಯಿಂದ ಹಳ್ಳದ ನೀರು ತುಂಬಿ ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡಿದೆ. ತಾಳಿಕೋಟೆ ಚವನಭಾವಿ ನಾಲತವಾಡ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. 108 ಆ್ಯಂಬುಲೆನ್ಸ್ ವಾಹನ ಓಡಾಟಕ್ಕೂ ಸಾಧ್ಯವಾಗದೇ ತುರ್ತು ಚಿಕಿತ್ಸೆಗೂ ತೊಂದರೆಯಾಗಿದೆ. ಕೆಲಸಕ್ಕಾಗಿ ಬೇರೆ ಊರುಗಳಿಗೆ ತೆರಳುವ ಜನರು ತುಂಬಿ ಹರಿಯುತ್ತಿರುವ ಹಳ್ಳದ ನೀರಿನಿಂದ ಪರದಾಡುವಂತಾಗಿದೆ.ಇತ್ತ ಬೆಂಗಳೂರುಮಳೆಯಿಂದ ತತ್ತರಿಸಿ ಹೋಗಿದೆ. ಅಂಡರ್ ಪಾಸ್ ನಲ್ಲಿ ನೀರು ನುಗ್ಗಿದ್ದು, ನಗರದಲ್ಲಿ ಟ್ರಾಫಿಕ್ ಜಾಮ್ ಆಗಿದೆ.