ಬೆಳಗಾವಿ : ಬೆಳಗಾವಿ ತಾಲೂಕಿನ ವಂಟಮೂರಿಯಲ್ಲಿ ಇತ್ತೀಚಿಗೆ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು ದುಷ್ಕರ್ಮಿ ಒಬ್ಬ ಮಗನಿಗೆ ಜಾಮೀನು ಕೊಡಿಸುತ್ತೇನೆ ಎಂದು ಹೇಳಿ ತಾಯಿಯ ಮೇಲೆ ನಿರಂತರವಾಗಿ ಒಂದು ತಿಂಗಳವರೆಗೆ ಅತ್ಯಾಚಾರ ಎಸಗಿದ್ದಾನೆ.
BREAKING : ಮುಂದಿನ ತಿಂಗಳಿನಿಂದ ‘ಪೌರತ್ವ ತಿದ್ದುಪಡಿ ನಿಯಮಗಳು’ ಜಾರಿ ಸಾಧ್ಯತೆ : ಮೂಲಗಳು
ಕೊಲೆ ಪ್ರಕರಣದಲ್ಲಿ ಅತ್ಯಾಚಾರಕ್ಕೆ ಒಳಗಾದೆ ಎನ್ನುತ್ತಿರುವ ಮಹಿಳೆಯ ಮಗ ಬಂಧಿತವಾಗಿದ್ದ. ಮಹಿಳೆಯನ್ನು ಪುಸಲಾಯಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಬಳಿಕ ಮಗ ಜಾಮೀನು ಪಡೆದು ಹೊರ ಬಂದ ಬಳಿಕ ತನ್ನ ಅನೈತಿಕ ಸಂಬಂಧದ ತಪ್ಪಿನ ಅರಿವಾಗಿ ಆರೋಪಿಯೊಂದಿಗಿನ ಸಂಪರ್ಕ ಕಡಿತಗೊಳಿಸಿದ್ದಳು.
Explainer : ‘ಗಗನಯಾನ ಮಿಷನ್’ಗೆ ಆಯ್ಕೆಯಾದ ‘ನಾಲ್ವರು ಪೈಲಟ್’ಗಳಲ್ಲಿ ‘ಮಹಿಳೆ’ಯರು ಯಾಕಿಲ್ಲ.? ಇಲ್ಲಿದೆ ಉತ್ತರ
ಇದರಿಂದ ರೊಚ್ಚಿಗೆದ್ದ ಆರೋಪಿಯು ಮಹಿಳೆ ಜೊತೆಗೆ ಇದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ. ಅಲ್ಲದೇ ನನಗೆ 50 ಸಾವಿರ ರೂ. ನೀಡಬೇಕು ಎಂದು ಬೇಡಿಕೆ ಇಟ್ಟಿದ್ದು, ಕುಟುಂಬ ಸದಸ್ಯರನ್ನೂ ಕಿಡ್ನಾಪ್ ಮಾಡಿದ್ದಾನೆ ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾಳೆ.
‘ಮಾನ’ ಇದ್ದವ್ರು ‘ಮಾನನಷ್ಟ’ ಮೊಕದ್ದಮ್ಮೆ ಹಾಕಲಿ ಪ್ರತಾಪ್ ಸಿಂಹ ಯಾಕೆ? ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯ
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿ ಹರಿಯಬಿಟ್ಟಿರುವ ವಿಡಿಯೋಗಳನ್ನು ಪರಿಶೀಲಿಸಲಾಗುವುದು. ಹೆಚ್ಚಿನ ತನಿಖೆ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಪ್ಪ ಗುಳೇದ ತಿಳಿಸಿದ್ದಾರೆ.