ಹುಬ್ಬಳ್ಳಿ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಹುಬ್ಬಳ್ಳಿಯಲ್ಲಿ ರೈಲ್ವೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಹೇಳಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ರೈಲ್ವೆ ನೌಕರನನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತನನ್ನು ನದೀಂ ಎಂದು ತಿಳಿದುಬಂದಿದೆ.
ಹೌದು ಹುಬ್ಬಳ್ಳಿ ಕೇಶ್ವಾಪುರ ಮೂಲದ ಗೃಹಿಣಿಯೊಬ್ಬರಿಗೆ ಗಾಳ ಹಾಕಿದ್ದ ಬಂಧಿತ ನದೀಂ. ಗೃಹಿಣಿ ಜೊತೆ ಚಾಟ್ ಮಾಡಿ ಮಂಚಕ್ಕೆ ಕರೆದಿದ್ದ. ನಾನು ದೆಹಲಿಯಿಂದ ಹುಬ್ಬಳ್ಳಿಗೆ ಬಂದಿದ್ದೇನೆ, ರೈಲ್ವೆ ಗೆಸ್ಟ್ ಹೌಸ್ ನಲ್ಲಿ ಉಳಿದುಕೊಂಡಿದ್ದೇನೆ, ರೂಂಗೆ ಬಾ ಅಂತ ಫೋಟೋ ಕಳುಹಿಸಿದ್ದ.ಇದರಿಂದ ಭಯಗೊಂಡ ಮಹಿಳೆ ಮೊದಲು ತನ್ನ ಗಂಡನಿಗೆ ವಿಷಯ ತಿಳಿಸಿದ್ದರು. ತಕ್ಷಣ ದಂಪತಿ ಕೇಶ್ವಾಪುರ ಠಾಣೆಯಲ್ಲಿ ದೂರು ನೀಡಿದ್ದರು.
ದೂರಿನ ಮೇರೆಗೆ ಪೊಲೀಸರು ಗೃಹಿಣಿಯನ್ನು ಗೆಸ್ಟ್ ಹೌಸ್‌ಗೆ ಕಳುಹಿಸಿದ್ದರು. ಕೊನೆಗೆ ಕಾಮುಕ ನದೀಂನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನದೀಂ ಸಾಮಾಜಿಕ ಜಾಲತಾಣದಲ್ಲಿ ರೈಲ್ವೆ ಜಾಬ್ ನೋಟಿಫಿಕೇಷನ್ ಪೇಜ್ ಕ್ರಿಯೇಟ್ ಮಾಡಿಕೊಂಡಿದ್ದ. ಈತ ಕೆಲಸದ ಅವಶ್ಯಕತೆ ಇರುವ ಹುಡುಗಿಯರು, ಮದುವೆಯಾದ ಮಹಿಳೆಯರನ್ನು ಟಾರ್ಗೆಟ್ ಮಾಡಿ ಅಂತಹವರಿಗೆ ಫೇಕ್ ನೋಟಿಫಿಕೇಷನ್ ಕಳುಹಿಸುತ್ತಿದ್ದ.
ಬಳಿಕ ಅವರ ಸ್ನೇಹ ಸಂಪಾದಿಸಿ, ನಿಮಗೆ ಕೆಲಸ ಕೊಡಸ್ತಿನಿ ಅಂತಿದ್ದ. ನಿಮ್ಮ ಕೆಲಸ ಆಗಬೇಕು ಎಂದರೆ ನಮ್ಮ ಹಿರಿಯ ಅಧಿಕಾರಿಗಳ ಜೊತೆಗೆ ಒಂದು ದಿನ ಕಳೆಯಬೇಕು ಅಂತ ಕಂಡಿಷನ್ ಹಾಕುತ್ತಿದ್ದ . ಬಳಿಕ ಇವರು ನಮ್ಮ ಆಫಿಸರ್ ಅಂತ ಫೇಕ್ ಐಡಿ ಕೊಟ್ಟು ತಾನೇ ಹುಡುಗಿಯರ ಜೊತೆ ಚಾಟ್ ಮಾಡಿ ಅವರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ ಎಂಬ ಆರೋಪ ಮಾಡಲಾಗಿದೆ.