ಬೆಂಗಳೂರು: 108 ಆಂಬ್ಯುಲೆನ್ಸ್ಗಳನ್ನು ನಿರ್ವಹಣೆ ಮಾಡುತ್ತಿರುವ ಜಿವಿಕೆ ಕಂಪೆನಿಯು ಸರಕಾರ ಹೇಳಿದಂತೆ ವೇತನ ಹೆಚ್ಚಳ ಮಾಡುತ್ತಿಲ್ಲ ಅಂತ ಹೇಳಿ 108 ಆಂಬ್ಯುಲೆನ್ಸ್ ಸಿಬ್ಬಂದಿ ಮತ್ತೆ ಹೋರಾಟಕ್ಕೆ ಇಳಿಯುವ ಬೆದರಿಕೆ ಹಾಕಿದ್ದಾರೆ.
108 ನೌಕರರ ಸಂಘದ ಉಪಾಧ್ಯಕ್ಷ ಎನ್.ಎಚ್. ಪರಮಶಿವ ಅವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಇದೇ ವೆಲೆ ಅವರು ಕಳೆದ 13 ವರ್ಷಗಳಿಂದ ಕಂಪೆನಿ ನಿರಂತರವಾಗಿ ನಮ್ಮ ಮೇಲೆ ದಬ್ಬಾಳಿಕೆ ಮಾಠಡುತ್ತ ಬಂದಿದೆ. ಕರ್ನಾಟಕ ಸರ್ಕಾರ ಸಂಬಳ ಹೆಚ್ಚಳ ಮಾಡಲು ಹಣ ಬಿಡುಗಡೆ ಮಾಡಿರುವುದು ಆದರೆ ನಮಗೆ ಸಂಬಳವನ್ನು ಹೆಚ್ಚಳ ಮಾಡಲಾಗಿಲ್ಲ ಅಂತ ಹೇಳಿದ್ದಾರೆ. ಇದೇ ವೇಳೆ ಆರೋಗ್ಯ ಸಚಿವರು ಮತ್ತು ಆರೋಗ್ಯ ಇಲಾಖೆಯ ಆಯುಕ್ತರು ಕೂಡಲೇ ನಮ್ಮ ಸಮಸ್ಯೆಯನ್ನು ಆಲಿಸಿ ನಮಗೆ ನ್ಯಾಯವನ್ನು ಒದಗಿಸಬೇಕು ಅಂಥ ಹೇಳಿದರು . ನಮ್ಮ ಹೋರಾಟ ಏನಿದ್ದರು ಕೂಡ ಕಂಪನಿ ವಿರುದ್ದ ಹೊರತು ಸರ್ಕಾರದ ವಿರುದ್ದ ಅಲ್ಲ ಅಂಥ ಅವರು ಇದೇ ವೇಳೆ ಹೇಳಿದ್ದಾರೆ.
BIGG NEWS : ವಿಧಾನಸಭಾ ಸದಸ್ಯರ ಸೋಗಿನಲ್ಲಿ ‘KSRTC’ ವ್ಯವಸ್ಥಾಪಕ ನಿರ್ದೇಶಕರಿಗೆ ವಂಚನೆಗೆ ಯತ್ನ : ಆರೋಪಿ ಅರೆಸ್ಟ್
ರಾಜ್ಯ ಸರ್ಕಾರದ ವಿರುದ್ಧ ‘ವಾಟ್ಸಾಪ್ ಸ್ಟೇಟಸ್’ ಹಾಕಿ ಕೆಲಸ ಕಳ್ಕೊಂಡ ‘ಪಂಚಾಯತಿ ಕ್ಲರ್ಕ್’
‘ಅನಾಹುತದಿಂದ ಇನ್ನೂ ಬುದ್ದಿ ಕಲಿಯದ ಸರ್ಕಾರ 108 ಆಂಬುಲೆನ್ಸ್ ಸಿಬ್ಬಂದಿಗೆ ಸಂಬಳ ನೀಡಿಲ್ಲ’ : ಕಾಂಗ್ರೆಸ್ ಕಿಡಿ