ಕೆಎನ್ ಎನ್ ನ್ಯೂಸ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ವಾಸ್ತು ಕಡೆ ಹೆಚ್ಚು ಗಮನಹರಿಸುತ್ತಾರೆ. ಮನೆಯಲ್ಲಿ ಸುಖ, ನೆಮ್ಮದಿ, ಶಾಂತಿ ನೆಲಸಬೇಕೆಂದು ಬಯಸುತ್ತಾರೆ.
ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ವಾಸ್ತು ಸಲಹೆಗಳನ್ನು ಅನುಸರಿಸಲು ಬಯಸುತ್ತಾರೆ. ಲ್ಲದಕ್ಕೂ ಕೆಲವೊಂದು ವಾಸ್ತು ನಿಯಮಗಳಿರುತ್ತವೆ. ಅದೇ ರೀತಿ ಊಟ ಮಾಡುವ ದಿಕ್ಕಿಗೆ ಸಂಬಂಧಿಸಿದಂತೆ ಕೂಡಾ ಕೆಲವೊಂದು ವಾಸ್ತು ನಿಯಮಗಳನ್ನು ಪಾಲಿಸಿದರೆ ಸೂಕ್ತ.ಆಹಾರವು ನಮ್ಮ ಆರೋಗ್ಯ ಮತ್ತು ನಮ್ಮ ದೇಹದ ಶಕ್ತಿಗೆ ಸಂಬಂಧಿಸಿದೆ. ಹಾಗಾಗಿ ವಾಸ್ತು ಶಾಸ್ತ್ರವು ಆಹಾರದ ವಿಷಯದಲ್ಲಿ ಕಟ್ಟುನಿಟ್ಟಾಗಿ ಅನುಸರಿಸಬೇಕಾದ ಕೆಲವು ನಿಯಮಗಳನ್ನು ಸೂಚಿಸುತ್ತದೆ. ಅಂದರೆ, ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆ ಮಾಡಲು, ತಿನ್ನಲು ಮತ್ತು ಅಡುಗೆ ವ್ಯವಸ್ಥೆ ಮಾಡಲು ಕೆಲವು ವಿಧಾನಗಳನ್ನು ಸೂಚಿಸಲಾಗುತ್ತದೆ.
ಅಂದರೆ, ಆಹಾರವನ್ನು ಬೇಯಿಸಲು ಮತ್ತು ತಿನ್ನಲು ಕೆಲವು ಮಾರ್ಗಸೂಚಿಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ. ಇದನ್ನು ಮಾಡದಿದ್ದರೆ ಕುಟುಂಬದ ಸದಸ್ಯರು ಆರೋಗ್ಯ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಯಾವ ದಿಕ್ಕಿಗೆ ಮುಖ ಮಾಡಿ ಆಹಾರ ಸೇವಿಸಬೇಕು…? ಎಲ್ಲಿದೆ ಮಾಹಿತಿಪಶ್ಚಿಮ ದಿಕ್ಕನ್ನು ಲಾಭದ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ವ್ಯಾಪಾರ ಮಾಡುವವರು ಅಥವಾ ಉದ್ಯೋಗದಲ್ಲಿರುವವರು ಅಥವಾ ಬರವಣಿಗೆ, ಶಿಕ್ಷಣ, ಸಂಶೋಧನೆ ಮುಂತಾದ ಕೆಲಸಗಳೊಂದಿಗೆ ತೊಡಗಿಸಿಕೊಂಡಿರುವವರು ಕೂಡಾ ಈ ದಿಕ್ಕಿನಲ್ಲಿ ಕುಳಿತು ಆಹಾರವನ್ನು ಸೇವಿಸಬೇಕು. ನಮ್ಮ ಆರೋಗ್ಯವು ಆಹಾರಕ್ಕೆ ಸಂಬಂಧಿಸಿದೆ. ವ್ಯಾಪಾರ ಮಾಡುವವರು ಅಥವಾ ಕೆಲಸದಲ್ಲಿ ತ್ವರಿತ ಪ್ರಗತಿಯನ್ನು ಬಯಸುವವರು ಪಶ್ಚಿಮ ದಿಕ್ಕಿಗೆ ಮುಖ ಮಾಡಬೇಕು. ಇದು ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ.
ಆದರೆ ನೀವು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಆಹಾರವನ್ನು ನೀಡುತ್ತಿದ್ದರೆ, ಈ ಅಭ್ಯಾಸವನ್ನು ತಕ್ಷಣವೇ ಬದಲಾಯಿಸಿ. ದಕ್ಷಿಣ ದಿಕ್ಕನ್ನು ಯಮರಾಜನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಯಮರಾಜ ಸಾವಿನ ದೇವರು. ದಕ್ಷಿಣಾಭಿಮುಖವಾಗಿ ಆಹಾರ ಸೇವಿಸಿದರೆ ಪ್ರಾಣಕ್ಕೆ ಅಪಾಯ. ನೀವು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದೆ. ಆದ್ದರಿಂದ ಈ ದಿಕ್ಕಿಗೆ ಮುಖ ಮಾಡಿ ತಿನ್ನುವುದನ್ನು ತಪ್ಪಿಸಿ, ಆದಷ್ಟು ಪೂರ್ವ ಅಥವಾ ಈಶಾನ್ಯಕ್ಕೆ ಮುಖ ಮಾಡಿ ಕುಳಿತು ತಿನ್ನುವುದು ಉತ್ತಮ. ಹೀಗೆ ಮಾಡುವುದರಿಂದ ಎಲ್ಲರೂ ಆಹಾರದಿಂದ ಪೂರ್ಣ ಶಕ್ತಿಯನ್ನು ಪಡೆಯುತ್ತಾರೆ.