ಉತ್ತರ ಪ್ರದೇಶ: ಒಬ್ಬರ ಚರ್ಮದ ಬಣ್ಣಕ್ಕೆ ಸಂಬಂಧಿಸಿದ ವರ್ಣಭೇದ ನೀತಿಯು ಪ್ರಪಂಚದಾದ್ಯಂತ ಇನ್ನೂ ಅಸ್ತಿತ್ವದಲ್ಲಿದೆ. ಆದರೆ, ವರನ ಮೈಬಣ್ಣದ ಕಾರಣದಿಂದ ಮದುವೆಗೆ ಕೆಲವು ದಿನಗಳ ಮೊದಲು ವಧು ತನ್ನ ಮದುವೆಯನ್ನು ನಿಲ್ಲಿಸಿದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ?
ಹೌದು, ಉತ್ತರ ಪ್ರದೇಶದ ಬರೇಲಿಯಲ್ಲಿ ಇಂತಹದೊಂದು ಘಟನೆ ನಡೆದಿದ್ದು, ವರನನ್ನು ಮದುವೆಯಾಗಲು ಸಿದ್ಧವಾಗಿದ್ದ ಯುವತಿ ಆತನ ಚರ್ಮದ ಬಣ್ಣದಿಂದಾಗಿ ನಿಶ್ಚಯವಾಗಿದ್ದ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾಳೆ.
ವರದಿಗಳ ಪ್ರಕಾರ, ದೆಹಲಿಯ ನಿಹಾಲ್ ವಿಹಾರ್ನ ದುರ್ಗಾ ಪ್ರಸಾದ್ ಮತ್ತು ಬರೇಲಿಯ ಮಹಿಳೆ ನಡುವೆ ಮದುವೆಯ ಎಲ್ಲಾ ವಿಧಿವಿಧಾನಗಳನ್ನು ನಿಗದಿಪಡಿಸಲಾಗಿತ್ತು. ಆದಾಗ್ಯೂ, ಪ್ರಸಾದ್ ಅನ್ನು ಯುವತಿ ಒಂದು ಕಾರ್ಯಕ್ರಮದಲ್ಲಿ ನೋಡಿದ್ದು, ಆತನ ಮೈ ಬಣ್ಣ ಕಂಡು ನನಗೆ ಈ ಮದುವೆ ಬೇಡ ಎಂದು ಕ್ಯಾನ್ಸಲ್ ಮಾಡಿದ್ದಾಳೆ.
ʻಅವನು ಅವಿದ್ಯಾವಂತ ಮತ್ತು ‘ಸುಂದರನಲ್ಲ’ ಎಂದು ಕರೆದ ಅವಳು ಅವನ ಚರ್ಮದ ಬಣ್ಣವನ್ನು ಹೀಯ್ಯಾಳಿಸಿದ್ದಾಳೆ. ಕಪ್ಪು ಹುಡುಗನನ್ನು ಮದುವೆಯಾದ್ರೆ, ನನ್ನ ಸ್ನೇಹಿತರು ಗೇಲಿ ಮಾಡುತ್ತಾರೆ ಎಂದು ಆರೋಪಿಸಿದ್ದಾಳೆ. ಇನ್ನೂ ಮದುವೆಯಾಗಲು ಮುಂದುವರೆದರೆ, ಮದುವೆಗೂ ಮುನ್ನ ಮನೆ ಬಿಟ್ಟು ಓಡಿಹೋಗುವುದಾಗಿ ದುರ್ಗಾಪ್ರಸಾದ್(ವರ)ಗೆ ಬೆದರಿಕೆ ಹಾಕಿದ್ದಾಳೆ. ಇಷ್ಟೆಲ್ಲಾ ಮಾತುಗಳನ್ನು ಕೇಳಿದ ವರನೇ ಮದುವೆಯಾಗುವುದನ್ನು ರದ್ದುಗೊಳಿಸಿದ್ದಾನೆ.
ವರನೇ ನನ್ನನ್ನುಮದುವೆಯಾಗಲು ನಿರಾಕರಿಸಿದನು ಎಂದು ಯುವತಿ ಕುಟುಂಬ ತಿಳಿಸಿದ್ದಾಳೆ. ಆಕೆಯ ಹೇಳಿಕೆಗಳ ಬಗ್ಗೆ ವಿಚಾರಿಸದೇ, ಆಕೆಯ ಕುಟುಂಬದವರು ವರನ ವಿರುದ್ಧ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾರೆ. ಇನ್ನೂ, ವಧುವಿನ ಮನೆಯವರು ಧರ್ಮಶಾಲೆಗೆ ಕರೆದೊಯ್ದು 2 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ವರನ ಕುಟುಂಬ ಆರೋಪಿಸಿದೆ. ಇದಕ್ಕೆ ಮಣಿಯಲು ನಿರಾಕರಿಸಿದ ನಂತರ ಅವರು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ವಿಷಯವು ಈಗ ನ್ಯಾಯಾಲಯದ ಮೆಟ್ಟಿಲೇರಿದ್ದು ತನಿಖೆ ಮುಂದುವರೆದಿದೆ.
BIG NEWS : 2023ರ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪುಟಿನ್ ಭಾರತಕ್ಕೆ ಭೇಟಿ?: ರಷ್ಯಾದ ಶೆರ್ಪಾ ಹೇಳಿದ್ದೇನು?
BREAKING NEWS : ಸರ್ವಪಕ್ಷ ಸಭೆ ಬಗ್ಗೆ ಇಂದು ಸಿದ್ದರಾಮಯ್ಯ, ಹೆಚ್ ಡಿಕೆ ಜೊತೆಗೆ ಚರ್ಚೆ : ಸಿಎಂ ಬೊಮ್ಮಾಯಿ
BIG NEWS : 2023ರ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪುಟಿನ್ ಭಾರತಕ್ಕೆ ಭೇಟಿ?: ರಷ್ಯಾದ ಶೆರ್ಪಾ ಹೇಳಿದ್ದೇನು?
BIGG NEWS: ಬೆಂಗಳೂರಿನಲ್ಲಿ ಮಹಾಪಾಪಿ ಗಂಡ ತನ್ನ ಹೆಂಡ್ತಿಯನ್ನೇ ಸ್ನೇಹಿತರೊಂದಿಗೆ ಮಲಗಿಸಿ ವಿಡಿಯೋ ಚಿತ್ರೀಕರಣ