ಬೆಂಗಳೂರು: 2025-26ನೇ ಸಾಲಿನಲ್ಲಿ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಅಗತ್ಯವಿರುವ ಔಷಧಿ ಖರೀದಿಗೆ ರಾಜ್ಯ ಸರ್ಕಾರ ಅನುಮತಿ ನೀಡಿ ಆದೇಶಿಸಿದೆ.
ಈ ಸಂಬಂಧ ನಡವಳಿಯನ್ನು ಹೊರಡಿಸಲಾಗಿದ್ದು, State Therapeutic Committee (STC)ಯು ಅಂತಿಮಗೊಳಿಸಿದ ಔಷಧಿಗಳ ಪಟ್ಟಿಯನ್ನು ಆಧರಿಸಿ, ರಾಜ್ಯದ ಎಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯ ಆರೋಗ್ಯ ಸಂಸ್ಥೆಗಳು ಮತ್ತು ಕಾರಾಗೃಹಗಳ ಆಸ್ಪತ್ರೆಗಳು ವಾರ್ಷಿಕ ಔಷಧ ಬೇಡಿಕೆಗಳನ್ನು ಔಷಧ ತಂತ್ರಾಂಶದ ಮೂಲಕ ಇಂಡೆಂಟ್‌ಅನ್ನು ಪಡೆದು ಕ್ರೋಢೀಕರಿಸಲಾಗಿರುತ್ತದೆ. ತರುವಾಯ, ಅನುಮೋದಿತ ಔಷಧ ಪಟ್ಟಿಯನ್ನು 2025-26ರ ಖರೀದಿ ವರ್ಷಕ್ಕೆ ಅಂದಾಜು ಮಾಡಿದ ಬಜೆಟ್‌ನೊಂದಿಗೆ ಸಲ್ಲಿಸಿರುತ್ತಾರೆ. ಅವಶ್ಯಕತೆ ನಿರ್ಧರಣಾ ಸಮಿತಿಯಲ್ಲಿ (Need Assessment Committee) ಅನುಮೋದನೆಯ ನಂತರ, 2025-2026ರ ವಾರ್ಷಿಕ ಔಷಧ ಇಂಡೆಂಟ್ ಅನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ, ಕಳೆದ ವರ್ಷದ ಇಂಡೆಂಟ್ ಪ್ರೊಕ್ಯೂರ್ಮೆಂಟ್ ಸೈಕಲ್ 2022- 2023 ರಲ್ಲಿ 732 ಔಷಧಗಳಿಗೆ ಹೋಲಿಸಿದರೆ ಒಟ್ಟು 1094 ಔಷಧಿಗಳನ್ನು ಸಂಗ್ರಹಕ್ಕಾಗಿ ಪುಸ್ತಾಪಿಸಲಾಗಿದೆ. ಈ ವಿಸ್ತರಿತ ಪಟ್ಟಿಯಲ್ಲಿ 908 ಔಷಧಗಳು ಮತ್ತು 186 ವೈದ್ಯಕೀಯ ಉಪಭೋಗ್ಯ ವಸ್ತುಗಳನ್ನು ಒಳಗೊಂಡಿದೆ, ಇದನ್ನು 543 ಅಗತ್ಯ (Essential) ಮತ್ತು 551 ಅಪೇಕ್ಷಣೀಯ (Desirable) ವಸ್ತುಗಳು ಎಂದು ವರ್ಗೀಕರಿಸಲಾಗಿದೆ. ಇದರ ಪುಸ್ತಾವಿತ ಖರೀದಿ ವೆಚ್ಚ .983.58 ಕೋಟಿಗಳಾಗುತ್ತದೆ.
ಪ್ರಸ್ತುತ ವಾರ್ಷಿಕ ಇಂಡೆಂಟ್‌ನಲ್ಲಿ ಸೇರಿಸಲಾದ 908 ಔಷಧಗಳಲ್ಲಿ, ಹಿಂದಿನ ವರ್ಷದ ಪಟ್ಟಿಗೆ ಹೋಲಿಸಿದರೆ 397 ಹೊಸ ಸೇರ್ಪಡೆಗಳಾಗಿವೆ. ಹೆಚ್ಚಿನ ಪರೀಕ್ಷೆಯ ನಂತರ, ಈ 228 ಔಷಧಗಳನ್ನು ಈಗಾಗಲೇ IPHS ಮತ್ತ NLEM ಪಟ್ಟಿ ಮಾಡಲಾಗಿರುತ್ತದೆ (198 ವಿಭಿನ್ನ ಪ್ರಮಾಣದಲ್ಲಿ/ಸೂತ್ರೀಕರಣಗಳಲ್ಲಿ ಮತ್ತು 30 ಅನ್ನು NLEM ನಲ್ಲಿ ಪ್ರತ್ಯೇಕವಾಗಿ ಶಿಫಾರಸು ಮಾಡಲಾಗಿದೆ). ಆದ್ದರಿಂದ, ವಾರ್ಷಿಕ ಇಂಡೆಂಟ್ ಪಟ್ಟಿಯಲ್ಲಿ ಕೇವಲ 169 ಔಷಧಗಳನ್ನು ನಿಜವಾದ ಹೊಸ ಸೇರ್ಪಡೆಗಳೆಂದು ಪರಿಗಣಿಸಲಾಗಿರುತ್ತದೆ.
ಇದಲ್ಲದೆ, 1094 ಔಷಧಗಳನ್ನು ತಮಿಳುನಾಡು ವೈದ್ಯಕೀಯ ಸರಬರಾಜು ನಿಗಮದ (TNMSCL) ಖರೀದಿ ಪಟ್ಟಿಯೊಂದಿಗೆ ಹೋಲಿಸಿದಾಗ 776 ಔಷಧಗಳು TNMSCL ಸಂಗ್ರಹಿಸಿದವುಗಳೊಂದಿಗೆ ಹೊಂದಿಕೆಯಾಗುತ್ತವೆ ತಿಳಿದುಬಂದಿರುತ್ತದೆ. ಉಳಿದ 318 ಔಷಧಗಳಲ್ಲಿ 102 ಔಷಧಗಳು IPHS ಪಟ್ಟಿಯ ಭಾಗವಾಗಿದೆ ಮತ್ತು ಇತರ 5 ನಿರ್ಣಾಯಕ ಔಷಧಗಳನ್ನು (Critical Drugs) ಸಹ ಪರಿಗಣಿಸಲಾಗಿದೆ. ಇತರ 216 ಔಷಧಗಳು IPHS/NLEM ಅಥವಾ TNMSCL ಖರೀದಿ ಪಟ್ಟಿಯಲ್ಲಿರದಿರುವ ಔಷಧಗಳಾಗಿರುತ್ತದೆ. ಆದ್ದರಿಂದ ಅದನ್ನು ಈಗ ತಡೆಹಿಡಿಯಲು ನಿರ್ಧರಿಸಲಾಗಿದೆ. ಇವುಗಳ ಖರೀದಿಗಾಗಿ State Therapeutic Committee (STC) ಪುನರ್ ಪರಿಶೀಲಿಸಿ ವರದಿ ನೀಡುವುದು. ಮೇಲಿನ ವಿಶ್ಲೇಷಣೆಯ ಆಧಾರದ ಮೇಲೆ, ವಾರ್ಷಿಕ ಇಂಡೆಂಟ್ ಖರೀದಿ ಪ್ರಸ್ತಾಪವನ್ನು 883 ಔಷಧಿಗಳಿಗೆ ಅಂದಾಜು ಮೌಲ್ಯ .838.13 ಕೋಟಿ ಯಂತೆ ಅಂತಿಮಗೊಳಿಸಲಾಗಿದೆ.
ಈ ತರ್ಕಬದ್ಧ ವಿಧಾನವು ಕರ್ನಾಟಕದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಚಿಕಿತ್ಸೆಯ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕ್ಲಿನಿಕಲ್ ಪಸ್ತುತತೆ, ಆರ್ಥಿಕ ವಿವೇಕ ಮತ್ತು ರಾಷ್ಟ್ರೀಯ ನೀತಿ ಚೌಕಟ್ಟುಗಳೊಂದಿಗೆ ಹೊಂದಾಣಿಕೆಯನ್ನು ಖಾತ್ರಿಗೊಳಿಸುತ್ತದೆ ಎಂದಿದೆ.
BREAKING: ICSE, ISCಯ 10, 12ನೇ ತರಗತಿ ಇಂಪ್ರೂವ್‌ಮೆಂಟ್ ಪರೀಕ್ಷೆ-2025ರ ಫಲಿತಾಂಶ ಪ್ರಕಟ