ಬೆಂಗಳೂರು: ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಗುತ್ತಿಗೆ ನೌಕರರಾಗಿ ಸಾವಿರಾರು ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗೆ ಕಾರ್ಯನಿರ್ವಹಿಸುತ್ತಿರುವಂತ NHM ಸಿಬ್ಬಂದಿಗಳಿಗೆ ಎರಡು ತಿಂಗಳು ಕಳೆದರು ವೇತನ ಪಾವತಿಯಾಗಿಲ್ಲ. ಹೀಗಾಗಿ ವೇತನವಿಲ್ಲದೇ ಆರೋಗ್ಯ ಇಲಾಖೆಯ ಎನ್ ಹೆಚ್ ಎಂ ನೌಕರರು ಸಂಕಷ್ಟ ಎದುರಿಸುವಂತೆ ಆಗಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ NHM ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷರಾದಂತ ಶ್ರೀಕಾಂತ ಸ್ವಾಮಿ ಅವರು, ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗಳಿಗೆ ಆಗಸ್ಟ್ ತಿಂಗಳಿಂದ ಈ ವರೆಗೂ ವೇತನವೇ ಆಗಿಲ್ಲ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಜುಲೈ ತಿಂಗಳಿಂದ ವೇತನ ಆಗದೇ ಸಿಬ್ಬಂದಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.
ಈ ಬಾರಿ ಸರ್ಕಾರವು ಎನ್ ಹೆಚ್ ಎಂ ನೌಕರರಿಗೆ ವೇತನ ಪಾವತಿಸದ ಕಾರಣ, ದೀಪಾವಳಿ ಹಬ್ಬವನ್ನು ಕತ್ತಲ ಬದುಕಿನಲ್ಲಿ ಆಚರಿಸುವಂತೆ ಆಗಿದೆ. ರಾಜ್ಯ ಸರ್ಕಾರವು ಕೂಡಲೇ ಇತ್ತ ಗಮನ ಹರಿಸಬೇಕು. ದೀಪಾವಳಿ ಒಳಗಾಗಿ ವೇತನ ಆಗದೇ ಇದ್ದಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಲು ತೀರ್ಮಾನಿಸಲಾಗಿರುವುದಾಗಿ ಹೇಳಿದರು.
ಈ ಸಿಬ್ಬಂದಿಗಳಿಗೆ ಸರಕಾರಿ ನೌಕರರಿಗೆ ಇರುವಂತೆ ಹೆಚ್ಚಿನ ವೇತನ ಇಲ್ಲ. ಸರಕಾರಿ ನೌಕರರಿಗೆ ಒಂದು ತಿಂಗಳು ವಿಳಂಬ ಆದರೂ ಸುಧಾರಿಸಿಕೊಳ್ಳುತ್ತಾರೆ. ಆದರೆ ಈ ಕಡಿಮೆ ವೇತನ ಪಡೆಯುವ ಗುತ್ತಿಗೆ ಸಿಬ್ಬಂದಿಗಳು ತಮ್ಮ ಮನೆ ಬಾಡಿಗೆ ಮತ್ತು ಬ್ಯಾಂಕ್ EMI, ಕಟ್ಟುವುದಾದರೂ ಹೇಗೆ ? ದಸರಾ ಹಬ್ಬ ಕಳೆದಿದ್ದಾರೆ. ಇನ್ನೂ ಸಹ ವೇತನ ಇಲ್ಲದೇ ದೀಪಾವಳಿ ಹಬ್ಬ ಆಚರಣೆ ಹೇಗೆ? ಎಂದು ಸಂಘದ ಗೌರವ ಅಧ್ಯಕ್ಷರಾದಂತ ಆಯನೂರು ಮಂಜುನಾಥ್ ಅವರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಹಿರಿಯ ಅಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ ಸಿಬ್ಬಂದಿಗಳಿಗೆ ದೀಪಾವಳಿ ಹಬ್ಬದ ಸಮಯಕ್ಕಾದರೂ ಬಾಕಿ ವೇತನ ಪಾವತಿಸುವಂತೆ ವಿಧಾನ ಪರಿಷತ್ ಪರಿಷತ್ ಸದಸ್ಯ ಎಸ್ ವಿ ಸಂಕನೂರು ಅವರು ಆರೋಗ್ಯ ಇಲಾಖೆ ಸಚಿವದಿನೇಶ್ ಗುಂಡೂರಾವ್ ಹಾಗೂ ಅಧಿಕಾರಿ ವರ್ಗದವರನ್ನು ಬೇಟಿ ಮಾಡಿ ಒತ್ತಾಯಿಸಿದ್ದಾರೆ.
ಇದಕ್ಕೆ ಆರೋಗ್ಯ ಸಚಿವರು ಪ್ರತಿಕ್ರಿಯೆ ನೀಡಿದ್ದು K2 SPARSH ತಾಂತ್ರಿಕ ಕಾರಣವೇ ವೇತನಕ್ಕೆ ಪಾವತಿಗೆ ವಿಳಂಬ ಆಗಿದ್ದೂ ಮುಂದಿನ ವಾರ ಜಿಲ್ಲೆಗಳಿಗೆ ಅನುದಾನ ಬಿಡುಗಡೆ ಮಾಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ. ಹೀಗಾಗಿ ಮುಂದಿನ ವಾರದಲ್ಲಿ ಆರೋಗ್ಯ ಇಲಾಖೆಯ ಎನ್ ಹೆಚ್ ಎಂ ಗುತ್ತಿಗೆ ನೌಕರರಿಗೆ ಎರಡು ತಿಂಗಳ ಬಾಕಿ ವೇತನ ಪಾವತಿ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
‘ACF, RFO, DRF ನೇಮಕಾತಿ’ಗೆ ‘ಬಿಎಸ್ಸಿ ಅರಣ್ಯಶಾಸ್ತ್ರ ಪದವಿ’ ಕಡ್ಡಾಯಗೊಳಿಸಿ: ವಿದ್ಯಾರ್ಥಿಗಳ ಒತ್ತಾಯ
BIG NEWS: ಪ್ರಿಯಕರನ ಜೊತೆ ಓಡಿ ಹೋದ ಪುತ್ರಿ: ಶೃದ್ದಾಂಜಲಿ ಬ್ಯಾನರ್ ಹಾಕಿ, ಇಡೀ ಊರಿಗೆ ತಿಥಿ ಊಟ ಹಾಕಿಸಿದ ತಂದೆ