ಮೈಸೂರು : ಸದನದಲ್ಲಿ ಕಾಂಗ್ರೆಸ್ ಸದಸ್ಯರು ರಾಜ್ಯಪಾಲರನ್ನು ಅಡ್ಡಗಟ್ಟಿದ ಆರೋಪದ ವಿಚಾರವಾಗಿ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಘಟನೆ ಯ ಬಗ್ಗೆ ವಿವರಣೆ ನೀಡಿದ್ದಾರೆ. ಕೊಡಲಿ ಬಿಡಿ ಅಂದು ಏನು ನಡೆಯಿತು ಎಂಬುದರ ಬಗ್ಗೆ ವಿವರಿಸಬಹುದು, ರಾಷ್ಟ್ರಪತಿಗಳಿಗೆ ರಾಜ್ಯಪಾಲರು ವಿವರಣೆ ನೀಡಬಹುದು ನಾವೇನು ಈ ಬಗ್ಗೆ ವಿವರಣೆ ಕೊಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ನಾಳೆ ಗಣರಾಜ್ಯೋತ್ಸವದಲ್ಲೂ ರಾಜ್ಯಪಾಲರು ಭಾಷಣ ಮಾಡಬೇಕಿದೆ ನಾವು ಬರೆದುಕೊಟ್ಟ ಭಾಷಣವನ್ನು ರಾಜ್ಯಪಾಲರು ಗಣರಾಜ್ಯೋತ್ಸವ ಭಾಷಣದಲ್ಲಿ ಓದಬೇಕು ಎಂಬ ನಿಯಮ ಇಲ್ಲ. ಅದರಲ್ಲಿ ಕೆಲವು ಬದಲಾವಣೆಗಳನ್ನು ಕೂಡ ಮಾಡಿಕೊಳ್ಳಬಹುದು. ರಾಜ್ಯಪಾಲರು ನಾಳೆ ಏನು ಮಾಡುತ್ತಾರೋ ನಮಗೆ ಗೊತ್ತಿಲ್ಲ. ಜಂಟಿ ಅಧಿವೇಶನದಲ್ಲಿ ಮಾತ್ರ ಸರ್ಕಾರದ ಭಾಷಣ ಓದುವ ನಿಯಮವಿದೆ. ಸರ್ಕಾರ ಬರೆದುಕೊಟ್ಟ ಭಾಷಣ ಓದಬೇಕು ಅನು ನಿಯಮ ಇದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಮಾಜಿ ಸಚಿವ ಎಚ್ ಡಿ ರೇವಣ್ಣ ಬಂಧನ ಪ್ರಕರಣದ ವಿಚಾರವಾಗಿ ನಾವು ಯಾವತ್ತೂ ಯಾರ ಪ್ರಕರಣದಲ್ಲೂ ತಲೆಹಾಕುವುದಿಲ್ಲ ಕಾನೂನಿನ ಪ್ರಕಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಸುಮ್ಮನೆ ಅವರು ಏನೇನೋ ಸುಳ್ಳು ಹೇಳುತ್ತಾರೆ ಅಷ್ಟೇ ನಾವೇಕೆ ಎಸ್ ಡಿ ರೇವಣ್ಣ ಅವರ ಮೇಲೆ ದ್ವೇಷ ಮಾಡೋದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.








