ಹಾಸನ : ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೆಡಿಎಸ್ ವಲಯದಲ್ಲಿ SIT ಅಧಿಕಾರಿಗಳು ಸಲ್ಲಿಸಿದ್ದ ಚಾರ್ಜ್ ಶೀಟ್ ಇದೀಗ ಭಾರಿ ಸಂಚಲನ ಮೂಡಿಸಿದೆ. ಚಾರ್ಜ್ ಶೀಟ್ ನಲ್ಲೂ ಜೆಡಿಎಸ್ ಕಾರ್ಯಕರ್ತರ ಹೆಸರು ಸಹ ಇದೀಗ SIT ಉಲ್ಲೇಖ ಮಾಡಿದೆ.
ಆರೋಪಿಗಳ ಪಟ್ಟಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಹೆಸರು ಉಲ್ಲೇಖಿಸಲಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಜೊತೆಗೆ ಜೆಡಿಎಸ್ ಕಾರ್ಯಕರ್ತರ ಹೆಸರು ಉಲ್ಲೇಖಿಸಲಾಗಿದೆ. ಶಾಸಕ ಸ್ವರೂಪ ಚಿಕ್ಕಪ್ಪ ಹರ್ಷ ಪುತ್ರ ರೇವಂತ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದ್ದು, ರೇವಂತ ಸ್ನೇಹಿತ ಎಂಸಿ ಹರೀಶ್, ಜೆಡಿಎಸ್ ಕಾರ್ಯಕರ್ತ ಬುವನಹಳ್ಳಿಯ ಮಂಜು ಅಲಿಯಾಸ್ ವಸಂತ ಕುಮಾರ್, ಬಾಲಸುಬ್ರಮಣ್ಯ ಜಯಸೂರ್ಯ ಸೇರಿ 7ಕ್ಕೂ ಹೆಚ್ಚು ಜನರ ಹೆಸರು ಉಲ್ಲೇಖಿಸಲಾಗಿದೆ.
ಪ್ರಜ್ವಲ್ ಅಶೀಲ ವಿಡಿಯೋ ವೈರಲ್ ಆರೋಪ ಪ್ರಕರಣದ A30 ಜೆಡಿಎಸ್ ಶಾಸಕ ಸ್ವರೂಪ ಚಿಕ್ಕಪ್ಪನ ಮಗ ರೇವಂತ್ A33 ಮಂಜು A35 ಬಾಲಸುಬ್ರಮಣ್ಯ A36 ಚಿರಂತ್ A38 ಜಯಸೂರ್ಯ A28 ಹರೀಶ್ ಹೆಸರು ಉಲ್ಲೇಖಿಸಲಾಗಿದೆ. ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರಿಂದಲೇ ವಿಡಿಯೋ ವೈರಲ್ ಮಾಡಿರುವ ಆರೋಪ ಕೇಳಿ ಬಂದಿದ್ದು, ಬಿಜೆಪಿ ಕಾಂಗ್ರೆಸ್ ವಿರುದ್ಧ ಜೆಡಿಎಸ್ ನಾಯಕರು ಆರೋಪ ಮಾಡಿದ್ದಾರೆ. ಎಸ್ಐಟಿ ಅಧಿಕಾರಿಗಳ ತನಿಖೆ ಬಳಿಕ ಸ್ಫೋಟಕವಾದ ಮಾಹಿತಿ ಬಯಲಾಗಿದೆ. ಜೆಡಿಎಸ್ ಕಾರ್ಯಕರ್ತರ ಹೆಸರು ಉಲ್ಲೇಖಿಸಿದ್ದು ಇದೀಗ ಅಚ್ಚರಿಕೆ ಕಾರಣವಾಗಿದೆ.








