ಬೆಂಗಳೂರು : ಪ್ರಸಕ್ತ ವರ್ಷದ 5 ತಿಂಗಳಲ್ಲಿ ರಾಜ್ಯದ ಅರಣ್ಯ ಪ್ರದೇಶದಲ್ಲಿ ಆನೆಗಳ ಸಾವು ಹಾಗೂ ವನ್ಯ ಜೀವಿ ಹಾಗೂ ಮಾನವ ಸಂಘರ್ಷದಲ್ಲಿ ಸಾವನ್ನಪ್ಪಿದವರ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿರುವ ಅರಣ್ಯ ಇಲಾಖೆ, ಜನವರಿಯಿಂದ ಮೇ ತಿಂಗಳವರೆಗೆ ರಾಜ್ಯದಲ್ಲಿ 25 ಆನೆಗಳು ಹಾಗೂ 26 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.
ರಾಜ್ಯದ ಅರಣ್ಯದಲ್ಲಿ ಸಾವನ್ನಪ್ಪಿರುವ 25 ಆನೆಗಳ ಪೈಕಿ 23 ಆನೆಗಳು ಸ್ವಾಭಾ ವಿಕವಾಗಿ ಸಾವನ್ನಪ್ಪಿದ್ದರೆ, 2 ಆನೆಗಳು ಬೇಟೆ ಅಥವಾ ಬೇರೆ ಕಾರಣದಿಂದ ಅಸಹಜ ಸಾವ ನ್ನಪ್ಪಿವೆ. ವನ್ಯಜೀವಿ ದಾಳಿಯಿಂದ 26 ಜನ ಸಾವನ್ನಪ್ಪಿದ್ದು, ಅದರಲ್ಲಿ ಆನೆ ದಾಳಿಯಿಂದ 22 ಜನ ಮೃತಪಟ್ಟಿದ್ದಾರೆ.
ಎಷ್ಟು ಆನೆಗಳ ಸಾವು?
ಜನವರಿಯಲ್ಲಿ 2, ಫೆಬ್ರುವರಿಯಲ್ಲಿ 6, ಮಾರ್ಚ್ 8 ಏಪ್ರಿನಲ್ಲಿ 3, ಮೇನಲ್ಲಿ 6, ಸೇರಿದಂತೆ ಒಟ್ಟು ಇಲ್ಲಿಯವರೆಗೆ ಅಂದರೆ ಐದು ತಿಂಗಳಿನಲ್ಲಿ 25 ಆನೆಗಳು ಸಾವನ್ನಪ್ಪಿವೆ ಎಂದು ಅರಣ್ಯ ಇಲಾಖೆ ಬಿಡುಗಡೆ ಮಾಡಿರುವಂತಹ ಅಂಕಿ ಅಂಶಗಳಲ್ಲಿ ಬಹಿರಂಗವಾಗಿದೆ.