ಹಾಸನ : ಒಂದು ಕಡೆ ರಾಜ್ಯ ಸರ್ಕಾರ ಆರ್ ಎಸ್ ಎಸ್ ಸೇರಿದಂತೆ ಇತರೆ ಸಂಘಟನೆಗಳ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಹೇಳಿದೆ. ಇನ್ನೊಂದು ಕಡೆ ಆರ್ಎಸ್ಎಸ್ ಶತಮಾನೋತ್ಸವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಆರ್‌ಎಸ್ ಪಥ ಸಂಚಲನ ನಡೆಸುತ್ತಿದ್ದು ಈ ವಿಚಾರವಾಗಿ ಕಾರ್ಕಳ ಬಿಜೆಪಿ ಶಾಸಕ ಸುನಿಲ್ ಕುಮಾರ್ ಮುಂದಿನ ದಿನಗಳಲ್ಲಿ ದೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಕ್ಕರೆ ಆಡಳಿತ ನಡೆಸುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.
ಇಂದು ಹಾಸನದಲ್ಲಿ ಕಾರ್ಕಳದ ಬಿಜೆಪಿ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಯಾವ ಸರ್ಕಾರದಿಂದಲೂ ಆರ್ ಎಸ್ ಎಸ್ ಹತ್ತಿಕ್ಕಲು ಸಾಧ್ಯವಿಲ್ಲ. ಕೊರೋನ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಶಾಖೆ ಮಾಡಿದ್ದೆವು. ಮೈದಾನ ಇಲ್ಲ ಅಂದರೆ ಆರ್ಎಸ್ಎಸ್ ಅನ್ನು ನಿಲ್ಲಿಸಲು ಆಗುತ್ತದ? ರಾಷ್ಟ್ರೀಯ ಸ್ವಯಂಸೇವಕ ಅಂದರೆ ಒಂದು ಕುಟುಂಬ, ಒಂದು ಪರಿವಾರ ಇದ್ದಂತೆ. ನಮಗೆ ಮೈದಾನವೇ ಬೇಕು ಅಂತ ಏನು ಇಲ್ಲ. ರಾಷ್ಟ್ರೀಯ ಸ್ವಯಂಸೇವಕರೇ ಮುಂದೆ ಆಡಳಿತವನ್ನು ನಡೆಸುತ್ತಾರೆ. ಇದು ನಿಮಗೆ ಗೊತ್ತಿರಲಿ ಅಷ್ಟೇ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿಗೆ ನೀಡಿದರು.