ಬೆಂಗಳೂರು : ಇಡೀ ದೇಶದಲ್ಲಿ ಹಿಂದುಳಿದ ವರ್ಗಗಳ ಅತಿ ದೊಡ್ಡ ನಾಯಕ ಅಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ಸಿಎಂ ಸಿದ್ದರಾಮಯ್ಯ ಎಂದೂ ಕೂಡ ರಾಷ್ಟ್ರ ರಾಜಕಾರಣಕ್ಕೆ ಬರಲ್ಲ ಎಂದು ಒಬಿಸಿ ಘಟಕದ ಸದಸ್ಯ ಹಾಗು ಕಾಂಗ್ರೆಸ್ MLC ಬಿಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ರಾಹುಲ್ ಗಾಂಧಿ ಮಾತ್ರ ಹಿಂದುಳಿದವರ ಮಾತಾಡುತ್ತಿರುವುದು. ದೇಶದಲ್ಲಿ ಓಬಿಸಿ ನಾಯಕ ಸಿಎಂ ಆಗಿರುವುದು ಸಿದ್ದರಾಮಯ್ಯ ಒಬ್ಬರೇ. ರಾಹುಲ್ ಗಾಂಧಿಗೆ ಬೆಂಬಲ ನೀಡಲು ಸಿದ್ದರಾಮಯ್ಯ ದೆಹಲಿಗೆ ತೆರಳುತ್ತಿದ್ದಾರೆ. ಸಿದ್ದರಾಮಯ್ಯನವರ ಕಾರ್ಯಕ್ರಮಗಳು ಜನರಿಗೆ ಮುಟ್ಟಿದೆ ಈ ವರ್ಚಸ್ಸು ಬಳಸಿಕೊಂಡು ಧೈರ್ಯ ತುಂಬ ಕೆಲಸ ಆಗುತ್ತದೆ ಎಂದು ಎಂಎಲ್‌ಸಿ ಬಿಕೆ ಹರಿಪ್ರಸಾದ್ ತಿಳಿಸಿದರು.
ಇಡೀ ದೇಶದಲ್ಲಿ ದೊಡ್ಡ ಹಿಂದುಳಿದ ನಾಯಕರು ಅಂದರೆ ಸಿಎಂ ಸಿದ್ದರಾಮಯ್ಯ ಇವರ ವರ್ಚಸ್ಸನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷದ ಬೇರೆ ಕಾರ್ಯಕರ್ತರಿಗೂ ಸಹ ಒಂದು ಧೈರ್ಯ ತುಂಬುವ ಕೆಲಸ ಕಾಂಗ್ರೆಸ್ ಪಕ್ಷ ಸಕ್ರಿಯವಾಗಿ ಮಾಡುತ್ತಿದೆ ದೇಶದಲ್ಲಿ ಇರುವಂತಹ ಜನಸಾಮಾನ್ಯರ ನಾಯಕ ಎಂದು ರಾಜ್ಯಗಳಲ್ಲಿ ಗುರುತಿಸಿಕೊಂಡು ಬಡವರ ಕಾರ್ಯಕ್ರಮಗಳನ್ನು ಹಮ್ಮಿಕೊಂಡವರು ಸಿಎಂ ಸಿದ್ದರಾಮಯ್ಯ ಜನಪ್ರಿಯರಾಗಿದ್ದಾರೆ.ಗ್ಯಾರಂಟಿ ಯೋಜನೆ ಸೇರಿದಂತೆ ಹಲವು ಯೋಜನೆಗಳು ಜನರಿಗೆ ಮುಟ್ಟಿದೆ. ಜನಸಾಮಾನ್ಯರಿಗೆ ಅನುಕೂಲ ಆಗಲಿ ಎಂದು ಗ್ಯಾರಂಟಿ ಜಾರಿ ಮಾಡಿದ್ದು, ಬೇರೆ ಮುಖ್ಯಮಂತ್ರಿಗಳು ಮತ್ತು ಈ ಮುಖ್ಯಮಂತ್ರಿಗಳು ಬಹಳ ವ್ಯತ್ಯಾಸವಿದೆ. ಹಣಕಾಸಿನ ಸಚಿವರಾಗಿ ಸುಮಾರು 16 ಬಜೆಟ್ ಮಂಡಿಸಿದ್ದಾರೆ ಎಂದರು.
ದೇಶದಲ್ಲಿ ಇರುವಂತಹ 50% ಜನಸಂಖ್ಯೆಯಲ್ಲಿ ಅವರಿಗೆ ದೊರಕಬೇಕಾದ ಸವಲತ್ತುಗಳು ಸೌಲಭ್ಯಗಳು ಎನ್ನುವ ಕೊರತೆ ಕೂಗು ಎಲ್ಲಾ ಸಮುದಾಯದಲ್ಲೂ ಕೂಡ ಇದೆ. ಅದರ ಪರವಾಗಿ ಧ್ವನಿ ಎತ್ತಿರುವ ರಾಹುಲ್ ಗಾಂಧಿಯವರು. ಎಲ್ಲಾ ಹಿಂದುಳಿದ ವರ್ಗಗಳ ನಾಯಕರು ರಾಹುಲ್ ಅವರ ಜೊತೆ ಸೇರಿ ನಿಲ್ಲಬೇಕು ಎನ್ನುವುದಾಗಿದೆ. ಕೇವಲ ಸಿದ್ದರಾಮಯ್ಯ ಅಷ್ಟೇ ಅಲ್ಲದೆ ಹಿಂದುಳಿದ ಎಲ್ಲ ನಾಯಕರು ರಾಹುಲ್ ಗಾಂಧಿ ಅವರಿಗೆ ಧೈರ್ಯ ತುಂಬಿ ನಾವು ನಿಮ್ಮ ಜೊತೆಗೆ ಇದ್ದೇವೆ ಮುನ್ನಡೆಯಿರಿ ಎಂದು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.