Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೆಆರ್‌ಎಸ್ ಅಣೆಕಟ್ಟಿನ ನೀರಿನ ಮಟ್ಟ 90 ಅಡಿಗೆ ಕುಸಿತ, ಬೆಂಗಳೂರು ಸೇರಿದಂತೆ ಹಳೇ ಮೈಸೂರು ಭಾಗಕ್ಕೆ ಜಲಕ್ಷಾಮದ ಭೀತಿ

ALERT : ಐಸ್ ಕ್ರೀಮ್ ಪ್ರಿಯರೇ ಎಚ್ಚರ : ತಪ್ಪದೇ ಇದನ್ನೊಮ್ಮೆ ಓದಲೇಬೇಕು | Ice cream

ವಾಸ್ತು ಸರಿಯಾಗಿದ್ರೆ… ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿ ನೆಲೆಸುತ್ತದೆ! ಆ ಬಗ್ಗೆ ಈ ಸುದ್ದಿ ಓದಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜಕೀಯದಲ್ಲಿ ವೈರಿಗಳು- ಹಿತೈಷಿಗಳು ಇಬ್ಬರೂ ಇರುತ್ತಾರೆ, ನನಗೆ ದೇವರ ಆಶೀರ್ವಾದವಿದೆ : ಸಿಎಂ ಸಿದ್ದರಾಮಯ್ಯ
KARNATAKA

ರಾಜಕೀಯದಲ್ಲಿ ವೈರಿಗಳು- ಹಿತೈಷಿಗಳು ಇಬ್ಬರೂ ಇರುತ್ತಾರೆ, ನನಗೆ ದೇವರ ಆಶೀರ್ವಾದವಿದೆ : ಸಿಎಂ ಸಿದ್ದರಾಮಯ್ಯ

By ಸುರೇಶ್‌

ಮೈಸೂರು : ಮುಡಾ ಹಗರಣದ ಸಂಕಷ್ಟದ ನಡುವೆ ಕೂಡ ಕ್ಷಮಿಸಿದ್ದರಾಮಯ್ಯ ಅವರು ಮೂರು ದಿನಗಳ ಕಾಲ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಆಯುಧ ಪೂಜೆ ವಿಜಯದಶಮಿ ಹಾಗೂ ಇಂದು ನಡೆವ ಜಂಬೂ ಸವಾರಿ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳ ಅಲ್ಲಿ ಅವರು ಭಾಗವಹಿಸಲಿದ್ದಾರೆ. ಇಂದು ಮೈಸೂರಿನ ಮಂಡಕಳ್ಳಿ ಏರ್ಪೋರ್ಟ್ ನಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ವೈರಿಗಳು ಇರುತ್ತಾರೆ ಹಿತೈಷಿಗಳು ಕೂಡ ಇರುತ್ತಾರೆ, ನನಗೆ ದೇವರ ಆಶೀರ್ವಾದವಿದೆ ಎಂದರು.

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ಧರಾಮಯ್ಯ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಡಿನ ಜನರಿಗೆ ದಸರಾ ಹಬ್ಬದ ಶುಭಾಶಯಗಳು ತಿಳಿಸಿದ ಸಿಎಂ ಸಿದ್ದರಾಮಯ್ಯ ಅವರು, ನಾಳೆ ನಡೆಯುವ ಜಂಬೂಸವಾರಿಯಲ್ಲಿ ನಾನು ಭಾಗವಹಿಸುತ್ತೇನೆ. ಸುಧೀರ್ಘವಾಗಿ ಹೆಚ್ಚು ಬಾರಿ ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡುತ್ತಿದ್ದೇನೆ. ನಾಡಿನ ಜನ ಹಾಗೂ ದೇವರ ಆಶೀರ್ವಾದದಿಂದ ಪುಷ್ಪರ್ಚನೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ನನ್ನ ಮೇಲೆ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಸದಾ ಇರುತ್ತದೆ. ಜನರು ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅದಕ್ಕೆ ಇಷ್ಟೊಂದು ಬಾರಿ ಪುಷ್ಪಾರ್ಚನೆ ಮಾಡಲು ಅವಕಾಶ ಸಿಕ್ಕಿದೆ. ದೇವರ ಆಶೀರ್ವಾದ ಇದ್ದಿದ್ದಕ್ಕೆ ಇಷ್ಟು ವರ್ಷ ರಾಜಕೀಯದಲ್ಲಿ ಇದ್ದೇನೆ. ಹೊಗಳುವವರು ಇರುತ್ತಾರೆ ತೆಗಳುವವರು ಇರುತ್ತಾರೆ. ಪ್ರಜಾಪ್ರಭುತ್ವದಲ್ಲಿ ಆರೋಗ್ಯಕರ ಚರ್ಚೆ ಆಗಬೇಕು ಸಿದ್ದರಾಮಯ್ಯ ತಿಳಿಸಿದರು.

ಹಳೆ ಹುಬ್ಬಳ್ಳಿ ಗಲಭೆ ಕೆಸ್ ವಾಪಸ್ ಪಡೆದ ವಿಚಾರವಾಗಿ ಈ ಬಗ್ಗೆ ಪರಿಶೀಲನೆ ಮಾಡುತ್ತೇನೆ ಬಿಜೆಪಿ ಯಾವಾಗಲೂ ಸುಳ್ಳು ವಿಚಾರಕ್ಕೆ ಹೋರಾಟ ಮಾಡುತ್ತದೆ ಹಾಗಾಗಿ ಈ ಬಗ್ಗೆ ಪರಿಶೀಲನೆ ಮಾಡಿದ ನಂತರ ಮಾತನಾಡುತ್ತೇನೆ. ಜಾಹೀರಾತಿನ ಕುರಿತು ವಿಪಕ್ಷಗಳು ಟೀಕಿಸುವ ವಿಚಾರವಾಗಿ ಮಾತನಾಡಿದ ಅವರು, ವಿಜಯನಗರದ ಅರಸರು ವಿಜಯದ ಸಂಕೇತವಾಗಿ ದಸರಾ ಆಚರಿಸುತ್ತಿದ್ದರು. ಮೈಸೂರು ಅರಸರು ಕೂಡ ಅದನ್ನೇ ಮುಂದುವರೆಸಿದರು. ಇವತ್ತು ಕೂಡ ಅದೇ ಸಂಪ್ರದಾಯ ಮುಂದುವರೆದಿದೆ. ಜಾಹೀರಾತನ್ನು ಇವತ್ತಿಗೆ ನೀವು ಹೇಗೆ ವ್ಯಾಖ್ಯಾನ ಮಾಡ್ತೀರಾ ಹಾಗೆ ಎಂದು ತಿರುಗೇಟು ಕೊಟ್ಟರು.

Share. Facebook Twitter LinkedIn WhatsApp Email

Related Posts

ಕೆಆರ್‌ಎಸ್ ಅಣೆಕಟ್ಟಿನ ನೀರಿನ ಮಟ್ಟ 90 ಅಡಿಗೆ ಕುಸಿತ, ಬೆಂಗಳೂರು ಸೇರಿದಂತೆ ಹಳೇ ಮೈಸೂರು ಭಾಗಕ್ಕೆ ಜಲಕ್ಷಾಮದ ಭೀತಿ

3 Mins Read

ವಾಸ್ತು ಸರಿಯಾಗಿದ್ರೆ… ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿ ನೆಲೆಸುತ್ತದೆ! ಆ ಬಗ್ಗೆ ಈ ಸುದ್ದಿ ಓದಿ

2 Mins Read

BIG NEWS : GBA ಚುನಾವಣೆ ನಡೆಸುವ ವಿಚಾರ : ಮತ್ತೆ 3 ತಿಂಗಳ ಕಾಲಾವಕಾಶ ಕೇಳಿದ ರಾಜ್ಯ ಸರ್ಕಾರ

1 Min Read
Recent News

ಕೆಆರ್‌ಎಸ್ ಅಣೆಕಟ್ಟಿನ ನೀರಿನ ಮಟ್ಟ 90 ಅಡಿಗೆ ಕುಸಿತ, ಬೆಂಗಳೂರು ಸೇರಿದಂತೆ ಹಳೇ ಮೈಸೂರು ಭಾಗಕ್ಕೆ ಜಲಕ್ಷಾಮದ ಭೀತಿ

ALERT : ಐಸ್ ಕ್ರೀಮ್ ಪ್ರಿಯರೇ ಎಚ್ಚರ : ತಪ್ಪದೇ ಇದನ್ನೊಮ್ಮೆ ಓದಲೇಬೇಕು | Ice cream

ವಾಸ್ತು ಸರಿಯಾಗಿದ್ರೆ… ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿ ನೆಲೆಸುತ್ತದೆ! ಆ ಬಗ್ಗೆ ಈ ಸುದ್ದಿ ಓದಿ

BIG NEWS : GBA ಚುನಾವಣೆ ನಡೆಸುವ ವಿಚಾರ : ಮತ್ತೆ 3 ತಿಂಗಳ ಕಾಲಾವಕಾಶ ಕೇಳಿದ ರಾಜ್ಯ ಸರ್ಕಾರ

State News
KARNATAKA

ಕೆಆರ್‌ಎಸ್ ಅಣೆಕಟ್ಟಿನ ನೀರಿನ ಮಟ್ಟ 90 ಅಡಿಗೆ ಕುಸಿತ, ಬೆಂಗಳೂರು ಸೇರಿದಂತೆ ಹಳೇ ಮೈಸೂರು ಭಾಗಕ್ಕೆ ಜಲಕ್ಷಾಮದ ಭೀತಿ

By ಅವಿನಾಶ್‌ ಆರ್‌ ಭೀಮಸಂದ್ರ KARNATAKA 3 Mins Read

ಮಂಡ್ಯ: ಕರ್ನಾಟಕದ ಜೀವನದಿನಿ ಕಾವೇರಿ ನದಿಯ ಆಶ್ರಯದಲ್ಲಿರುವ ಜಿಲ್ಲೆಗಳಿಗೆ ಈಗ ಆತಂಕದ ದಿನಗಳು ಶುರುವಾಗಿವೆ. ರಾಜ್ಯದಲ್ಲಿ ಸೂರ್ಯನ ತಾಪಮಾನ ದಿನದಿಂದ…

ವಾಸ್ತು ಸರಿಯಾಗಿದ್ರೆ… ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿ ನೆಲೆಸುತ್ತದೆ! ಆ ಬಗ್ಗೆ ಈ ಸುದ್ದಿ ಓದಿ

BIG NEWS : GBA ಚುನಾವಣೆ ನಡೆಸುವ ವಿಚಾರ : ಮತ್ತೆ 3 ತಿಂಗಳ ಕಾಲಾವಕಾಶ ಕೇಳಿದ ರಾಜ್ಯ ಸರ್ಕಾರ

BREAKING : ಗ್ರಾಹಕರಿಗೆ ಸಿಹಿಸುದ್ದಿ : ಪ್ರಧಾನಿ ಮೋದಿ ಕರೆ ಬೆನ್ನಲ್ಲೆ, ಅಡುಗೆ ಎಣ್ಣೆ ದರದಲ್ಲಿ ಭಾರಿ ಇಳಿಕೆ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.