ಮೈಸೂರು : ಕುಡಿದ ನಶೆಯಲ್ಲಿ ಮನುಷ್ಯ ತಾನು ಏನು ಮಾಡುತ್ತೇನೆ ಎನ್ನುವುದು ತನಗೆ ಅರಿವು ಇರುವುದಿಲ್ಲ. ಇದೀಗ ಇಂಥದ್ದೇ ಘಟನೆ ಮೈಸೂರಿನಲ್ಲಿ ನಡೆದಿದ್ದು, ಕುಡಿದ ನಶೆಯಲ್ಲಿ ಬಂದು ಬಳಿಕ ಮನೆಯವರ ಬಳಿ ಗಲಾಟೆ ಮಾಡಿ ಮತ್ತೆ ಕುಡಿಯೋಕೆ ಹಣ ಕೇಳಿದ್ದಾನೆ, ಈ ವೇಳೆ ಗಲಾಟೆ ಮಧ್ಯದಲ್ಲಿ ಬೀಡಿ ಸೇದಿ ಮನೆಯ ಬೆಡ್ ಮೇಲೆ ಇಟ್ಟ ಪರಿಣಾಮ ಆ ಒಂದು ಚಿಕ್ಕ ಬಿಡಿಎ ಕಡೆಯಿಂದ ಇಡೀ ಮನೆ ಹೊತ್ತಿ ಹೊಡೆದಿರುವ ಘಟನೆ ಮೈಸೂರಿನ ಅಗ್ರಹಾರದ ಮಧುವನ ಬಡಾವಣೆಯಲ್ಲಿ ನಡೆದಿದೆ.
ಹೌದು ಕುಡಿದ ಅಮಲಿನಲ್ಲಿ ತನ್ನ ಮನೆಗೆ ತಾನೇ ಬೆಂಕಿ ಇಟ್ಟ ಕಿಡಿಗೇಡಿ, ಮೈಸೂರಿನ ಮಧುವನ ಬಡಾವಣೆಯಲ್ಲಿ ಈ ಒಂದು ಘಟನೆ ನಡೆದಿದೆ. ಬೆಳಿಗ್ಗೆ ಕುಡಿದು ಬಂದು ಮತ್ತೆ ಕೊಡಲು ಹಣ ಕೇಳಿದ್ದ. ಮನೆಯವರ ಜೊತೆ ಗಲಾಟೆ ಮಾಡಿಕೊಂಡು ಬಿಡಿ ಸೇದುತ್ತಿದ್ದ ಗುರು ಎಂಬ ವ್ಯಕ್ತಿ ಕುಡಿದ ನಶೆಯಲ್ಲಿ ಬಿಡಿ ಸೇದಿ ಬೆಡ್ ಮೇಲೆ ಇಟ್ಟಿದ್ದ. ಹಾಸಿಗೆ ಹೊತ್ತಿಕೊಂಡಿದ್ದ ಬೆಂಕಿ ಇಡೀ ಮನೆಗೆ ವ್ಯಾಪಿಸಿದೆ. ಮನೆಯವರು ಬೆಂಕಿ ನಂದಿಸಲು ಯತ್ನಿಸಿದರು ಕೂಡ ಅದು ಸಾಧ್ಯವಾಗಿಲ್ಲ. ಕ್ಷನಾರ್ಧದಲ್ಲಿ ಬೆಂಕಿ ಹತ್ತಿಕೊಂಡು ಇಡೀ ಮನೆ ಅಗ್ನಿಗಾಹುಯಾಗಿದೆ. ಬಟ್ಟೆ, ದವಸ ಧಾನ್ಯ ಗೃಹಪಯೋಗಿ ವಸ್ತುಗಳು ಬೆಂಕಿಗೆ ಆಹುತಿ ಆಗಿವೆ.