ಮಂಡ್ಯ: ಮಕ್ಕಳು ಬೇಕೆಂಬ ಹಂಬಲ ತಣಿಸುವ ಉತ್ಸವಆವೆಂದೇ ಹೆಸರುವಾಸಿಯಾಗಿರುವ ಮೇಲುಕೋಟೆ ಚೆಲುವ ನಾರಾಯಣಸ್ವಾಮಿಯ (Melukote Cheluva Narayanaswamy) ತೊಟ್ಟಿಲ ಮಡುಜಾತ್ರೆ ನ 3ರಂದು ನಡೆಯಲಿದೆ.
ಇದೇ ವೇಳೆ ರಾಜಮುಡಿ ಅಷ್ಟತೀರ್ಥೋತ್ಸವವೂ ಆರಂಭವಾಗಲಿದ್ದು, ಅಂದು ಬೆಳಿಗ್ಗೆ 8ರಿಂದ ರಾತ್ರಿ 9ರವರೆಗೆ ಗ್ರಾಮದಲ್ಲಿ ಉತ್ಸವಗಳು ನೆರವೇರಿಲಿವೆ. ಗ್ರಾಮದ ಒಳಗೆ ಮತ್ತು ಸುತ್ತಮುತ್ತಲು ಇರುವ 8 ಕಲ್ಯಾಣಿಗಳಲ್ಲಿ ದೇವರ ಪಾದುಕೆಗಳಿಗೆ ಅಭಿಷೇಕ ನಡೆಯಲಿದೆ.
ಗ್ರಾಮದ ಸಮೀಪ ಇರುವ ತೊಟ್ಟಿಲಮಡು ಸಮೀಪ ಅಂದು ಸಂಜೆ ಜಾತ್ರೆ ಸೇರುವುದು ವಾಡಿಕೆ. ಜಾತ್ರೆಯಲ್ಲಿ ಮಕ್ಕಳಾಗದ ವಿವಾಹಿತರು ಹರಕೆಹೊರುವ ಸಂಪ್ರದಾಯವಿದೆ. ಸಂತಾನಭಾಗ್ಯ ಕರುಣಿಸುವ ಜಾತ್ರೆ ಎನ್ನುವ ಕಾರಣಕ್ಕೆ ತೊಟ್ಟಿಲಮಡು ಜಾತ್ರೆಗೆ ವಿಶೇಷ ಪ್ರಾಮುಖ್ಯತೆ ಇದೆ. ಗ್ರಾಮದಲ್ಲಿ ಅ 29ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ನ 2ರಂದು ರಾತ್ರಿ 7 ಗಂಟೆಗೆ ರಾಜಮುಡಿ ಉತ್ಸವ ನಡೆಯಲಿದೆ. ಇದು ಸತತ 10 ದಿನಗಳ ಅವಧಿಯ ಉತ್ಸವವಾಗಿದೆ.
ರಾಜಮುಡಿ ಉತ್ಸವದಲ್ಲಿ ಪಾಲ್ಗೊಳ್ಳಲು ಕರ್ನಾಟಕದ ವಿವಿಧೆಡೆಗಳಿಂದ ಜನರು ಆಗಮಿಸುತ್ತಾರೆ. ಪ್ರತಿ ವರ್ಷ ಉತ್ಸವದ ಸಂದರ್ಭದಲ್ಲಿ ಮಂಡ್ಯದ ಜಿಲ್ಲಾ ಖಜಾನೆಯಲ್ಲಿರುವ ರಾಜಮುಡಿ ಕಿರೀಟವನ್ನು ಪೊಲೀಸ್ ಭದ್ರತೆಯಲ್ಲಿ ಮೇಲುಕೋಟೆಗೆ ತರುವುದು ವಾಡಿಕೆ. ನಂತರ ಮೆರವಣಿಯಲ್ಲಿ ಕಿರೀಟವನ್ನು ದೇಗುಲಕ್ಕೆ ತಂದು ಸ್ಥಾನಿಕರು, ಮತ್ತು ಅರ್ಚಕರು ಪರಿಶೀಲಿಸುತ್ತಾರೆ. ವೈರಮುಡಿ ಉತ್ಸವದಲ್ಲಿ ಸಾಗಿಬರುವ ಚಲುವ ನಾರಾಯಣ ಸ್ವಾಮಿಯನ್ನು ನೋಡುವುದೇ ಕಣ್ಣಿಗೆ ಹಬ್ಬ