Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮನುಷ್ಯನ ಸಾವಿನ ನಂತರ ತಕ್ಷಣವೇ ಈ ಅಂಗವು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ !

12/02/2026 1:08 PM

ಭಾರತ-ಅಮೇರಿಕಾ ವ್ಯಾಪಾರ ಒಪ್ಪಂದ: ರಫ್ತು ಹೆಚ್ಚಳದಿಂದ ಹೆಚ್ಚುವರಿ 90 ಬಿಲಿಯನ್ ಡಾಲರ್ ದಾಟಬಹುದು: SBI ವರದಿ

12/02/2026 1:08 PM

ವಿದ್ಯಾರ್ಥಿಗಳೇ ಗಮನಿಸಿ : ನೀವು ಅನಾರೋಗ್ಯ ಅಥ್ವಾ ಬೇರೆ ಕಾರಣದಿಂದ ‘ಪರೀಕ್ಷೆ’ ಬರೆಯದಿದ್ರೆ ಏನಾಗುತ್ತೆ ಗೊತ್ತಾ ?

12/02/2026 12:54 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕಲಬುರಗಿಯಲ್ಲಿ ಮರ್ಯಾದಾ ಹತ್ಯೆ ಕೇಸ್ : ಹೆತ್ತ ಮಗಳನ್ನ ಸುಟ್ಟು ಕೊಂದ ತಂದೆ ಸೇರಿ ಮೂವರು ಅರೆಸ್ಟ್
KARNATAKA

ಕಲಬುರಗಿಯಲ್ಲಿ ಮರ್ಯಾದಾ ಹತ್ಯೆ ಕೇಸ್ : ಹೆತ್ತ ಮಗಳನ್ನ ಸುಟ್ಟು ಕೊಂದ ತಂದೆ ಸೇರಿ ಮೂವರು ಅರೆಸ್ಟ್

By kannadanewsnow0531/08/2025 7:50 AM

ಕಲಬುರ್ಗಿ : ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನ ತಂದೆ ಹಾಗೂ ಕುಟುಂಬಸ್ಥರು ಸೇರಿ ಹತ್ಯೆ ಮಾಡಿ ಸುಟ್ಟು ಹಾಕಿರುವ ಘಟನೆಗೆ ಸಂಬಂಧಿಸಿದಂತೆ ಇದೀಗ ಪೊಲೀಸರು ತಂದೆ ಸೇರಿದಂತೆ ಮೂವರನ್ನು ಅರೆಸ್ಟ್ ಮಾಡಿದ್ದಾರೆ.

ಘಟನೆ ತಿಳಿದು ಗ್ರಾಮಕ್ಕೆ ಭೇಟಿ ನೀಡಿದ ಪೊಲೀಸರು ಮೃತಳ ತಂದೆ ಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಾವೇ ಕೊಂದಿರುವುದಾಗಿ ಹೇಳಿದ್ದಾರೆ.ಹೀಗಾಗಿ, ಪ್ರಕರಣ ದಾಖಲಿಸಿಕೊಂಡು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಸ್ಥಳಕ್ಕೆ ಸೊಕೋ ತಂಡವನ್ನು ಕಳುಹಿಸಲಾಗಿದೆ. ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ಮಾಡಲಾಗುತ್ತಿದೆ.

ಘಟನೆ ಹಿನ್ನೆಲೆ?

ಮೃತಪಟ್ಟ ಯುವತಿ ಕವಿತಾ ಎಂಬುದು ಗೊತ್ತಾಗಿದೆ. ಗ್ರಾಮದಲ್ಲಿ ಪೋಷಕರೊಂದಿಗೆ ವಾಸವಾಗಿದ್ದಳು. ತಂದೆ ಶಂಕರ್ ಕೊಳ್ಳೂರ್ ಕೃಷಿಕ. ಶಂಕರ್​ಗೆ ಐವರು ಹೆಣ್ಣು ಮಕ್ಕಳಿದ್ದು, ಇಬ್ಬರಿಗೆ ಮದುವೆ ಮಾಡಿ ಕೊಟ್ಟಿದ್ದಾರೆ. ಕೊಲೆಯಾದ 18 ವರ್ಷದ ಕವಿತಾ ನಾಲ್ಕನೆಯವಳು. ಪಿಯುಸಿ ಮುಗಿಸಿ ನರ್ಸಿಂಗ್ ಓದುತಿದ್ದಳು. ಕವಿತಾ ತನ್ನ ಗ್ರಾಮದ ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು. ಇವರಿಬ್ಬರ ಲವ್ ವಿಚಾರ ಮನೆಯವರಿಗೆ ಕಳೆದ ಮೂರು ತಿಂಗಳ ಹಿಂದೆ ಗೊತ್ತಾಗಿತ್ತು.

ಮಗಳ ಪ್ರೀತಿಗೆ ತಂದೆ-ತಾಯಿಯ ವಿರೋಧ ಇತ್ತು. ತಂದೆ ಶಂಕರ್ ಹಲವಾರು ಬಾರಿ ಮಗಳಿಗೆ ಬುದ್ದಿವಾದ ಹೇಳಿದ್ದಾರೆ‌. ಆ ಯುವಕನನ್ನು ಬಿಟ್ಟುಬಿಡು ಅಂತ ಒತ್ತಾಯ ಮಾಡಿದ್ದಾರೆ. ಆದರೂ ಕವಿತಾ ಮಾತ್ರ ಲವ್ ಮಾಡಿದ್ದೇನೆ, ಆತನನ್ನೇ ಮದುವೆ ಆಗುವುದಾಗಿ ಹಠ ಹಿಡಿದಿದ್ದಳು. ಎಷ್ಟೇ ಬುದ್ದಿ ಹೇಳಿದರೂ ಕೇಳದೇ ಇದ್ದಾಗ, ಮಾನ ಮರ್ಯಾದೆಗೆ ಅಂಜಿ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಗಿ ತಂದೆ ಒಪ್ಪಿಕೊಂಡಿದ್ದಾರೆ. ಮಗಳನ್ನು ಕೊಲೆ ಮಾಡಿದ ಬಳಿಕ ಕ್ರಿಮಿನಾಶಕವನ್ನು ಮಗಳ ಬಾಯಿ ಮೇಲೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಿ ಜನರಿಗೆ ಹೇಳಿದ್ದಾರೆ.

ತರಾತುರಿಯಲ್ಲಿ ತನ್ನ ಸಹೋದರನ ಜಮೀನಿನಲ್ಲಿ ಮೃತದೇಹ ಸುಟ್ಟು ಅಂತ್ಯಸಂಸ್ಕಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಸುಮೊಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಇದಕ್ಕೆ ಇಬ್ಬರು ಸಹಾಯ ಮಾಡಿದ್ದಾರೆ ಎಂದು ಗೊತ್ತಾಗಿದೆ. ಒಟ್ಟು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಡಿ. ತಿಳಿಸಿದರು.

Share. Facebook Twitter LinkedIn WhatsApp Email

Related Posts

ಮನುಷ್ಯನ ಸಾವಿನ ನಂತರ ತಕ್ಷಣವೇ ಈ ಅಂಗವು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ !

12/02/2026 1:08 PM2 Mins Read

MLC ಯತೀಂದ್ರ ವಿರುದ್ಧ ಪೋಸ್ಟ್ : ಬಿಜೆಪಿ ಐಟಿ ಸೆಲ್, ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ದೂರು ಸಲ್ಲಿಕೆ

12/02/2026 12:53 PM1 Min Read

BIG NEWS : ಬೆಂಗಳೂರು ಜನತೆ ಗಮನಕ್ಕೆ : ಬೇಸಿಗೆಯಲ್ಲಿ ಕಾವೇರಿ ನೀರು ಪೋಲು ಮಾಡಿದರೆ 5 ಸಾವಿರ ರೂ ದಂಡ ಫಿಕ್ಸ್!

12/02/2026 12:34 PM1 Min Read
Recent News

ಮನುಷ್ಯನ ಸಾವಿನ ನಂತರ ತಕ್ಷಣವೇ ಈ ಅಂಗವು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ !

12/02/2026 1:08 PM

ಭಾರತ-ಅಮೇರಿಕಾ ವ್ಯಾಪಾರ ಒಪ್ಪಂದ: ರಫ್ತು ಹೆಚ್ಚಳದಿಂದ ಹೆಚ್ಚುವರಿ 90 ಬಿಲಿಯನ್ ಡಾಲರ್ ದಾಟಬಹುದು: SBI ವರದಿ

12/02/2026 1:08 PM

ವಿದ್ಯಾರ್ಥಿಗಳೇ ಗಮನಿಸಿ : ನೀವು ಅನಾರೋಗ್ಯ ಅಥ್ವಾ ಬೇರೆ ಕಾರಣದಿಂದ ‘ಪರೀಕ್ಷೆ’ ಬರೆಯದಿದ್ರೆ ಏನಾಗುತ್ತೆ ಗೊತ್ತಾ ?

12/02/2026 12:54 PM

ನಾಳೆ ಪ್ರಧಾನಿ ಮೋದಿಯಿಂದ ಹೊಸ ಕಚೇರಿ ಸೇವಾ ತೀರ್ಥ ಮತ್ತು ಕರ್ತವ್ಯ ಭವನ ಉದ್ಘಾಟನೆ

12/02/2026 12:53 PM
State News
KARNATAKA

ಮನುಷ್ಯನ ಸಾವಿನ ನಂತರ ತಕ್ಷಣವೇ ಈ ಅಂಗವು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ !

By kannadanewsnow5712/02/2026 1:08 PM KARNATAKA 2 Mins Read

ಒಬ್ಬ ವ್ಯಕ್ತಿ ಸತ್ತಾಗ ದೇಹದ ಎಲ್ಲಾ ಅಂಗಗಳು ಒಮ್ಮೆಗೇ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವುದಿಲ್ಲ. ಪ್ರತಿಯೊಂದು ಅಂಗವು ಅದರ ಆಮ್ಲಜನಕದ ಅವಶ್ಯಕತೆಗಳು ಮತ್ತು…

MLC ಯತೀಂದ್ರ ವಿರುದ್ಧ ಪೋಸ್ಟ್ : ಬಿಜೆಪಿ ಐಟಿ ಸೆಲ್, ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ದೂರು ಸಲ್ಲಿಕೆ

12/02/2026 12:53 PM

BIG NEWS : ಬೆಂಗಳೂರು ಜನತೆ ಗಮನಕ್ಕೆ : ಬೇಸಿಗೆಯಲ್ಲಿ ಕಾವೇರಿ ನೀರು ಪೋಲು ಮಾಡಿದರೆ 5 ಸಾವಿರ ರೂ ದಂಡ ಫಿಕ್ಸ್!

12/02/2026 12:34 PM

ಗಮನಿಸಿ : 10 ವರ್ಷ ಹಳೆಯ ಆಧಾರ್ ಕಾರ್ಡ್ ಗೆ `ಬಯೋಮೆಟ್ರೀಕ್ ನವೀಕರಣ’ ಕಡ್ಡಾಯ !

12/02/2026 12:34 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.