ಹಾಸನ : ಹಾಸನ ಜಿಲ್ಲೆಯಲ್ಲಿ ಮಳೆಯ ಆರ್ಭಟಕ್ಕೆ ಭಾರಿ ಅವಾಂತರ ಸೃಷ್ಟಿಯಾಗಿದ್ದು, ನಿಯಂತ್ರಣ ತಪ್ಪಿ ಮೀನು ಸಾಗಿಸುತ್ತಿದ್ದ ಲಾರಿ ಒಂದು ಪಲ್ಟಿಯಾಗಿದೆ. ಹಾಸನ ಜಿಲ್ಲೆಯ ರಾಟೆ ಮನೆ ಬಳಿ ಈ ಒಂದು ಅಪಘಾತ ನಡೆದಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಮೀನು ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿದೆ. KA-20 AB-4796 ನಂಬರಿನ ಲಾರಿ ಅಪಘಾತವಾಗಿದ್ದು, ಕೆಲ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.