ಹಾಸನ : ಕಳೆದ ಎರಡು ದಿನಗಳ ಹಿಂದೆ ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಎಂಬಲ್ಲಿ ಗಣೇಶ ಮೆರವಣಿಗೆ ವೇಳೆ ಲಾರಿಯ ನಿರಂತರಣ ತಪ್ಪಿ ಮೆರವಣಿಗೆ ವೇಳೆ ಡ್ಯಾನ್ಸ್ ಮಾಡುತ್ತಿದ್ದವರ ಮೇಲೆ ಹರಿದು 10 ಜನರು ಸಾವನ್ನಪ್ಪಿರುವ ಘಟನೆ ನಡೆದಿತ್ತು. ಇದೀಗ ಈ ಒಂದು ಘಟನೆಗೆ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ ಎಂದು ಶಾಸಕ ಎಚ್ ಡಿ ರೇವಣ್ಣ ಗಂಭೀರವಾಗಿ ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹತ್ತು ಜನರ ಸಾವಿಗೆ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣವಾಗಿದೆ. ಉಸ್ತುವಾರಿ ಸಚಿವರು ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಘಟನೆಯ ದಿನ 500 ಮೀಟರ್ ಇರೋದು ಹಿಂದೆ ಬ್ಯಾರಿಕೆಡ್ ಹಾಕಬಹುದಾಗಿತ್ತು. ಸೂಕ್ತ ಕ್ರಮ ಕೈಗೊಂಡಿದ್ದರೆ, 10 ಜನರ ಜೀವ ಉಳಿಯುತ್ತಿತ್ತು.
ಮೃತ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ಕೊಡಲಿ 10 ರಿಂದ 15 ಲಕ್ಷ ಪರಿಹಾರ ಕೊಡಬೇಕು. ಗೃಹ ಸಚಿವರು ಬೇಕಿದ್ದರೆ ಸ್ಥಳ ಪರಿಶೀಲನೆ ನಡೆಸಲಿ ಎಲ್ಲೆಂದರಲ್ಲಿ ಮದ್ಯದ ಅಂಗಡಿಗೆ ಓಪನ್ ಮಾಡಲು ಲೈಸೆನ್ಸ್ ಕೊಡಗೂಡದು. ಮೊಸಳೆ ಹೊಸಳ್ಳಿಯಲ್ಲಿ ಕೇವಲ ಹಂಪ್ ಹಾಕಿದರೆ ಸಾಕಾಗುವುದಿಲ್ಲ ಬೈಪಾಸ್ ಅಥವಾ ಫ್ಲೈ ಓವರ್ ನಿರ್ಮಿಸಬೇಕು ಎಂದು ಜೆಡಿಎಸ್ ಶಾಸಕ ಎಚ್.ಡಿ ರೇವಣ್ಣ ಹೇಳಿಕೆ ನೀಡಿದರು.