ಹಾಸನ: ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದೆ. ಹೃದಯಾಘಾತದಿಂದ ಸತ್ಯನಾರಾಯಣರಾವ್(63) ಎಂಬುವರು ಸಾವನ್ನಪ್ಪಿದ್ದಾರೆ. ಆಟೋ ಚಾಲನೆ ವೇಳೆಯಲ್ಲೇ ಸತ್ಯನಾರಾಯಣರಾವ್ ಗೆ ಹೃದಯಾಘಾತವಾಗಿದ್ದು, ರಸ್ತೆಯ ಪಕ್ಕದಲ್ಲಿ ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದಾರೆ. ಹೀಗಾಗಿ ಇಂದು ಒಂದೇ ದಿನ ನಾಲ್ವರು ಹೃದಯಾಘಾತಕ್ಕೆ ಬಲಿಯಾದಂತೆ ಆಗಿದ್ದು, ಹಾಸನದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.
ಹಾಸನಾಂಬ ದೇಗುಲದ ಹಿಂಭಾಗದ ರಂಗೋಲಿ ಹಳ್ಳ ಬಡಾವಣೆಯ ನಿವಾಸಿ ಸತ್ಯನಾರಾಯಣರಾವ್ ಎಂಬುವರಿಗೆ ಆಟೋ ಚಲಾಯಿಸುತ್ತಿದ್ದಂತ ವೇಳೆಯಲ್ಲೇ ಹಾರ್ಟ್ ಅಟ್ಯಾಕ್ ಆಗಿದೆ. ಹೀಗಾಗಿ ರಸ್ತೆಯಲ್ಲೇ ಆಟೋ ಚಾಲಕ ಸತ್ಯನಾರಾಯಣರಾವ್ ಬಿದ್ದಿದ್ದಾರೆ. ಅವರನ್ನು ದಾರಿಹೋಕರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಂತ ವೇಳೆಯಲ್ಲೇ ಕೊನೆಯುಸಿರು ಎಳೆದಿದ್ದಾರೆ.
ಹಾಸನದಲ್ಲಿ ಹೃದಯಾಘಾತದಿಂದ ಮರಣ ಮೃದಂಗ ಮುಂದುವರೆದಿದ್ದು ಕಳೆದ 40 ದಿನಗಳಲ್ಲಿ ಇದುವರೆಗೂ 21 ಜನರು ಹೃದಯಘಾತದಿಂದ ಸಾವನಪ್ಪಿದ್ದಾರೆ. ಇದೀಗ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಮಹಿಳೆ ಒಬ್ಬರು ಮನೆಯಲ್ಲಿಯೇ ಕುಸಿದು ಬಿದ್ದು ಸಾವನಪ್ಪಿದ್ದಾರೆ. ಹೌದು ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಜೆಪಿ ನಗರದ ಲೇಪಾಕ್ಷಿ (50) ಎನ್ನುವವರು ಬೆಳಿಗ್ಗೆ ಮನೆಯಲ್ಲಿದ್ದಾಗಲೇ ಸುಸ್ತು ಎಂದು ಕುಸಿದು ಬಿದಿದ್ದರು. ಲೇಪಾಕ್ಷಿ ಅವರನ್ನು ತಕ್ಷಣ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಲೇಪಾಕ್ಷಿ ಸಾವನ್ನಪ್ಪಿದ್ದಾರೆ. ಇದೀಗ ಆಟೋ ಚಾಲಕ ಸತ್ಯನಾರಾಯಣರಾವ್ ಸಾವನ್ನಪ್ಪಿದ್ದು, ಹಾಸನ ಜಿಲ್ಲೆಯಲ್ಲಿ 40 ದಿನಗಳಲ್ಲಿ ಇದುವರೆಗು 22 ಜನ ಬಲಿಯಾದಂತೆ ಆಗಿದೆ.
ನಿಮ್ಮ ಮನೆ ಬಾಗಿಲಿಗೆ ಬರಲಿದೆ ‘ಇ-ಖಾತಾ’: ಜಸ್ಟ್ ಹೀಗೆ ಮಾಡಿ ಸಾಕು | E-Khata
ನಾಳೆ ‘ಗ್ರಾಮೀಣ ಪತ್ರಕರ್ತರ ಬಸ್ ಪಾಸ್’ ದಶಕಗಳ ಕನಸು ನನಸು: KUWJ ಅಧ್ಯಕ್ಷ ಶಿವಾನಂದ ತಗಡೂರು