ಬೀದರ್ : ಶಿವರಾತ್ರಿ ಚಂದಾ ಹಣ ನೀಡದಿದ್ದಕ್ಕೆ ನಾಲ್ಕೈದು ಯುವಕರಿಂದ ಓರ್ವ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಕೇಳಿದಷ್ಟು ಚಂದಾ ಕೊಡದಿದ್ದಕ್ಕೆ ನಾಲ್ಕೈದು ಯುವಕರಿಂದ ಹಲ್ಲೆ ನಡೆದಿದೆ. ಬೀದರ್ ನ ಮೈಲೂರು ಬಡಾವಣೆಯಲ್ಲಿ ಈ ಒಂದು ಚಾಕು ಇರಿದಿರುವ ಘಟನೆ ವರದಿಯಾಗಿದೆ. ಮಹೇಶ್ ಎಂಬ ಯುವಕನಿಗೆ ನಾಲ್ಕೈದು ಯುವಕರು ಚಾಕುವಿನಿಂದ ಇರಿದು ಭೀಕರವಾಗಿ ಹಲ್ಲೆ ಮಾಡಿದ್ದಾರೆ.
ಶಿವರಾತ್ರಿಗೆ 10,000 ಚೆಂದಾ ಕೊಡುವಂತೆ ಯುವಕರು ಮಹೇಶನಿಗೆ ಕೇಳಿದ್ದಾರೆ. ಅಷ್ಟೊಂದು ಹಣ ಕೊಡಲ್ಲ ಅಂದಿದ್ದಕ್ಕೆ ಮಹೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಮಹೇಶ್ ಮೇಲೆ ವಿದ್ಯಾನಗರ ಬಡಾವಣೆ ಯುವಕರು ಹಲ್ಲೆ ಮಾಡಿದ್ದಾರೆ. ಗಾಯಾಳು ಮಹೇಶನನ್ನು ತಕ್ಷಣ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಯುವಕರು ಹಲ್ಲೆ ಮಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಕುರಿತು ಗಾಂಧಿಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








