ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದ್ದು, ಮದುವೆಯಾಗೋದಾಗಿ ನಂಬಿಸಿ, ಯುವಕ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ವೇಳೆ ಮತಾಂತರ ಆಗಲ್ಲ ಎಂದಿದ್ದಕ್ಕೆ ಮದ್ವೆಗೆ ಇದೀಗ ಯುವಕ ನಿರಾಕರಣೆ ಮಾಡಿದ್ದಾನೆ.
ಈ ವೇಳೆ ಯುವಕ ಮತ್ತೊರ್ವ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಈ ಕುರಿತು ಪ್ರಿಯಕರ ಮೊಹಮ್ಮದ್ ಇಶಾಕ್ ವಿರುದ್ಧ ದೂರು ನೀಡಲಾಗಿದೆ. ಸಂತ್ರಸ್ತ ಯುವತಿ ದೂರು ದಾಖಳಿಸಿದ್ದಾಳೆ. ಬೆಂಗಳೂರಿನ HSR ಲೇಔಟ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.