ಬೆಳಗಾವಿ : ಬೆಳಗಾವಿಯಲ್ಲಿ ಘೋರ ಘಟನೆ ನಡೆದಿದ್ದು, ಅಪ್ರಾಪ್ತ ಬಾಲಕಿ ಪ್ರೀತಿಯಲ್ಲಿ ಬಿದ್ದ ಯುವಕರ ಮಧ್ಯ ಗಲಾಟೆ ನಡೆದಿದೆ. ಎರಡು ಗುಂಪುಗಳ ನಡುವೆ ಗಲಾಟೆ ನಡೆದು ನಾಲ್ವರಿಗೆ ಚಾಕು ಇರಿಲಾಗಿದೆ. ಮಹಮ್ಮದ್ ಖಾಜಿ, ಮಹಮ್ಮದ್ ಅಟ್ಮಾಸ್ ಗುಂಪಿನ ಮಧ್ಯೆ ಈ ಒಂದು ಗಲಾಟೆ ನಡೆದಿದ್ದು ಬೆಳಗಾವಿಯ ಅನ್ನಪೂರ್ಣ ವಾಡಿಯ ರಾಯಲ್ ಸ್ಕೂಲ್ ಬಳಿ ಈ ಒಂದು ಘಟನೆ ಸಂಭವಿಸಿದೆ.
ಅಪ್ರಾಪ್ತ ಬಾಲಕಿಯನ್ನು ಇಬ್ಬರು ಯುವಕರು ಪ್ರೀತಿ ಮಾಡುತ್ತಿದ್ದರು. ಆಕೆ ಸಹವಾಸ ಮಾಡಬೇಡ ಅವಳು ನನ್ನ ಫ್ರೆಂಡ್ ಲವ್ವರ್ ಎಂದು ಮೊಹಮ್ಮದ್ ಖಾಜಿ ಜೊತೆಗೆ ಮಹಮ್ಮದ್ ಅಟ್ಮಾಸ್ ಗುಂಪಿನಿಂದ ಗಲಾಟೆ ಆಗಿದೆ. ಗಾಯಗೊಂಡ ಮಹಮ್ಮದ್ ಖಾ mಜಿಯನ್ನು ಬಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಗಲಾಟೆಯಲ್ಲಿ ಉಳಿದ ಇಬ್ಬರಿಗೆ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.