ಬೆಂಗಳೂರು : ಬೆಂಗಳೂರಲ್ಲಿ ಆಂಟಿ ಪ್ರೀತ್ಸೇ ಎಂದು ಅಂಕಲ್ ಒಬ್ಬ ಹಿಂದೆ ಬಿದ್ದು ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ. ನಗರದ ಫ್ಯಾಷನ್ ಡಿಸೈನರ್ ಒಬ್ಬರಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ ತಮಿಳುನಾಡಿನ ಇವಿಪಿ ಫಿಲ್ಮ್ ಸಿಟಿ ಮಾಲೀಕ ಸಂತೋಷ್ ರೆಡ್ಡಿ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಪ್ರೀತಿ ನಿರಕಾರಣೆ ಮಾಡಿದ್ದಕ್ಕೆ ಸಂತೋಷ್ ರೆಡ್ಡಿ ಫ್ಯಾಷನ್ ಡಿಸೈನರ್ ಮೇಲೆ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ. ಈ ಸಂಬಂಧ ಫ್ಯಾಷನ್ ಡಿಸೈನರ್ ಪೊಲೀಸರಿಗೆ ದೂರು ನೀಡಿದ್ದಾರೆ.ಸಂತೋಷ್ ರೆಡ್ಡಿ ತನ್ನ ಕಸೀನ್ ಮದ್ವೆಗೆ ಬಟ್ಟೆ ಬೇಕು ಎಂದು ಫ್ಯಾಷನ್ ಡಿಸೈನರ್‌ನ್ನು ಸಂಪರ್ಕಿಸಿದ್ದರಂತೆ. ಮಗಳು ಭಾವನ್ಯ ರೆಡ್ಡಿಯಿಂದ ಫ್ಯಾಷನ್ ಡಿಸೈನರ್ ಸಂಪರ್ಕ ಮಾಡಿದ್ದನಂತೆ. ಪರಿಚಯ ಸ್ನೇಹಕ್ಕೆ ತಿರುಗಿ, ಫ್ಯಾಮಿಲಿ ಫ್ರೆಂಡ್‍ನಂತೆ ಇದ್ದನಂತೆ. ನಂತರ ನಿಮ್ಮ ಬ್ಯುಸಿನೆಸ್‍ಗೆ ಹೂಡಿಕೆ ಮಾಡ್ತಿನಿ ಎಂದಿದ್ದ. ಅಲ್ಲದೇ ತನ್ನ ಮಗಳು ಭಾವನ್ಯ ರೆಡ್ಡಿಗೆ ಗಂಡು ಇದ್ದರೆ ನೋಡಿ ಎಂದು ಸಂತ್ರಸ್ತೆಗೆ ಇನ್ನಷ್ಟು ಹತ್ತಿರವಾಗಿದ್ದ ಎನ್ನಲಾಗಿದೆ.
ಒಂದು ದಿನ ತನ್ನ ಮಗಳು ನನ್ನ ಜೊತೆ ಮಾತನಾಡುತ್ತಿಲ್ಲ ಎಂದು ಮಹಿಳೆ ಇದ್ದ ಬೆಂಗಳೂರಿನ ನಿವಾಸಕ್ಕೆ ಬಂದಿದ್ದ. ನನಗೆ ನಿಮ್ಮ ಸಹಾಯಬೇಕು ಎಂದು ಭಾವನಾತ್ಮಕವಾಗಿ ಮಾತಾಡಿದ್ದ. ಈ ವೇಳೆ ಫ್ಯಾಷನ್ ಡಿಸೈನರ್ ಸಮಾಧಾನ ಮಾಡಿದ್ದರಂತೆ. ಆಗ ಏಕಾಏಕಿ ನಿನ್ನನ್ನ ಪ್ರೀತಿ ಮಾಡ್ತಿನಿ, ನೀನು ಕೂಡ ಪ್ರೀತಿಸ್ಲೇಬೇಕು ಎಂದು ಗೋಗರೆದಿದ್ದನಂತೆ. ಇದನ್ನ ನಿರಾಕರಿಸಿದಾಗ ಆಕೆಯ ಮೇಲೆ ಹಲ್ಲೆ ಮಾಡಿದ್ದನಂತೆ.ನೀನು ಲವ್ ಮಾಡಿಲ್ಲ ಅಂದ್ರೆ ನಿನ್ನಿಬ್ಬರು ಮಕ್ಕಳನ್ನ ಕೊಂದು ನಿನ್ನನ್ನೂ ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.








