Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೇವಲ ಒಂದು ಗಂಟೆಯಲ್ಲಿ ₹7.6 ಲಕ್ಷ ಕೋಟಿ ಧೂಳೀಪಟ! ಷೇರು ಮಾರುಕಟ್ಟೆಯಲ್ಲಿ ಮಹಾ ಕುಸಿತಕ್ಕೆ ಕಾರಣಗಳೇನು?

19/03/2026 12:15 PM

BREAKING : ಚಿಕ್ಕಮಗಳೂರು : ಯುಗಾದಿ ಹಬ್ಬದ ದಿನವೇ, ಕಾಲಭೈರವೇಶ್ವರ ದೇಗುಲದ ಮುಂದೆ ಕಿಡಿಗೇಡಿಗಳಿಂದ ವಾಮಾಚಾರ!

19/03/2026 12:01 PM

​’ಗಾಡಿ ಮುಂದೆ ಕುದುರೆ ಕಟ್ಟಬೇಡಿ’: ಲಾಲೂ ಪ್ರಸಾದ್ ಯಾದವ್ ಮನವಿ ತಿರಸ್ಕರಿಸಿದ ಕೋರ್ಟ್; ವಿಚಾರಣೆ ವಿಳಂಬಕ್ಕೆ ತಡೆ | Land For Jobs Case

19/03/2026 11:59 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಲ್ಲಿ ‘ಇವಿ ಹಬ್’ ಲೋಕಾರ್ಪಣೆ: ಚಾರ್ಜ್ ಮಾಡುವುದು ಹೇಗೆ? ದರ ಎಷ್ಟು ಗೊತ್ತಾ?
KARNATAKA

ಬೆಂಗಳೂರಲ್ಲಿ ‘ಇವಿ ಹಬ್’ ಲೋಕಾರ್ಪಣೆ: ಚಾರ್ಜ್ ಮಾಡುವುದು ಹೇಗೆ? ದರ ಎಷ್ಟು ಗೊತ್ತಾ?

By kannadanewsnow0902/06/2025 4:08 PM

ಬೆಂಗಳೂರು : ವಿದ್ಯುತ್ ವಾಹನ ಮೂಲ ಸೌಕರ್ಯ ಅಭಿವೃದ್ದಿಯಲ್ಲಿ ದೇಶದಲ್ಲೇ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದ್ದು, ಸುಸ್ಥಿರ ಇಂಧನ ಬಳಕೆಯ ಮಾದರಿಯಲ್ಲೂ ನಮ್ಮದೇ ಮೊದಲ ಹೆಜ್ಜೆಯಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣದ ಬಳಿ ಬೆಸ್ಕಾಂ ಸ್ಥಾಪಿಸಿರುವ ದೇಶದ ಪ್ರಥಮ ಸೌರಶಕ್ತಿ ಸಂಯೋಜಿತ ಸೆಕೆಂಡ್ ಲೈಫ್ ಬ್ಯಾಟರಿ ಇವಿ ಚಾರ್ಜಿಂಗ್ ಕೇಂದ್ರವನ್ನು ಸೋಮವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

“ರಾಜ್ಯದಲ್ಲಿ ಹೆಚ್ಚುತ್ತಿರುವ ಇವಿ ಬೇಡಿಕೆಗೆ ಅನುಕೂಲವಾಗುವಂತೆ ಚಾರ್ಜಿಂಗ್ ಕೇಂದ್ರಗಳು ಹಾಗೂ ಮೂಲ ಸೌಕರ್ಯ ಅಭಿವೃದ್ದಿಗೆ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರ ಬದ್ಧವಾಗಿದೆ. ಅಲ್ಲದೇ, ಇದಕ್ಕೆ ನಮ್ಮ ರಾಜ್ಯದ ‘ಇವಿ ನೀತಿ’ ಹೆಚ್ಚಿನ ಬಲ ತುಂಬಿದೆ. ಇದೀಗ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಇವಿ ಚಾರ್ಜಿಂಗ್ ಸ್ಟೇಷನ್ ಉದ್ಘಾಟಿಸಲಾಗಿದ್ದು, ಇದರಿಂದ ಕ್ಯಾಬ್‌ ಚಾಲಕರು, ಇವಿ ಬಳಕೆ ಮಾಡುತ್ತಿರುವ ಸಾರ್ವಜನಿಕರಿಗೆ ಅನುಕೂಲವಾಗಲಿದೆ,”ಎಂದರು.

“ಬೆಸ್ಕಾಂ, ಜರ್ಮನ್ ಕಾರ್ಪೊರೇಷನ್ ಫಾರ್ ಇಂಟರ್‌ನ್ಯಾಷನಲ್ ಕೋ ಆಪರೇಷನ್ (ಜಿ.ಐ.ಝಡ್.) ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿರುವ ಬೃಹತ್ ಇವಿ ಚಾರ್ಜಿಂಗ್ ಹಬ್‌ನಲ್ಲಿ 23 ವಾಹನಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡಬಹುದಾಗಿದೆ. ಈ ಸ್ಟೇಷನ್‌ನಲ್ಲಿ ಸೌರ ವಿದ್ಯುತ್ತನ್ನು ಹಳೆಯ ಕಾರ್ ಬ್ಯಾಟರಿಗಳಲ್ಲಿ ಶೇಖರಣೆ ಮಾಡಲಾಗುತ್ತದೆ. ಹಗಲಿನಲ್ಲಿ ಸೋಲಾರ್‌ ವಿದ್ಯುತ್‌ ಉತ್ಪಾದಿಸಿ ಅದನ್ನು ಬ್ಯಾಟರಿ ವ್ಯವಸ್ಥೆಯ ಸಹಾಯದಿಂದ ದಿನದ 24 ಗಂಟೆಯೂ ಇವಿ ವಾಹನಗಳಿಗೆ ಸರಬರಾಜು ಮಾಡಲಾಗುತ್ತದೆ,” ಎಂದು ಇಂಧನ ಸಚಿವರು ತಿಳಿಸಿದರು.

“ದೇಶದಲ್ಲೇ ವಿದ್ಯುತ್ ವಾಹನ ಮೂಲ ಸೌಕರ್ಯ ಅಭಿವೃದ್ದಿಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಕರ್ನಾಟಕದಲ್ಲಿ ಒಟ್ಟು 5,880 ಇವಿ ಚಾರ್ಜಿಂಗ್‌ ಸ್ಟೇಷನ್‌ಗಳಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 4,462 ಇವಿ ಚಾರ್ಜಿಂಗ್ ಸ್ಟೇಷನ್‌ಗಳಿವೆ. ಈ ವರ್ಷ ಹೊಸದಾಗಿ 140 ಚಾರ್ಜರ್‌ಗಳನ್ನು ಅಳವಡಿಸಲಾಗಿದೆ ” ಎಂದು ವಿವರಿಸಿದರು.

ಚಾರ್ಜಿಂಗ್‌ ಸ್ಟೇಷನ್‌ ವಿಶೇಷತೆಗಳೇನು?

ಇವಿ ಹಬ್‌ನ ವಿಶೇಷತೆಯನ್ನು ವಿವರಿಸಿದ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ್‌, “24 ಗಂಟೆಗಳ ಕಾಲ ಇವಿ ಚಾರ್ಜಿಂಗ್‌ ಸೌಲಭ್ಯ ನೀಡುವ ದೇಶದ ಮೊದಲ ಚಾರ್ಜಿಂಗ್‌ ಸ್ಟೇಷನ್‌ ಇದಾಗಿದೆ. ಈ ಹಬ್‌ನಲ್ಲಿ 45 ಕಿ.ವ್ಯಾ. ಸೌರ ವಿದ್ಯುತ್ ವ್ಯವಸ್ಥೆ ಮತ್ತು 100 ಕಿ.ವ್ಯಾ.ಹೆಚ್. ಸೆಕೆಂಡ್-ಲೈಫ್ ಬ್ಯಾಟರಿ ಸಂಗ್ರಹಣೆ ಸಾಮರ್ಥ್ಯ ದೊಂದಿಗೆ ಏಕಕಾಲದಲ್ಲಿ 18 ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ಗಳು ಮತ್ತು 5 ಸ್ಲೋ ಚಾರ್ಜಿಂಗ್ ಪಾಯಿಂಟ್‌ಗಳೊಂದಿಗೆ ಒಟ್ಟು 23 ಚಾರ್ಜಿಂಗ್ ಪಾಯಿಂಟ್‌ಗಳಿವೆ. ನಮ್ಮ ಬೆಸ್ಕಾಂ ಕೈಗೆಟುಕುವ ದರದಲ್ಲಿ ಇವಿ ಚಾರ್ಜಿಂಗ್‌ ಸೌಲಭ್ಯ ಒದಗಿಸುತ್ತಿದೆ. ಖಾಸಗಿಯವರ ಚಾರ್ಚಿಂಗ್‌ ದರ ನಮ್ಮ ಸ್ಟೇಷನ್‌ಗೆ ಹೋಲಿಸಿದರೆ 2-3 ಪಟ್ಟು ಹೆಚ್ಚಿದೆ,”ಎಂದು ಮಾಹಿತಿ ನೀಡಿದರು.

ಚಾರ್ಚ್‌ ಮಾಡುವುದು ಹೇಗೆ?

ಬೆಸ್ಕಾಂನ ಇವಿ ಮಿತ್ರ ಅಪ್ಲಿಕೇಷನ್‌ನಲ್ಲಿ ಇವಿ ಚಾರ್ಜಿಂಗ್‌ ಸ್ಟೇಷನ್‌ ಸ್ಥಳ, ದರ, ಲಭ್ಯವಿರುವ ಸ್ಲಾಟ್‌ಗಳು ಎಂಬ ಮಾಹಿತಿ ಪಡೆಯಬಹುದು. ಅಥವಾ ಸ್ಟೇಷನ್‌ನಲ್ಲಿರುವ ಕ್ಯೂರ್‌ಕೋಡ್‌ ಸ್ಕ್ಯಾನ್ ಮಾಡಿ, ವಾಟ್ಸಪ್‌ಮೂಲಕವೂ ಹಣ ಪಾವತಿಸಿ ಚಾರ್ಜ್‌ ಮಾಡಬಹುದು.

Google Play Store: https://play.google.com/store/apps/details?id=com.bescom.evmithra&pcampaignid=web_share
Apple Play Store:https://apps.apple.com/us/app/bescom-ev-mithra/id6633439725?uo=2

ದರ:

ಎಸಿ-001-ಪ್ರತಿ ಯೂನಿಟ್‌ಗೆ 7.02 ರೂ.
ಡಿಸಿ-001-ಪ್ರತಿ ಯೂನಿಟ್‌ಗೆ 7.16 ರೂ.
ಸಿಸಿಎಸ್‌-2-ಪ್ರತಿ ಯೂನಿಟ್‌ಗೆ 7.83 ರೂ.

ರಾಜ್ಯ ಸರ್ಕಾರದಿಂದ ಜನತೆಗೆ ಮತ್ತೊಂದು ಗುಡ್ ನ್ಯೂಸ್

BREAKING : ರಾಜ್ಯದಲ್ಲಿ ‘ಥಗ್ ಲೈಫ್’ ಸಿನಿಮಾ ತಡೆಯದಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ನಟ ಕಮಲ್ ಹಾಸನ್!

Share. Facebook Twitter LinkedIn WhatsApp Email

Related Posts

BREAKING : ಚಿಕ್ಕಮಗಳೂರು : ಯುಗಾದಿ ಹಬ್ಬದ ದಿನವೇ, ಕಾಲಭೈರವೇಶ್ವರ ದೇಗುಲದ ಮುಂದೆ ಕಿಡಿಗೇಡಿಗಳಿಂದ ವಾಮಾಚಾರ!

19/03/2026 12:01 PM1 Min Read

ನಿಮ್ಮ `ಆಧಾರ್ ಕಾರ್ಡ್’ ಮೇಲೆ ಎಷ್ಟು `ಸಿಮ್’ ಚಾಲ್ತಿಯಲ್ಲಿವೆ? ಜಸ್ಟ್ ಹೀಗೆ ಕಂಡುಹಿಡಿಯಿರಿ

19/03/2026 11:51 AM1 Min Read

ALERT : APK ಫೈಲ್ ಲಿಂಕ್ ಕ್ಲಿಕ್ ಮಾಡೋ ಮುನ್ನ ಇರಲಿ ಎಚ್ಚರ : ಚಿಕ್ಕಮಗಳೂರಲ್ಲಿ ಲಕ್ಷಾಂತರ ರೂ ಕಳೆದುಕೊಂಡ ವ್ಯಕ್ತಿ!

19/03/2026 11:46 AM1 Min Read
Recent News

ಕೇವಲ ಒಂದು ಗಂಟೆಯಲ್ಲಿ ₹7.6 ಲಕ್ಷ ಕೋಟಿ ಧೂಳೀಪಟ! ಷೇರು ಮಾರುಕಟ್ಟೆಯಲ್ಲಿ ಮಹಾ ಕುಸಿತಕ್ಕೆ ಕಾರಣಗಳೇನು?

19/03/2026 12:15 PM

BREAKING : ಚಿಕ್ಕಮಗಳೂರು : ಯುಗಾದಿ ಹಬ್ಬದ ದಿನವೇ, ಕಾಲಭೈರವೇಶ್ವರ ದೇಗುಲದ ಮುಂದೆ ಕಿಡಿಗೇಡಿಗಳಿಂದ ವಾಮಾಚಾರ!

19/03/2026 12:01 PM

​’ಗಾಡಿ ಮುಂದೆ ಕುದುರೆ ಕಟ್ಟಬೇಡಿ’: ಲಾಲೂ ಪ್ರಸಾದ್ ಯಾದವ್ ಮನವಿ ತಿರಸ್ಕರಿಸಿದ ಕೋರ್ಟ್; ವಿಚಾರಣೆ ವಿಳಂಬಕ್ಕೆ ತಡೆ | Land For Jobs Case

19/03/2026 11:59 AM

ನಿಮ್ಮ `ಆಧಾರ್ ಕಾರ್ಡ್’ ಮೇಲೆ ಎಷ್ಟು `ಸಿಮ್’ ಚಾಲ್ತಿಯಲ್ಲಿವೆ? ಜಸ್ಟ್ ಹೀಗೆ ಕಂಡುಹಿಡಿಯಿರಿ

19/03/2026 11:51 AM
State News
KARNATAKA

BREAKING : ಚಿಕ್ಕಮಗಳೂರು : ಯುಗಾದಿ ಹಬ್ಬದ ದಿನವೇ, ಕಾಲಭೈರವೇಶ್ವರ ದೇಗುಲದ ಮುಂದೆ ಕಿಡಿಗೇಡಿಗಳಿಂದ ವಾಮಾಚಾರ!

By kannadanewsnow0519/03/2026 12:01 PM KARNATAKA 1 Min Read

ಚಿಕ್ಕಮಗಳೂರು : ಯುಗಾದಿ ಹಬ್ಬದ ದಿನವೇ ದೇವಾಲಯದ ಮುಂದೆ ವಾಮಾಚಾರ ನಡೆಸಲಾಗಿದೆ. ನಿನ್ನೆ ಅಮಾವಾಸ್ಯೆ ಹಿನ್ನೆಲೆ ದೇವಾಲಯದ ವಾಮಾಚಾರ ಮಾಡಿದ್ದಾರೆ.…

ನಿಮ್ಮ `ಆಧಾರ್ ಕಾರ್ಡ್’ ಮೇಲೆ ಎಷ್ಟು `ಸಿಮ್’ ಚಾಲ್ತಿಯಲ್ಲಿವೆ? ಜಸ್ಟ್ ಹೀಗೆ ಕಂಡುಹಿಡಿಯಿರಿ

19/03/2026 11:51 AM

ALERT : APK ಫೈಲ್ ಲಿಂಕ್ ಕ್ಲಿಕ್ ಮಾಡೋ ಮುನ್ನ ಇರಲಿ ಎಚ್ಚರ : ಚಿಕ್ಕಮಗಳೂರಲ್ಲಿ ಲಕ್ಷಾಂತರ ರೂ ಕಳೆದುಕೊಂಡ ವ್ಯಕ್ತಿ!

19/03/2026 11:46 AM

ಹೊಸ `ಪ್ಯಾನ್ ಕಾರ್ಡ್’ ಪಡೆಯಲು ಆಧಾರ್ ಕಾರ್ಡ್ ಜೊತೆಗೆ ಈ ದಾಖಲೆಗಳು ಕಡ್ಡಾಯ : ಏ.1ರಿಂದ ಹೊಸ ರೂಲ್ಸ್ !

19/03/2026 11:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.