ಬೆಂಗಳೂರು : ಬೆಂಗಳೂರಿನಲ್ಲಿ ದೈಹಿಕ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಮಕ್ಕಳ ಆಯೋಗದಿಂದ ದೈಹಿಕ ಶಿಕ್ಷಕ ಮ್ಯಾಥ್ಯೂ ವಿರುದ್ಧ ಇದೀಗ ದೂರು ದಾಖಲಾಗಿದೆ ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಮ್ಯಾಥ್ಯೂ ದೈಹಿಕ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಆತನ ವಿರುದ್ಧ ಇದೀಗ ದೂರು ದಾಖಲಾಗಿದೆ ಎಂದು ರಾಜ್ಯ ಮಕ್ಕಳ ಆಯೋಗ ಸದಸ್ಯ ಶಶಿಧರ್ ಕೋಸಂಬಿ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ಕ್ರಿಕೆಟ್ ಕೋಚಿಂಗ್ ಗೆ ಬರುತ್ತಿದ್ದ ಮಕ್ಕಳಿಗು ಸಹ ಆತ ನಗ್ನನಾಗಿ ವಿಡಿಯೋ ಕರೆ ಮಾಡಿದ್ದು ಕಂಡು ಬಂದಿದೆ. ಆರೋಪಿ ಮ್ಯಾಥ್ಯೂ ಮೊಬೈಲ್ ಅನ್ನು ವಶಕ್ಕೆ ಪಡೆಯಬೇಕಿದೆ. ಮಕ್ಕಳ ಮೇಲೆ ಏನಾದರೂ ಲೈಂಗಿಕ ದೌರ್ಜನ್ಯ ವಸಗಿದ್ದರೆ ಮಕ್ಕಳ ಆಯೋಗದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಕುರಿತು ಕೋಣನಕುಂಟೆ ಪೊಲೀಸರೊಂದಿಗೆ ಸಮಾನಚಿಸುತ್ತೇವೆ ಎಂದು ತಿಳಿಸಿದರು.
ಪ್ರಕರಣ ಹಿನ್ನೆಲೆ
ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕ ಹಾಗೂ ಕ್ರಿಕೆಟ್ ಕೋಚ್ ಆಗಿ ಮ್ಯಾಚ್ ಕೆಲಸ ಮಾಡುತ್ತಿದ್ದ ಮ್ಯಾಥ್ಯೂ, ಈ ವೇಳೆ ಅಲ್ಲಿಗೆ ಕ್ರಿಕೆಟ್ ಕೋಚಿಂಗ್ ಪಡೆಯಲು ಬರುತ್ತಿದ್ದ ಮಕ್ಕಳ ತಾಯಂದಿರ ಜೊತೆಗೆ ಮ್ಯಾಥ್ಯೂ ಸ್ನೇಹ ಬೆಳೆಸಿಕೊಂಡು ಸಲುಗೆ ಇಂದ ಇರುತ್ತಿದ್ದ. ಬಳಿಕ ಅವರೊಂದಿಗೆ ದೈಹಿಕ ಸಂಪರ್ಕ ಬೆಳೆಸುತ್ತಿದ್ದ..ಇದೇ ವೇಳೆ ವಿಚ್ಚೇದನ ಪಡೆದ ಮಹಿಳೆಯೊಂದಿಗೆ ಮ್ಯಾಚೂ ಅನೇಕ ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೇ.
ಈ ವೇಳೆ ಮಹಿಳೆ ಗರ್ಭಿಣಿ ಎಂದು ತಿಳಿದ ತಕ್ಷಣ ಆತ ತನ್ನ ತಂದೆಯೊಂದಿಗೆ ಮನೆ ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ಮಹಿಳೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ ಮ್ಯಾಥ್ಯೂ ನಾನು ಮಹಿಳೆಯೊಂದಿಗೆ ಇರುತ್ತೇನೆ. ಆಕೆಯನ್ನು ಮದುವೆಯಾಗುತ್ತೇನೆ ಆದರೆ ನನ್ನ ಮೇಲೆ ಯಾಕೆ ಈ ಆರೋಪ ಹೊರಿಸುತ್ತಿದ್ದಾರೆ ಎಂದು ನನಗೆ ಗೊತ್ತಾಗುತ್ತಿಲ್ಲ ನಾನು ಅಲ್ಲಿಗೆ ಬಂದು ಎಲ್ಲವನ್ನು ಸರಿಪಡಿಸುತ್ತೇನೆ ಎಂದು ಮ್ಯಾಥ್ಯೂ ಸ್ಪಷ್ಟನೆ ನೀಡಿದ್ದಾನೆ.