ಬೆಂಗಳೂರು : ಬೆಂಗಳೂರಿನಲ್ಲಿ ಬೈಕ್ ಬಂದಿದ್ದಕ್ಕೆ ಡೆಲಿವರಿ ಬಾಯ್ ಒಬ್ಬನಿಗೆ ಬೈಕ್ ಸವಾರರು ಹಲ್ಲೆ ಮಾಡಿದ್ದಾರೆ ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದ್ದು ಜನವರಿ 4ರಂದು ನಡೆದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನಲ್ಲಿ ಬೈಕ್ ಸವಾರರಿಗೆ ಡೆಲಿವರಿ ಬಾಯ್ ಏಕಾಏಕಿ ಅಡ್ಡ ಬಂದಿದ್ದಾನೆ. ಇದರಿಂದ ಕೋಪಗೊಂಡು ಡೆಲಿವರಿ ಬಾಯ್ ಮೇಲೆ ಬೈಕ್ ಸವಾರರು ಹಲ್ಲೆ ಮಾಡಿದ್ದಾರೆ . ಬೈಕ್ ಸವಾರರಿಗೆ ತಕ್ಷಣ ಸ್ಥಳೀಯರು ಮತ್ತೆ ಥಳಿಸಿದ್ದಾರೆ. ಸ್ಥಳೀಯರಿಂದ ಗೂಸಾ ಬೀಳುತ್ತಿದ್ದಂತೆ ಬೈಕ್ ಸವಾರರು ಅಲ್ಲಿಂದ ಪರಾರಿ ಆಗಿದ್ದಾರೆ ಬೈಯಪ್ಪನಹಳ್ಳಿ ಠಾಣೆ ಪೋಲಿಸರು ಸಿಸಿಟಿವಿ ಕ್ಯಾಮರಾ ಪರಿಶೀಲನೆ ಮಾಡಿ ಪುಂಡರಿಗೆ ಹುಡುಕಾಟ ನಡೆಸುತ್ತಿದ್ದಾರೆ.








