ಬಾಗಲಕೋಟೆ : ಬಾಗಲಕೋಟೆಯಲ್ಲಿ ಅಮಾನವೀಯ ಘಟನೆ ಒಂದು ನಡೆದಿದ್ದು, ವಿಶೇಷ ಚೇತನ ಹಾಗೂ ಬುದ್ಧಿಮಾಂದ್ಯ ಮಕ್ಕಳ ಮೇಲೆ ಶಿಕ್ಷಕನೊಬ್ಬ ಕ್ರೌರ್ಯ ಮೆರೆದಿದ್ದಾನೆ. ಮಕ್ಕಳ ಕಾಲಿನ ಮೇಲೆ ಕಾಲಿಟ್ಟು ಶಿಕ್ಷಕ ಬೆಲ್ಟ್ ನಿಂದ ಭೀಕರವಾಗಿ ಹಲ್ಲೆ ಮಾಡಿದ್ದಾನೆ.
ಬಾಗಲಕೋಟೆ ನವನಗರದ 45ನೇ ಸೆಕ್ಟರ್ ನಲ್ಲಿ ಇರುವಂತಹ ವಿಶೇಷ ಚೇತನ ಮತ್ತು ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ಈ ಒಂದು ಘಟನೆ ನಡೆದಿದೆ. ದಿವ್ಯ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಮಕ್ಕಳ ಕಾಲ ಮೇಲೆ ಕಾಲಿಟ್ಟು ಬೆಲ್ಟ್ನಿಂದ ಭೀಕರವಾಗಿ ಹಲ್ಲೆ ಮಾಡಿದ್ದಾನೆ ಅಕ್ಷಯ್ ಇಂಗಳ್ಕರ್ ಎಂಬ ನೀಚ ಶಿಕ್ಷಕ ಹಲ್ಲೆ ಮಾಡಿದ್ದಾನೆ.
ಕಾರಣ ಇಷ್ಟೇ ಕೆಲಸ ಮಾಡದೆ ಇದ್ದದ್ದಕ್ಕೆ ಕೋಪಗೊಂಡು ಮಕ್ಕಳ ಮೇಲೆ ಈ ರೀತಿ ಭೀಕರವಾಗಿ ಹಲ್ಲೆ ಮಾಡಿದ್ದಾನೆ. ಅಲ್ಲದೇ ವಿಡಿಯೋ ಮಾಡುತ್ತಿರುವ ಕೆಲವು ಹೆಣ್ಣು ಮಕ್ಕಳು ಕೂಡ ಮಕ್ಕಳ ಮೇಲೆ ಹಲ್ಲೆ ಮಾಡುತ್ತಿರುವುದನ್ನು ನೋಡಿ ನಗುತ್ತಿದ್ದಾರೆ. ಇದೀಗ ಶಿಕ್ಷಕನ ವಿರುದ್ಧ ಕಠಿಣ ಕ್ರಮ ಆಗಲೇಬೇಕು ಎಂದು ಪೋಷಕರು ಆಗ್ರಹಿಸುತ್ತಿದ್ದಾರೆ.








