ಬೆಂಗಳೂರು: ನಟ ದರ್ಶನ್ ನ್ಯಾಯಾಂಗ ವ್ಯಾಪ್ತಿಯನ್ನು ಬಿಟ್ಟು ಬೇರೆಡೆಗೆ ತೆರಳದಂತೆ ಷರತ್ತು ವಿಧಿಸಿ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜಾಮೀನು ನೀಡಿತ್ತು. ಇಂದು ನಟ ದರ್ಶನ್ ಗೆ ಕೊಂಚ ರಿಲೀಫ್ ಎನ್ನುವಂತೆ ಐದು ದಿನಗಳ ಕಾಲ ಮೈಸೂರಿಗೆ ತೆರಳೋದಕ್ಕೆ ಕೋರ್ಟ್ ಅನುಮತಿ ನೀಡಿದೆ.
ಇಂದು ಬೆಂಗಳೂರಿನ ಸಿಸಿಹೆಚ್ 57ನೇ ನ್ಯಾಯಾಲಯದಲ್ಲಿ ಮೈಸೂರಿಗೆ ತೆರಳೋದಕ್ಕೆ ಅವಕಾಶ ನೀಡುವಂತೆ ನಟ ದರ್ಶನ್ ಅವರು ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆ ನಡೆಸಲಾಯಿತು. ಮೈಸೂರಿನ ದೇವಸ್ಥಾನಗಳಿಗೆ ತೆರಳು ಕೋರ್ಟ್ ನಟ ದರ್ಶನ್ ಅವರಿಗೆ ಅನುಮತಿ ನೀಡಿದೆ. ಜನವರಿ.12ರಿಂದ 5 ದಿನಗಳ ಕಾಲ ಮೈಸೂರಿಗೆ ತೆರಳಲು ಕೋರ್ಟ್ ಅನುಮತಿ ನೀಡಿದೆ.
ಇನ್ನೂ ಆರೋಪಿ ಪವಿತ್ರಾ ಗೌಡ ಅವರ ರಾಜರಾಜೇಶ್ವರಿ ನಗರದಲ್ಲಿರುವಂತ ರೆಡ್ ಕಾರ್ಪೆಂಟ್ ಶೋರೂಂಗೆ ಮುಂಬೈ, ದೆಹಲಿಗೆ ವ್ಯವಹಾರಿಕ ಉದ್ದೇಶಕ್ಕೆ ತೆರಳಿ ವಸ್ತುಗಳನ್ನು ಖರೀದಿಸಿ ತರಲು ಕೋರ್ಟ್ ಅನುಮತಿ ನೀಡಿದೆ. ರೆಡ್ ಕಾರ್ಪೆಟ್ ಶೋರೂಂಗೆ ಐಟಂ ತರಲು ಅವಕಾಶವನ್ನು ನೀಡಿದೆ.
ರಾಜ್ಯದಲ್ಲಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಆಗಿದೆ: ಕೇಂದ್ರ ಸಚಿವ HDK ಗಂಭೀರ ಆರೋಪ
Electricity Bill: 2 ಬಿಲಿಯನ್ ರೂಪಾಯಿ ವಿದ್ಯುತ್ ಬಿಲ್ ಕಂಡು ಆಘಾತಕ್ಕೊಳಗಾದ ವ್ಯಕ್ತಿ!