ಕೋಲಾರ : ತಾನು ಮಾಡಿದ್ದ ಸಾಲವನ್ನು ತೀರಿಸಲು ಆಗಲೇ ಮೂರು ತಿಂಗಳ ಹೆತ್ತ ಕಂದಮ್ಮನನ್ನೇ ಮಾರಾಟ ಮಾಡಿರುವ ಅಮಾನವೀಯ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ಹೌದು ಕೋಲಾರ ಜಿಲ್ಲೆಯ ಬಂಗಾರಪೇಟೆ ನಗರದ ನಿವಾಸಿಗಳಾದ ಮುನಿರಾಜು ಹಾಗೂ ಪವಿತ್ರ ಎನ್ನುವ ದಂಪತಿಗಳ ಮೂರು ತಿಂಗಳ ಮಗು ವನ್ನು ತಂದೆ ಮುನಿರಾಜು ಹಣಕ್ಕಾಗಿ ಮಾರಾಟ ಮಾಡಿದ್ದಾನೆ ಎಂದು ಪತ್ನಿ ಪವಿತ್ರ ಗಂಡನ ವಿರುದ್ಧ ಬಂಗಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ತಂದೆಯದಂತ ಮುನಿರಾಜು ತನ್ನ ಮೂರು ತಿಂಗಳ ಹೆತ್ತ ಕಂದಮ್ಮನನ್ನು ಬಂಗಾರಪೇಟೆಯ ಕೆರೆಕೋಡಿ ನಿವಾಸಿಯಾದ ವಲ್ಲಿ ಎನ್ನುವ ಮಹಿಳೆ ಮೂಲಕ ಮುನಿರಾಜು, ಮಗು ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ.ತನಗೆ ಮಗು ಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ.
ಮಗು ಅಪಹರಣ ಮಾಡಿದ್ದಾರೆಂದು ಪತಿ ಮುನಿರಾಜು ಹಾಗೂ ವಲ್ಲಿ ವಿರುದ್ದ ದೂರು ನೀಡಿರುವ ಪವಿತ್ರಾ, ಮಗುವನ್ನ ವಾಪಾಸ್ ಕೊಡಿಸುವಂತೆ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.