ಬೆಳಗಾವಿ: ರಾಜ್ಯದಲ್ಲೊಂದು ಅಮಾನವೀಯ ಘಟನೆ ಎನ್ನುವಂತೆ ಹೆತ್ತ ಕಂದಮ್ಮನನ್ನೇ ಕೆರೆಗೆ ತಾಯಿಯೊಬ್ಬಳು ಎಸೆದು ಹೋಗಿರುವಂತ ಘಟನೆ ನಡೆದಿದೆ.
ಆಗತಾನೇ ಹುಟ್ಟಿದಂತ ಶಿಶವನ್ನೇ ತಾಯಿಯೊಬ್ಬಳು ಬಿಟ್ಟು ಹೋಗಿದ್ದಂತ ಘಟನೆ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ನಡೆದಿತ್ತು. ಈ ಘಟನೆ ಮಾಸೋ ಮುನ್ನವೇ ಈಗ ರಾಜ್ಯದಲ್ಲೇ ಅಮಾನವೀಯ ಎನ್ನುವಂತೆ ತಾಯಿಯೊಬ್ಬಳು ಕೆರೆಗೆ ಹುಟ್ಟಿದ ಹೆತ್ತ ಕಂದಮ್ಮನನ್ನೇ ಎಸೆದು ಹೋಗಿದ್ದಾಳೆ.
ಬೆಳಗಾವಿ ಜಿಲ್ಲೆಯ ಕಣಬರಗಿ ಗ್ರಾಮದಲ್ಲಿ 2 ತಿಂಗಳ ಹೆಣ್ಣುಮಗುವನ್ನೇ ತಾಯಿಯೊಬ್ಬಳು ಕೆರೆಗೆ ಎಸೆದು ಹೋಗಿರೋದಾಗಿ ತಿಳಿದು ಬಂದಿದೆ. ಕೆರೆಯಲ್ಲಿ ದನಗಳನ್ನು ಮೈ ತೊಳೆಯುತ್ತಿದ್ದಂತವರು ಕೂಡಲೇ ಹಸುಗೂಸನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೇ ಕೆರೆಗೆ ಎಸೆದು ಹೋಗುತ್ತಿದ್ದಂತ ತಾಯಿಯನ್ನು ತಡೆದು, ಬುದ್ಧಿವಾದ ಹೇಳಿದ್ದಾರೆ. ಅಲ್ಲದೇ ಮಗುವನ್ನು ಕೈಗೆ ನೀಡಿ, ಕಳುಹಿಸಿದ್ದಾರೆ.
ಸದನದಲ್ಲಿ ಸೋಮವಾರದಿಂದ 3 ದಿನ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ಧರಾಮಯ್ಯ