ಬೆಂಗಳೂರು: ನಗರದಲ್ಲಿ ಪ್ರೀತಿಸಲು ನಿರಾಕರಿಸಿದಂತ ಯುವತಿಯ ಕಾರು, ಬೈಕ್ ಗೆ ಪಾಗಲ್ ಪ್ರೇಮಿ ಬೆಂಕಿ ಹಚ್ಚಿದಂತ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಇದಷಅಟೇ ಅಲ್ಲದೇ ರೌಡಿ ಶೀಟರ್ ರಾಹುಲ್ ಯುವತಿಯ ತಂದೆಗೂ ಚಾಕುವಿನಿಂದ ಇರಿದಿರುವುದಾಗಿ ತಿಳಿದು ಬಂದಿದೆ.
ಬೆಂಗಳೂರಿನ ಸುಬ್ರಹ್ಮಣ್ಯಪುರದಲ್ಲಿ ಈ ಘಟನೆ ನಡೆದಿದೆ. ರೌಡಿ ಶೀಟರ್ ರಾಹುಲ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆತ ರೌಡಿ ಶೀಟರ್ ಆಗಿದ್ದರೂ ಯುವತಿ ಆತನನ್ನು ಪ್ರೀತಿಸುತ್ತಿದ್ದಳು. ಆದರೇ ಕೆಲ ದಿನಗಳಿಂದ ಆತನಿಂದ ಯುವತಿ ಅಂತರ ಕಾಯ್ದುಕೊಂಡಿದ್ದಳಂತೆ.
ಈ ಕಾರಣದಿಂದ ಸಿಟ್ಟಾದಂತ ರೌಡಿ ಶೀಟರ್ ರಾಹುಲ್, ಯುವತಿಯ ಮನೆಯ ಮುಂದೆ ನಿಲ್ಲಿಸಿದ್ದಂತ ಕಾರು, ಬೈಕ್ ಗೆ ಬೆಂಕಿ ಹಚ್ಚಿ ಪುಂಡಾಟ ಮೆರಿದ್ದನು. ಇದಷ್ಟೇ ಅಲ್ಲದೇ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಎನ್ನುವಂತೆ ಯುವತಿಯ ಮನೆಗೆ ತೆರಳಿ ತಂದೆಗೆ ಚಾಕುವಿನಿಂದ ಇರಿದಿದ್ದಾನೆ ಎನ್ನುವುದು ಬೆಳಕಿಗೆ ಬಂದಿದೆ.
ಘಟನೆಯ ನಂತ್ರ ಗಿರಿನಗರ ಪೊಲೀಸರು ಆರೋಪಿ ರಾಹುಲ್ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಪ್ರಿಯತಮೆ ತಾಯಿಯಿಂದ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆ ಹಾಗೂ ವಿರೇಶ್ ಎಂಬುವರಿಂದ ಕಾರಿಗೆ ಹಾನಿ ಮಾಡಿದಂತ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
BREAKING: ಕನಕಪುರದಲ್ಲಿ ಘೋರ ದುರಂತ: ನಿರ್ಮಾಣ ಹಂತದ ಕಮಾನು ಕುಸಿದು ಓರ್ವ ಸಾವು, ಹಲವರಿಗೆ ಗಾಯ
BREAKING : ರಾಜ್ಯದ ವಾಹನ ಸವಾರರಿಗೆ ಗುಡ್ ನ್ಯೂಸ್ : ‘HSRP’ ನಂಬರ್ ಪ್ಲೇಟ್ ಅಳವಡಿಕೆ ಮಾ.31ರವರೆಗೆ ವಿಸ್ತರಣೆ