ಮುಂಡಗೋಡ: ಅಂಗನವಾಡಿಗೆ ತೆರಳಿದ್ದಂತ ಬಾಲಕಿಯೊಬ್ಬಳಿಗೆ ಹಾವು ಕಡಿದು, ಸಾವನ್ನಪ್ಪಿರುವಂತ ಧಾರುಣ ಘಟನೆ ಮುಂಡಗೋಡಿನ ಮಾರಿಕಾಂಬಾ ನಗರದಲ್ಲಿ ನಡೆದಿದೆ.
ಮುಂಡಗೋಡ ಪಟ್ಟಣದ ಮಾರಿಕಾಂಬಾ ನಗರದಲ್ಲಿರುವಂತ ಅಂಗನವಾಡಿಗೆ ಐದು ವರ್ಷದ ಬಾಲಕಿ ಮಯೂರಿ ಸುರೇಶ ಕಂಬಳೆಪ್ಪನವರು ತೆರಳಿದ್ದಳು. ಮಂಗಳವಾರದಂದು ಮಯೂರಿ ಮೂತ್ರ ವಿಸರ್ಜನೆಗಾಗಿ ಅಂಗನವಾಡಿ ಕೇಂದ್ರದ ಹಿಂಬದಿಗೆ ತೆರಳಿದ್ದಳು. ಈ ವೇಳೆ ಪುಟ್ಟ ಬಾಲಕಿಗೆ ಹಾವು ಕಡಿದೆ. ಇದರಿಂದ ರಕ್ತಸ್ತ್ರಾವ ಉಂಟಾಗಿದೆ. ಆಕೆಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ.
ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಂತ ವೇಳೆ ಮಾರ್ಗ ಮಧ್ಯದಲ್ಲೇ ಮಯೂರಿ ಕೊನೆಯುಸಿರು ಎಳೆದಿರುವುದಾಗಿ ತಿಳಿದು ಬಂದಿದೆ.
ಹೊಸ ವರ್ಷಾಚರಣೆ ಹಿನ್ನಲೆ: ಇಂದು ಬೆಂಗಳೂರಲ್ಲಿ ತಡರಾತ್ರಿವರೆಗೆ ‘BMTC ಬಸ್’ ಸಂಚಾರ | BMTC Bus Service
ಬೆಂಗಳೂರಲ್ಲಿ 1 ದಿನ ಲೈಸೆನ್ಸ್ ಪಡೆದು ಪಾರ್ಟಿ ಆಯೋಜಿಸಿದ್ದವರಿಗೆ ಶಾಕ್: ಇನ್ನೂ ಸಿಗದ CS ಲೈಸೆನ್ಸ್ ಪರದಾಟ