ಶಿವಮೊಗ್ಗ : ರಾಜ್ಯದಲ್ಲಿ ಮನಕಲಕುವ ಘಟನೆ ಎನ್ನುವಂತೆ ಕಡಿಮೆ ಮಾರ್ಕ್ಸ್ ಬಂದಿದ್ದರಿಂದ ಪೋಷಕರು ಬೈದಿದ್ದಕ್ಕೆ ಮನನೊಂದು 7ನೇ ತರಗತಿ ಬಾಲಕಿಯೊಬ್ಬಳು ನೇಣಿಗೆ ಶರಣಾಗಿರುವಂತ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಬಸವಾನಿಯಲ್ಲಿ 7ನೇ ತರಗತಿ ವಿದ್ಯಾರ್ಥಿನಿ ಇಂಚರ ಎಂಬಾಕೆಯೇ ನೇಣಿಗೆ ಶರಣಾದಂತ ಬಾಲಕಿಯಾಗಿದ್ದಾರೆ.
ಮೃತ ಇಂಚರ ತೀರ್ಥಹಳ್ಳಿಯ ಬಸವಾನಿಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಇಂದು ಶಾಲೆಯಲ್ಲಿ ಮಾರ್ಕ್ಸ್ ಕಾರ್ಡ್ ವಿತರಣೆಯನ್ನು ಮಾಡಲಾಗುತ್ತಿತ್ತು. ಈ ವೇಳೆಯಲ್ಲಿ ತನ್ನ ಮಾರ್ಕ್ಸ್ ಕಾರ್ಡ್ ಪಡೆದು ಮನೆಗೆ ಮರಳಿದ್ದಾಳೆ.
ಹೊಳೆಕೊಪ್ಪದ ಮನೆಗೆ ಮರಳಿದಂತ ಇಂಚರ ಮಾರ್ಕ್ಸ್ ಕಾರ್ಡ್ ಪಡೆದಂತ ಪೋಷಕರು, ಪರಿಶೀಲಿಸಿದಾಗ ಕಡಿಮೆ ಬಂದಿರೋದು ಗಮನಕ್ಕೆ ಬಂದಿದೆ. ಈ ಕಾರಣಕ್ಕೆ ಯಾಕೆ ಇಷ್ಟು ಕಡಿಮೆ ಮಾರ್ಕ್ಸ್ ತೆಗೆದಿದ್ದೀಯ ಅಂತ ಬೈದಿದ್ದಾರೆ. ಇಷ್ಟಕ್ಕೇ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ತೀರ್ಥಹಳ್ಳಿಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.
ಅಂದಹಾಗೇ ಇಂಚರ ಶಾಲೆಯಲ್ಲಿ ಸದಾ ಚುರುಕಿನ ಬಾಲಕಿಯಾಗಿದ್ದಳು. ಇಂತಹ ಇಂಚರ ಇಂದು ಮಾರ್ಕ್ಸ್ ಕಡಿಮೆ ಬಂದಿದೆ ಅಂತ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವಿದ್ಯಾರ್ಥಿಗಳೇ ದಯವಿಟ್ಟು ಇಂತಹ ಕೆಲಸಕ್ಕೆ ಕೈ ಹಾಕಬೇಡಿ. ನೀವು ಬದುಕಿದ್ದರೇ, ಮತ್ತೊಂದು ಪರೀಕ್ಷೆ ಬರೆದು, ನೀವು ಬಯಸಿದಂತೆ ಅಂಕಗಳನ್ನು ಚೆನ್ನಾಗಿ ಓದಿ ಪರೀಕ್ಷೆ ಬರೆದು ಪಡೆಯಬಹುದು. ಯಾವುದೇ ಕಾರಣಕ್ಕೆ ಆತ್ಮಹತ್ಯೆಯಂತಹ ದುಸ್ಸಾಹಸಕ್ಕೆ ಕೈಹಾಕಬೇಡಿ ಅನ್ನೋದು ನಿಮ್ಮ ಕನ್ನಡ ನ್ಯೂಸ್ ನೌ ಮನವಿಯಾಗಿದೆ.
BIG NEWS: ರಾಜ್ಯದಲ್ಲಿ ಮಾರಾಟವಾಗುತ್ತಿರುವ ‘ಔಷಧಿಗಳ ಗುಣಮಟ್ಟ’ದ ಬಗ್ಗೆ ‘ಆರೋಗ್ಯ ಇಲಾಖೆ’ ಶಾಕಿಂಗ್ ಮಾಹಿತಿ ಬಿಡುಗಡೆ
BREAKING: ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಮಾಹಿತಿ