ತುಮಕೂರು: ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಪ್ರಕರಣ ಎನ್ನುವಂತೆ ಮಕ್ಕಳನ್ನು ಮಾರಾಟ ಮಾಡುತ್ತಿದ್ದಂತ ಗ್ಯಾಂಗ್ ಅನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಪ್ರಕರಣದಲ್ಲಿ ಆಸ್ಪತ್ರೆಯ ಮ್ಯಾನೇಜರ್, ನರ್ಸ್, ಫಾರ್ಮಸಿಸ್ಟ್ ಗಳೇ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದದ್ದು ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ 6 ಆರೋಪಿಗಳನ್ನು ಗುಬ್ಬಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಹೌದು ತುಮಕೂರು ಜಿಲ್ಲೆಯಲ್ಲಿ ಮಕ್ಕಳ ಅಪಹರಣ, ಮಾರಾಟ ಮಾಡುವಂತ ಗ್ಯಾಂಗ್ ಅನ್ನು ಗುಪ್ಪಿ ಠಾಣೆಯ ಪೊಲೀಸರು ಪತ್ತೆ ಹಚ್ಚಿದ್ದಾರೆ. 11 ತಿಂಗಳ ರಾಕಿ ಎನ್ನುವಂತ ಮಗುವನ್ನು ಅಪಹರಣದ ಬೆನ್ನತ್ತಿದಂತ ಪೊಲೀಸರಿಗೆ, ಮಕ್ಕಳನ್ನು ಕಿಡ್ನ್ಯಾಪ್ ಮಾಡಿ, ಮಾರಾಟ ಮಾಡುವಂತ ಜಾಲವೇ ಪತ್ತೆಯಾಗಿದೆ.
ಒಂದೇ ಗ್ಯಾಂಗ್ ನಿಂದ ಬರೋಬ್ಬರಿ 9 ಮಕ್ಕಳನ್ನು ಮಾರಾಟ ಮಾಡಿರೋದಾಗಿ ತಿಳಿದು ಬಂದಿದೆ. ಮಕ್ಕಳನ್ನು ಮಾರಾಟ ಮಾಡೋದಕ್ಕೆ ಅವಿವಾಹಿತೆಯರನ್ನೇ ಟಾರ್ಗೆಟ್ ಮಾಡಿ, ಅವರನ್ನು ಅಕ್ರಮ ಸಂಬಂಧದ ಮೂಲಕ ಗರ್ಭಧರಿಸುವಂತೆ ಮಾಡುತ್ತಿದ್ದಂತ ಗ್ಯಾಂಗ್ ಅವರಿಗೆ ಹುಟ್ಟಿದಂತ ಮಗುವನ್ನು ಮಕ್ಕಳು ಇಲ್ಲದವರಿಗೆ ಮಾರಾಟ ಮಾಡುತ್ತಿತ್ತಂತೆ.
ಸದ್ಯ ಮಾರಾಟ ಮಾಡಲಾಗಿದ್ದಂತ 9 ಮಂದಿಯ ಪೈಕಿ ನಾಲ್ವರು ಮಕ್ಕಳನ್ನು ಪೊಲೀಸರು ರಕ್ಷಿಸಿದ್ದಾರೆ. ಅವರನ್ನು ದತ್ತು ಸ್ವೀಕಾರ ಕೇಂದ್ರಕ್ಕೆ ಬಿಟ್ಟಿದ್ದಾರೆ. ಮಾರಾಟವಾಗಿದ್ದಂತ ಒಂದು ಮಗುವನ್ನು ಪೋಷಕರಿಗೆ ತಲುಪಿಸಿದ್ದಾರೆ.
ತುಮಕೂರು ನಗರದ ಖಾಸಗಿ ನರ್ಸಿಂಗ್ ಹೋಂನಲ್ಲಿ ಹೀಗೆ ಅಕ್ರಮ ಸಂಬಂಧಕ್ಕೆ ಗರ್ಭಧರಿಸಿದ್ದಂತ ಯುವತಿಯರನ್ನು ಡಿಲವರಿ ಮಾಡಿಸಲಾಗಿದೆ. ಈ ಪ್ರಕರಣದಲ್ಲಿ ತುಮಕೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ಮ್ಯಾನೇಜರ್ ಮಹೇಶ್ (39), ಆಸ್ಪತ್ರೆಯ ಸ್ಟಾಪ್ ನರ್ಸ್ಗಳಾದ ಪೂರ್ಣಿಮಾ (39) ಹಾಗೂ ಸೌಜನ್ಯ (48), ಚಿಕ್ಕನಾಯಕನಹಳ್ಳಿ ಮೂಲದ ಫಾರ್ಮಸಿಸ್ಟ್ ಮಹಬೂಬ್ ಷರೀಪ್ (52), ಟ್ಯಾಟೋ ಹಾಕುತ್ತಿದ್ದ ಕೆ.ಎನ್. ರಾಮಕೃಷ್ಣಪ್ಪ (53), ಹನುಮಂತರಾಜು (45) ಬಂಧಿತ ಆರೋಪಿಗಳು. ಬಂಧಿತರಿಂದ 1 ಕಾರು, 50 ಸಾವಿರ ನಗದು, 4 ಮೊಬೈಲ್ಗಳನ್ನು ಗುಬ್ಬಿ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಜ್ವಲ್ ಅಶ್ಲೀಲ ವಿಡಿಯೋ ಹಂಚಿದ್ದು ಯಾರೆಂಬುದು ಮಾಹಿತಿ ಇದೆ : ಜಿ.ಪರಮೇಶ್ವರ್ ಸ್ಪೋಟಕ ಹೇಳಿಕೆ
ಯಾವುದೇ ಕಾರಣಕ್ಕೆ ‘ಗ್ಯಾರಂಟಿ’ ಯೋಜನೆಗಳನ್ನು ನಿಲ್ಲಿಸುವುದಿಲ್ಲ : MLC ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ