ಯಾದಗಿರಿ: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ, ಶಾಕಿಂಗ್ ಕೃತ್ಯ ಎನ್ನುವಂತೆ ಚಿಕ್ಕಮ್ಮನ ಮೇಲೆಯೇ ಪೊಲೀಸ್ ಕಾನ್ಸ್ ಸ್ಟೇಬಲ್ ಹಾಗೂ ಸಹೋದರ ಅತ್ಯಾಚಾರವೆಸಗಿರುವಂತ ಘಟನೆ ನಡೆದಿದೆ.
ಯಾದಗಿರಿ ಜಿಲ್ಲೆಯ ಗಿರುಮಿಠಕಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಂಚಾರ ಠಾಣೆಯ ಕಾನ್ಸ್ ಸ್ಟೇಬಲ್ ರಮೇಶ್ ಹಾಗೂ ಆತನ ಸಹೋದರ ಜೆಸ್ಕಾಂ ನೌಕರನಾಗಿರುವಂತ ಲಕ್ಷ್ಮಣ್ ಸೇರಿಕೊಂಡು ಚಿಕ್ಕಪ್ಪನ ಪತ್ನಿ ಚಿಕ್ಕಮ್ಮನ ಮೇಲೆಯೇ ನಿರಂತರವಾಗಿ ಅತ್ಯಾಚಾರ ಎಸಗಿರುವಂತ ಘಟನೆ ಬೆಳಕಿಗೆ ಬಂದಿದೆ.
ನಿರಂತರ ಅತ್ಯಾಚಾರದಿಂದ ಬೇಸತ್ತು ಸಂತ್ರಸ್ತೆ ಯಾದಗಿರಿಯ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ಯಾದಗಿರಿ ಸಂಚಾರ ಠಾಣೆಯ ಕಾನ್ ಸ್ಟೇಬಲ್ ರಮೇಶ್ ಹಾಗೂ ಆತನ ಸಹೋದರ ಜೆಸ್ಕಾಂ ನೌಕರ ಲಕ್ಷ್ಮಣ್ ವಿರುದ್ಧ ಪ್ರಕರಣ ದಾಖಲಾಗಿದೆ.
ಅಂದಹಾಗೇ ಸತತ 7 ವರ್ಷಗಳಿಂದ ಜೀವ ಬೆದರಿಕೆ ಹಾಕಿ ಪೇದೇ, ಜೆಸ್ಕಾಂ ನೌಕರ ನಿರಂತರವಾಗಿ ಚಿಕ್ಕಮ್ಮನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ಬಗ್ಗೆ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಡಿಕೆಶಿ ಆಗಲೇ ಬಿಜೆಪಿ ಸೇರದವರು ಈಗ ಸೇರ್ತಾರಾ ಯತ್ನಾಳ್ ಹೇಳಿಕೆಗೆ ಶಾಸಕ ಉದಯ್ ಕೌಂಟರ್
BREAKING: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗೆ ಆಯುಕ್ತರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ