ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ ಭೈ ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಕಿಡಿಕಾರಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜೇಂದ್ರನನ್ನು ಕೆಲವೇ ದಿನಗಳಲ್ಲಿ ಹೈಕಮಾಂಡ್ ತೆಗೆಯಲಿದೆ ಎಂದು ಹೇಳಿಕೆ ನೀಡಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಜಯೇಂದ್ರನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದರೆ ಹೊಸ ಪಕ್ಷ ಕಟ್ಟುತ್ತೇನೆ ಅಂತ ಯೆಡಿಯೂರಪ್ಪ ಬೆದರಿಕೆ ಹಾಕುತ್ತಾನೆ. ಬಿ. ವೈ ವಿಜಯೇಂದ್ರರರನ್ನು ತೆಗೆದರೆ ಹೊಸಪಕ್ಷ ಕಟ್ಟುವುದಾಗಿ ಬೆದರಿಕೆ ಹಾಕುತ್ತಾನೆ. ಮೊನ್ನೆ ದೆಹಲಿಯಲ್ಲಿ ಯಡಿಯೂರಪ್ಪ ಗೆ ಮಂಗಳಾರತಿ ಮಾಡಿದ್ದಾರೆ ಎಂದರು.
ಮುಸ್ಲಿಮರಿಗೆ ಕೊಟ್ಟ ಮೀಸಲಾತಿ ತೆಗೆದು ಬೇರೆ ಸಮಾಜಕ್ಕೆ ಹಂಚಬೇಕು. ಯಡಿಯೂರಪ್ಪ ಭಯದಿಂದ ಬಿಜೆಪಿ ಹೈಕಮಾಂಡ್ ಹೊರಬರುತ್ತಿದೆ ನಾನು ಬಿಜೆಪಿ ಸೇರಲು ಬಹುತೇಕ ಶಾಸಕರು ಒಲವು ತೋರಿದ್ದಾರೆ. ಅಮಿತ್ ಶಾ ಒಬ್ಬೊಬ್ಬರನ್ನೇ ಕರೆದು ಕೇಳಿದರೆ ಎಲ್ಲರೂ ಹೇಳುತ್ತಾರೆ. ಕೆಲವೇ ದಿನಗಳಲ್ಲಿ ಶಿವಮೊಗ್ಗದಲ್ಲಿ ಹಿಂದೂ ಸಮಾವೇಶ ಮಾಡುತ್ತೇವೆ ಎಂದು ಹುಬ್ಬಳ್ಳಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದರು.