ಮೈಸೂರು: ಮೈಸೂರಿನ ಪಿರಿಯಾಪಟ್ಟಣದಲ್ಲಿರುವ ಸೇಂಟ್ ಮೇರಿಸ್ ಚರ್ಚ್ ಅನ್ನು ಕ್ರಿಸ್ ಮಸ್ ಹಬ್ಬದ ಎರಡು ದಿನಗಳ ನಂತರ ಧ್ವಂಸಗೊಳಿಸಲಾಗಿದೆ. ಮೈಸೂರಿನ ಚರ್ಚ್ ವೊಂದನ್ನು ಅಪರಿಚಿತ ವ್ಯಕ್ತಿಗಳು ಧ್ವಂಸಗೊಳಿಸಿರುವ ಘಟನೆ ಮಂಗಳವಾರ ನಡೆದಿದೆ. ಕಿಡಿಗೇಡಿಗಳು ಚರ್ಚ್ ನಲ್ಲಿರುವ ಬೇಬಿ ಜೀಸಸ್ ಪ್ರತಿಮೆಯನ್ನು ಸಹ ಹಾನಿಗೊಳಿಸಿದ್ದಾರೆ ಎನ್ನಲಾಗಿದೆ.
ಪರಾರಿಯಾಗಿರುವ ಆರೋಪಿಗಳನ್ನು ಪತ್ತೆಹಚ್ಚಲು ಹಲವಾರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಆರೋಪಿಗಳನ್ನು ಗುರುತಿಸಲು ಚರ್ಚ್ ಆವರಣದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳು ಸೆರೆಹಿಡಿದ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಚರ್ಚ್ ಸಿಬ್ಬಂದಿಯೊಬ್ಬರು ಮಂಗಳವಾರ ಸಂಜೆ 6 ಗಂಟೆಗೆ ಹಾನಿಯನ್ನು ನೋಡಿ ದಮತ್ತು ತಕ್ಷಣ ಪಾದ್ರಿಯನ್ನು ಕರೆದರು. ದಾಳಿಕೋರರು ಚರ್ಚ್ ಪ್ರವೇಶಿಸಲು ಹಿಂದಿನ ಬಾಗಿಲನ್ನು ಮುರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ಹತ್ತಿರದ ಕ್ಯಾಮೆರಾಗಳು ರೆಕಾರ್ಡ್ ಮಾಡಿದ ಸಿಸಿಟಿವಿ ದೃಶ್ಯಾವಳಿಗಳಿಂದ ಸುಳಿವುಗಳಿಗಾಗಿ ನಾವು ಹುಡುಕುತ್ತಿದ್ದೇವೆ. ಮೇಲ್ನೋಟಕ್ಕೆ ಇದು ಕಳ್ಳತನದಂತೆ ಕಾಣುತ್ತದೆ, ಏಕೆಂದರೆ ಅವರು ಹಣವನ್ನು ದೋಚಿದ್ದಾರೆ, ಎಂದು ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಹೇಳಿದ್ದಾರೆ.