ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ವಂಚನೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅದೇನೆಂದರೇ 12 ಲಕ್ಷ ನಗದು, 3 ಬ್ರಾಸ್ ಲೆಟ್ ಹಾಗೂ ಚಿನ್ನದ ಉಂಗುರಗಳನ್ನು ವಾಪಾಸ್ ನೀಡಿರುವುದಾಗಿದೆ.
ಜ್ಯೂವೆಲ್ಲರಿ ಶಾಪ್ ಮಾಲೀಕರಿಗೆ ವಂಚನೆ ಸಂಬಂಧ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ಬೆಂಗಳೂರಿನ ಭಾರತಿ ನಗರ ಠಾಣೆಯ ಪೊಲೀಸರಿಂದ ವಿಚಾರಣೆ ನಡೆಸಲಾಯಿತು. ಎಸಿಪಿ ಗೀತಾ ಎದುರು ವಿಚಾರಣೆಗೆ ಹಾಜರಾಗಿದ್ದಂತ ವೇಳೆಯಲ್ಲಿ ಆರೋಪಿ ಶ್ವೇತಾ ಗೌಡ ಗಿಫ್ಟ್ ಆಗಿ ಕೊಟ್ಟಿದ್ದಂತ ನಗದು, ಚಿನ್ನಾಭರಣವನ್ನು ಪೊಲೀಸರಿಗೆ ವಾಪಾಸ್ ನೀಡಿದ್ದಾರೆ.
ವಿಚಾರಣೆ ವೇಳೆಯಲ್ಲೇ ವರ್ತೂರು ಪ್ರಕಾಶ್ ಅವರು 12.50 ಲಕ್ಷ ರೂ ನಗದು, ಮೂರು ಬ್ರಾಸ್ ಲೆಟ್ ಹಾಗೂ 1 ಚಿನ್ನದ ಉಂಗುರವನ್ನು ವಿಚಾರಣಾಧಿಕಾರಿ ಎಸಿಪಿ ಗೀತಾ ಅವರಿಗೆ ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಇನ್ನೂ ವಿಚಾರಣೆ ಸಂದರ್ಭದಲ್ಲಿ ಶ್ವೇತಾ ಗೌಡ ಹೀಗೆ ಮಾಡ್ತಾಳೆ ಅಂತ ನನಗೆ ಗೊತ್ತಿರಲಿಲ್ಲ. ಆಕೆಗೂ ನನಗೂ ಯಾವುದೇ ಸಂಬಂಧವೂ ಇಲ್ಲ. ಗಿಫ್ಟ್ ಆಗಿ ನನಗೆ ಕೆಲ ಒಡವೆಗಳನ್ನು ಆಕೆ ನೀಡಿದ್ದಳು ಎಂಬುದಾಗಿ ಪೊಲೀಸರಿಗೆ ವಿಚಾರಣೆ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ.
ಸಾವಿನಲ್ಲೂ ಸಾರ್ಥಕತೆ ಮೆರೆದ ಗೀತಾ: 7 ಜನರಿಗೆ ಅಂಗಾಂಗ ದಾನದ ಮೂಲಕ ಜೀವದಾನ
BREAKING: ಇನ್ಮುಂದೆ ಡಿ.26ರಂದು ಪ್ರತಿ ವರ್ಷ ‘ಗ್ರಾ.ಪಂ ಡಾಟಾ ಆಪರೇಟರ್’ಗಳ ದಿನವಾಗಿ ಆಚರಣೆ: ಸಚಿವ ಪ್ರಿಯಾಂಕ್ ಖರ್ಗೆ