ಮಂಡ್ಯ : 2019 ರಲ್ಲಿ ದೇವೇಗೌಡರನ್ನು ಕರೆದುಕೊಂಡು ಹೋಗಿ ಮೈತ್ರಿ ಹೆಸರಲ್ಲಿ ಅವರ ಕುತ್ತಿಗೆ ಕೊಯ್ದರು ಎಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
BIG NEWS : ಚಿತ್ರದುರ್ಗದಲ್ಲಿ ಬಿಜೆಪಿ ‘ಸಮನ್ವಯ’ ಸಭೆಯಲ್ಲಿ ಗಲಾಟೆ : ಓರ್ವ ಕಾರ್ಯಕರ್ತನ ಮೇಲೆ ಹಲ್ಲೆ
ಚುನಾವಣಾ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಟ್ಟ ಮಾತಿನಂತೆ ಉಳಿಸಿಕೊಂಡ ನಾಯಕರೆಂದರೆ ಅದು ಕುಮಾರಸ್ವಾಮಿ ಎಂದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದರು. ಕಾಂಗ್ರೆಸ್ ಸಚಿವರು ಶಾಸಕರು ದುರಹಂಕಾರದ ಮಾತು ಆಡುತ್ತಿದ್ದಾರೆ. ಜೆಡಿಎಸ್ ಕಾರ್ಯಕರ್ತರನ್ನು ಕೆರಳಿಸುವ ಮಾತುಗಳನ್ನು ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.
ನೀರಿನ ಕೊರತೆ ಹಿನ್ನೆಲೆಯಲ್ಲಿ ಐ.ಟಿ ಕಂಪನಿಗಳಿಗೆ ಕೇರಳದ ಗಾಳ: ಸಚಿವ ಎಂ.ಬಿ ಪಾಟೀಲ ಖಂಡನೆ
ಹೊಸ ತಂತ್ರಜ್ಞಾನದ ಮೂಲಕ ಎಚ್ ಡಿ ಕುಮಾರಸ್ವಾಮಿ ಅವರಿಗೆ ಆಪರೇಷನ್ ಮಾಡಲಾಗಿದೆ. ನಮ್ಮ ತಂದೆಯವರ ಬಳಿ ಪ್ರತಿದಿನ ಕಷ್ಟ ಹೇಳಿಕೊಂಡು ಜನ ಬರುತ್ತಾರೆ. ಮಾತೃ ಹೃದಯ ಇರುವ ವ್ಯಕ್ತಿ ಅಂದರೆ ಅದು ಎಚ್ ಡಿ ಕುಮಾರಸ್ವಾಮಿ.2019 ರಲ್ಲಿ ದೇವೇಗೌಡರನ್ನು ಕರೆದುಕೊಂಡು ಹೋಗಿ ಕುತ್ತಿಗೆ ಕೊಯ್ದರು ಎಂದು ವಾಗ್ದಾಳಿ ನಡೆಸಿದರು.
ಚನ್ನಪಟ್ಟಣದಲ್ಲಿ ಕಾರ್ಯಕರ್ತರ ಹೊಂದಾಣಿಕೆ ಇಲ್ಲದ ಕಾರಣ ‘ಅಮಿತ್ ಷಾ’ ರೋಡ್ ಶೋ: DKS
ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಅಣ್ಣ ತಮ್ಮನ ರೀತಿ ಕೆಲಸ ಮಾಡಿ. ಡಾಕ್ಟರ್ ಸಿ ಎನ್ ಮಂಜುನಾಥ್ ಪರ ಪಕ್ಷಾತೀತವಾಗಿ ಅಲೆ ಎದ್ದಿದೆ. ಕುಮಾರಸ್ವಾಮಿ ಗೆಲವು ಮಂಡ್ಯ ಜಿಲ್ಲೆಯ ಜನರ ಗೆಲುವಾಗಬೇಕು. ಕಳೆದ ಚುನಾವಣೆಯಲ್ಲಿ ಯಾರ ಬಗ್ಗೆಯೂ ಲಘುವಾಗಿ ಮಾತನಾಡಿಲ್ಲ.ಪ್ರತಿಯೊಬ್ಬರನ್ನು ವಿಶ್ವಾಸದಿಂದ ತೆಗೆದುಕೊಂಡು ಹೋಗುತ್ತೇನೆ ಎಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದರು.