Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘NHM ನೌಕರ’ರಿಗೆ ಗುತ್ತಿಗೆ ಅವಧಿ ವಿಸ್ತರಿಸಿದ ಆದೇಶ ನೀಡುವಂತೆ ಸರ್ಕಾರಕ್ಕೆ ‘KSHCOEA ಸಂಘ’ ಮನವಿ

11/07/2025 6:15 AM

BIG NEWS: ‘SSLC ವಿದ್ಯಾರ್ಥಿ’ಗಳ ಮಾರ್ಕ್ಸ್ ಹೆಚ್ಚಿಸಲು ‘ಶಿಕ್ಷಣ ಇಲಾಖೆ’ಯಿಂದ ಮಹತ್ವದ ಆದೇಶ | SSLC Exam 2025

11/07/2025 6:13 AM

ವಾಟ್ಸಾಪ್ ಮೂಲಕ ಜೂನಿಯರ್ ಗಳಿಗೆ ಕಿರುಕುಳ ನೀಡಿದರೆ `ರ‍್ಯಾಗಿಂಗ್’ ಗೆ ಸಮ : `UGC’ ಮಹತ್ವದ ಆದೇಶ

11/07/2025 6:12 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ‘SSLC ವಿದ್ಯಾರ್ಥಿ’ಗಳ ಮಾರ್ಕ್ಸ್ ಹೆಚ್ಚಿಸಲು ‘ಶಿಕ್ಷಣ ಇಲಾಖೆ’ಯಿಂದ ಮಹತ್ವದ ಆದೇಶ | SSLC Exam 2025
KARNATAKA

BIG NEWS: ‘SSLC ವಿದ್ಯಾರ್ಥಿ’ಗಳ ಮಾರ್ಕ್ಸ್ ಹೆಚ್ಚಿಸಲು ‘ಶಿಕ್ಷಣ ಇಲಾಖೆ’ಯಿಂದ ಮಹತ್ವದ ಆದೇಶ | SSLC Exam 2025

By kannadanewsnow0911/07/2025 6:13 AM

ಬೆಂಗಳೂರು: 2025-26ನೇ ಸಾಲಿನ ಎಸ್‌ಎಸ್‌ಎಲ್‍ಸಿ ಪರೀಕ್ಷೆಯ ಫಲಿತಾಂಶವನ್ನು ವೃದ್ಧಿಸುವುದು ಶಾಲಾ ಶಿಕ್ಷಣ ಇಲಾಖೆ ಮಹತ್ವದ ಕ್ರಮ ವಹಿಸಿದೆ. ಇದನ್ನು ಸಾಧಿಸುವ ಹಿನ್ನೆಲೆಯಲ್ಲಿ ಎಲ್ಲಾ ಶಾಲೆಗಳಲ್ಲಿ ಅನುಸರಿಸಬೇಕಾದ ವಿವಿಧ ಕ್ರಮಗಳ ಬಗ್ಗೆ ಸುತ್ತೋಲೆ ಹೊರಡಿಸಿದೆ. ಈ ಕ್ರಮಗಳನ್ನು ಶಾಲೆಗಳು ಕಡ್ಡಾಯವಾಗಿ ಪಾಲಿಸುವಂತೆಯೂ ಸೂಚಿಸಿದೆ.

ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಿದ್ದು, 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ವೃದ್ಧಿಗಾಗಿ ರಾಜ್ಯ ಹಾಗು ಜಿಲ್ಲೆಯಲ್ಲಿನ ವಿವಿಧ ಹಂತದ ಅಧಿಕಾರಿಗಳು ಈ ಮುಂದಿನಂತೆ ಕಾರ್ಯನಿರ್ವಹಿಸುವುದು.

1. ಡಿಸೆಂಬರ್-2025 ರ ಅಂತ್ಯದೊಳಗೆ ಪಠ್ಯಕ್ರಮ ಪೂರ್ಣಗೊಳಿಸುವಿಕೆ: ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಪಠ್ಯವಸ್ತುವನ್ನು ಶೈಕ್ಷಣಿಕ ವಾರ್ಷಿಕ ಮಾರ್ಗಸೂಚಿಯಂತೆ ಡಿಸೆಂಬರ್-2025 ರ ಅಂತ್ಯದೊಳಗೆ ಪೂರ್ಣಗೊಳಿಸಲು ಕ್ರಮವಹಿಸುವುದು.

2. ಶಾಲೆಯಲ್ಲಿಯೇ ಪರಿಹಾರ ಬೋಧನೆ:

ಶಾಲಾ ವರ್ಷದ ಆರಂಭದಿಂದಲೇ ವಿದ್ಯಾರ್ಥಿಗಳ ಮೂಲಭೂತ ಸಾಮರ್ಥ್ಯಗಳ ಮೌಲ್ಯಮಾಪನ ಮತ್ತು ಸೇತುಬಂಧ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಪರಿಹಾರ ಒದಗಿಸಲು ವಿವಿಧ ಅಭ್ಯಾಸಗಳನ್ನು ಈ ವರ್ಷ ಅಳವಡಿಸಿಕೊಳ್ಳಲಾಗಿದೆ. DSERTಯು 2025ರ ಜೂನ್‌ನಲ್ಲಿ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ನಡೆಸಿರುವ ಸೇತುಬಂಧ ಕಾರ್ಯಕ್ರಮ ಮತ್ತು ಎಲ್ಲಾ ವಿದ್ಯಾರ್ಥಿಗಳ FLN ಸಾಧನೆಯ ಮೌಲ್ಯಮಾಪನವನ್ನು ಸಾಫಲ್ಯ ಪರೀಕ್ಷೆಯ ಮೂಲಕ ಜುಲೈ ಮೊದಲನೇ ವಾರದಲ್ಲಿ ನಡೆಸಲಾಗಿದೆ.

ಸೇತುಬಂಧ ಮೌಲ್ಯಮಾಪನಗಳ ಆಧಾರದ ಮೇಲೆ ಗುರುತಿಸಲ್ಪಟ್ಟ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಬೋಧನಾ ತರಗತಿಗಳನ್ನು ಜುಲೈ- ಡಿಸೆಂಬರ್ 2025ರವರೆಗೆ ವರ್ಷವಿಡೀ ಶಾಲೆಯಲ್ಲಿ ಪ್ರತಿ ದಿನ ವೇಳಾಪಟ್ಟಿಯಂತೆ ನಡೆಸುವುದು. ಪ್ರತಿ ಶಾಲೆಗೆ ಗೊತ್ತುಪಡಿಸಿದ ಶಾಲಾವಾರು ವೇಳಾಪಟ್ಟಿಯನ್ನು ತಾಲ್ಲೂಕಿನ DIET ನೋಡಲ್ ಅಧಿಕಾರಿಗಳು ತಯಾರಿಸಿ ಆ ಶಾಲೆಗಳಲ್ಲಿ ವಾರದ ಐದು ದಿನ ಭೇಟಿ ನೀಡಿ ಶಾಲೆಯಲ್ಲಿ ನಡೆಯುತ್ತಿರುವ ಪಾಠ, ವಿಶೇಷ ತರಗತಿಗಳು ಹಾಗೂ ಪರಿಹಾರ ಬೋಧನಾ ತರಗತಿಗಳಲ್ಲಿ ಭಾಗವಹಿಸುವುದು ಹಾಗೂ ತಮ್ಮ ಹಾಜರಾತಿಯನ್ನು ಮತ್ತು ಪರಿವೀಕ್ಷಣಾ ವಿವರಗಳನ್ನು SATS ತಂತ್ರಾಂಶದ ಪರಿವೀಕ್ಷಣಾ ಆಪ್ (Inspection App)ನಲ್ಲಿ ಮಾಹಿತಿಯನ್ನು ಇಂದೀಕರಿಸುವುದು.

3. ಶಾಲೆಯಲ್ಲಿಯೇ ವಿಶೇಷ ತರಗತಿಗಳು:

ಜುಲೈ ಮಾಹೆಯಿಂದಲೇ ಪ್ರತಿದಿನ ಶಾಲಾ ಅವಧಿಯ ಮೊದಲು ಒಂದು ವಿಷಯಕ್ಕೆ ವಿಶೇಷ ತರಗತಿಯನ್ನು ಆಯೋಜಿಸುವುದು ಹಾಗೂ ಪ್ರತಿದಿನ ಶಾಲಾ ಅವಧಿಯ ನಂತರ ವಿದ್ಯಾರ್ಥಿಗಳ ಬರವಣಿಗೆಯ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಬರವಣಿಗೆಯ ಸಾಮರ್ಥ್ಯ ವೃದ್ಧಿಸಲು ವಿಷಯವಾರು ಮಾದರಿ ಪ್ರಶ್ನೆ ಪತ್ರಿಕೆ (Model Question Papers) ಗಳಿಗೆ ಉತ್ತರಗಳನ್ನು ಬರೆಯಿಸುವ ತರಗತಿಗಳನ್ನು ನಡೆಸುವುದು ಮತ್ತು ಗಟ್ಟಿಯಾಗಿ ಓದಿಸುವ ಅಭ್ಯಾಸವನ್ನು ಮಾಡಿಸುವುದು. Average, Below Average ಮತ್ತು Above Average ವಿದ್ಯಾರ್ಥಿಗಳ ಗುಂಪುಗಳನ್ನು ರಚಿಸಿ ಪ್ರತಿ ಶಿಕ್ಷಕರಿಗೆ ಸಮನಾಗಿ ವಿದ್ಯಾರ್ಥಿಗಳನ್ನು ದತ್ತು ನೀಡುವುದು.

4. ಶಾಲೆಯಲ್ಲಿ ಬೆಳಗಿನ ಪ್ರಾರ್ಥನಾ ಅವಧಿ ಚಟುವಟಿಕೆ:

ಶಾಲೆಯ ಬೆಳಗಿನ ಪ್ರಾರ್ಥನಾ ಅವಧಿಯಲ್ಲಿ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಆರೋಗ್ಯಕರ ಜೀವನ ಶೈಲಿ, ಮೊಬೈಲ್ ಪೋನ್ ಬಳಕೆಯನ್ನು ಸೀಮಿತಗೊಳಿಸುವುದು, ಪೌಷ್ಟಿಕ ಆಹಾರ ಸೇವನೆಯ ಮಹತ್ವ, ಪ್ರತಿದಿನ ಬೆಳಗಿನ ಅವಧಿಯಲ್ಲಿ ನೀಡುವ ರಾಗಿ ಮಾಲ್ಟ್, ಹಾಲು, ಊಟದ ಸಂದರ್ಭದಲ್ಲಿ ನೀಡುವ ಬಾಳೆಹಣ್ಣು, ಮೊಟ್ಟೆ ಹಾಗೂ ತರಕಾರಿಗಳ ಬಳಕೆ ಇಂತಹ ವಿಷಯಗಳಿಗೆ ಒತ್ತು ನೀಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದು. ಪ್ರತಿ ವಿದ್ಯಾರ್ಥಿಯು ಸಮತೋಲಿತ ಜೀವನ ಶೈಲಿಯನ್ನು ರೂಢಿಸಿಕೊಳ್ಳಲು ತಿಳಿಸುವುದು.

5. ಶಾಲೆಯಲ್ಲಿಯೇ ಪ್ರತಿ ಪಾಠದ ಕಲಿಕೆಯ ಮೌಲ್ಯಾಂಕನ ಮತ್ತು ವಿದ್ಯಾರ್ಥಿವಾರು ಕಲಿಕೆ ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆ:

ಪ್ರತಿ ಪಾಠ ಪೂರ್ಣಗೊಂಡ ನಂತರ, ಪಾಠ ಆಧಾರಿತ ಲಿಖಿತ ಕಿರು ಪರೀಕ್ಷೆ ಮತ್ತು ಅದರ ಮೌಲ್ಯಮಾಪನವನ್ನು ಶಿಕ್ಷಕರು ಕೈಗೊಳ್ಳತಕ್ಕದ್ದು. ವಿದ್ಯಾರ್ಥಿ ಮತ್ತು ಶಾಲೆಗಳ SSLC ಫಲಿತಾಂಶ ಸುಧಾರಣೆಗಾಗಿ ವಿದ್ಯಾರ್ಥಿವಾರು, ಶಾಲೆವಾರು ಫಲಿತಾಂಶ ವಿವರಗಳನ್ನು SATSನಲ್ಲಿ ಇಂದೀಕರಿಸುವುದು. ವಿದ್ಯಾರ್ಥಿವಾರು, ಶಾಲಾವಾರು, ಕ್ಲಸ್ಟರ್‌ವಾರು, ತಾಲ್ಲೂಕುವಾರು ಮತ್ತು ಜಿಲ್ಲಾವಾರು ವಿವರಗಳನ್ನು SATSನಿಂದ ಪಡೆದು DIETಗಳಲ್ಲಿ ಮತ್ತು ಎಲ್ಲಾ ಆಡಳಿತಾತ್ಮಕ ಹಂತಗಳಲ್ಲಿ ಪರಿಶೀಲಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದು.

6. ಶಾಲೆಗಳಲ್ಲಿ ದೈಮಾಸಿಕ ಪೋಷಕ-ಶಿಕ್ಷಕರ ಸಭೆಗಳು:

ಫಲಿತಾಂಶ ವೃದ್ಧಿಗಾಗಿ ಶಾಲೆಗಳಲ್ಲಿ ಕೈಗೊಳ್ಳಲಾಗುತ್ತಿರುವ ಉಪಕ್ರಮಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲು 10ನೇ ತರಗತಿಯ ಪೋಷಕರಿಗೆ ಧೈಮಾಸಿಕ ಪೋಷಕ-ಶಿಕ್ಷಕರ ಸಭೆಗಳನ್ನು ಪ್ರತಿ ಶಾಲೆಯಲ್ಲಿ ನಡೆಸುವುದು. ವಿದ್ಯಾರ್ಥಿಗಳಿಗೆ ಮನೆಯಲ್ಲಿ ಸೂಕ್ತವಾದ ಬೆಂಬಲವನ್ನು ನೀಡಲು ಪೋಷಕರೊಂದಿಗೆ ಸಮಾಲೋಚನೆ ನಡೆಸುವುದು. ಇದರೊಂದಿಗೆ SSLCಯ ಒಂದು ಮತ್ತು ಎರಡನೇ ಪರೀಕ್ಷೆಗಳ ದಿನಾಂಕಗಳು ಪ್ರಕಟವಾದ ಕೂಡಲೇ ಅದರ ವಿವರಗಳನ್ನು ಮತ್ತು ಪರೀಕ್ಷೆಗೆ ವಿದ್ಯಾರ್ಥಿಗಳು ಒತ್ತಡ ರಹಿತವಾಗಿರುವಂತೆ ನೋಡಿಕೊಳ್ಳುವ ಬಗ್ಗೆ ಮಾರ್ಗದರ್ಶನ ನೀಡಲು ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಸೆಪ್ಟೆಂಬರ್ ಮಾಹೆಯಲ್ಲಿ ಪೋಷಕರಿಗೆ ಅರ್ಧ ದಿನದ ಕಾರ್ಯಾಗಾರವನ್ನು ನಡೆಸುವುದು. ಮಾರ್ಚ್ 2026ರ ಅಂತ್ಯದವರೆಗೂ ಸದರಿ ತ್ರೈಮಾಸಿಕ ಸಭೆಗಳನ್ನು ನಡೆಸುವುದು.

7. Early Warning System ಶಾಲೆಗೆ ವಿದ್ಯಾರ್ಥಿಗಳು ಗೈರು ಹಾಜರಾಗದಂತೆ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು:

SATS ತಂತ್ರಾಂಶದ ಮೂಲಕ SSLC ವಿದ್ಯಾರ್ಥಿಗಳ ತರಗತಿವಾರು ಹಾಜರಾತಿಯನ್ನು ಪ್ರತಿದಿನ ಗಮನಿಸುವುದು ಹಾಗೂ Early Warning System ಮೂಲಕ flag ಮಡುವ ವಿದ್ಯಾರ್ಥಿ ವಿವರಗಳನ್ನು ಗಮನಿಸಿ ಮುಖ್ಯ ಶಿಕ್ಷಕರು, ವಿಷಯ ಶಿಕ್ಷಕರು ಮತ್ತು ಮಹಿಳಾ SDMC ಸದಸ್ಯರು ತರಗತಿಗೆ ಏಳು ದಿನಗಳಿಗಿಂತ ಹೆಚ್ಚು ಕಾಲ ಅಥವಾ ನಿರಂತರವಾಗಿ ಗೈರುಹಾಜರಾಗುವ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಸಮಾಲೋಚನೆ ನಡೆಸುವುದು. ತರಗತಿಗೆ ಗೈರುಹಾಜರಾಗಲು ಕಾರಣಗಳನ್ನು ಗುರುತಿಸುವುದು ಮತ್ತು ವಿದ್ಯಾರ್ಥಿಯು ಶಾಲೆಗೆ ಮರಳುವುದನ್ನು ಖಚಿತಪಡಿಸಿಕೊಳ್ಳುವುದು.

8. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರುವುದು:

ಎಸ್.ಡಿ.ಎಂ.ಸಿ ಹಾಗೂ ಇನ್ನಿತರೆ ಭಾಗೀದಾರರ ಸಹಕಾರದೊಂದಿಗೆ ಹತ್ತನೇ ತರಗತಿಯ ಶಾಲೆಯಿಂದ ಹೊರಗುಳಿದ ಮಕ್ಕಳ ಮನೆಗೆ ಭೇಟಿ ನೀಡಿ ವಿದ್ಯಾರ್ಥಿಯನ್ನು ಶಾಲೆಗೆ ಕರೆ ತರಲು ಮನವೊಲಿಸುವುದು, ವಿದ್ಯಾರ್ಥಿಗಳು ಈ ರೀತಿಯಾಗಿ ನಿರಂತರವಾಗಿ ಗೈರು ಹಾಜರಾಗುವ ಕುರಿತು ವಿದ್ಯಾರ್ಥಿವಾರು Case Study ನಡೆಸಿ ಸೂಕ್ತ ಕಾರಣಗಳನ್ನು ಹುಡುಕಿ ಗೈರು ಹಾಜರಿ ಕಡಿಮೆ ಮಾಡಲು ಕ್ರಮವಹಿಸುವುದು.

9. ಶಾಲೆಗಳಲ್ಲಿ Buddy Pairing ಮೂಲಕ ನಿಧಾನಗತಿ ಕಲಿಕಾ ವಿದ್ಯಾರ್ಥಿಗಳ ಕಲಿಕೆ ಬಲವರ್ಧನೆ:

ನಿಧಾನಗತಿ ಕಲಿಕಾ ಲಕ್ಷಣಗಳಿರುವ ವಿದ್ಯಾರ್ಥಿಗಳ ಕಲಿಕೆಯನ್ನು ಉತ್ತಮಪಡಿಸಲು, ಕಲಿಕಾ ಪುಗತಿ ಸಾಧಿಸಿರುವ ವಿದ್ಯಾರ್ಥಿಗಳೊಂದಿಗೆ ಕಲಿಯಲು ಗುಂಪು ಅಧ್ಯಯನದಂತಹ ವಿವಿಧ ಚಟುವಟಿಕೆಗಳನ್ನು ರೂಪಿಸಿ ಕಲಿಕೆ ಸಾಧಿಸಲು ವಿಫುಲ ಅವಕಾಶಗಳನ್ನು ಒದಗಿಸುವುದು.

ಜಿಲ್ಲಾ ಮತ್ತು ತಾಲ್ಲೂಕು ಹಂತದ ಅಧಿಕಾರಿಗಳನ್ನು 2-3 ಕ್ಲಸ್ಟರ್ ಒಳಗೊಂಡಂತೆ Cluster Nodal Officer ಗಳನ್ನಾಗಿ DIET ಪ್ರಾಂಶುಪಾಲರು ನೇಮಿಸುವುದು. ಈ ನೋಡಲ್ ಅಧಿಕಾರಿಗಳು ಕಡ್ಡಾಯವಾಗಿ ಪ್ರತಿದಿನ ಒಂದು ಶಾಲೆಗೆ ಭೇಟಿ ನೀಡಬೇಕು. ಆ ಸಂದರ್ಭದಲ್ಲಿ ನಿಧಾನಗತಿಯ ಕಲಿಕಾ ವಿದ್ಯಾರ್ಥಿಗಳ ಕಲಿಕೆ ಪ್ರಗತಿಯಾಗಿರುವುದನ್ನು ವೀಕ್ಷಿಸಿ, SATS ತಂತ್ರಾಂಶದ ಪರಿವೀಕ್ಷಣಾ (Inspection App)ನಲ್ಲಿ ಮಾಹಿತಿಯನ್ನು ಇಂದೀಕರಿಸುವುದು.

10.ಹತ್ತನೇ ತರಗತಿಯ ವಿಷಯವಾರು, ಘಟಕವಾರು ಪ್ರಶ್ನೆ ಕೋಠಿ:

ಹತ್ತನೇ ತರಗತಿಯ ವಿಷಯವಾರು, ಘಟಕವಾರು ಪ್ರಶ್ನೆಕೋಠಿ ಗಳನ್ನು ವಿವಿಧ ಡಯಟ್‌ ಮುಖಾಂತರ DSERT ಈಗಾಗಲೇ ಸಿದ್ಧಪಡಿಸಿದ್ದು, ಈ DECOR DSERTO Website (https://dsert.karnataka.gov.in) ಪ್ರಕಟಿಸಲಾಗಿದೆ. ಇದರಲ್ಲಿ ಪ್ರಶ್ನೆ ಪತ್ರಿಕೆಯ ಮಾದರಿಯಂತೆ ಬಹು ಆಯ್ಕೆ ಪ್ರಶ್ನೆಗಳು, ಕಿರು ಉತ್ತರದ ಪ್ರಶ್ನೆಗಳು ಮತ್ತು ಧೀರ್ಘ ಉತ್ತರದ ಪ್ರಶ್ನೆಗಳಿದ್ದು ಎಲ್ಲಾ ವಿಷಯಗಳ ಪ್ರಶ್ನೆಕೋಠಿಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ (KSEAB) ವೆಬ್‌ಸೈಟ್ (https://kseab.karnataka.gov.in) ನಲ್ಲಿಯೂ ಸಹ ಲಭ್ಯ ಮಾಡಲಾಗಿದೆ. ಪ್ರಶ್ನೆಕೋಠಿಯಲ್ಲಿನ ಪ್ರಶ್ನೆಗಳನ್ನು ಸುಲಭ (Easy), ಸಾಧಾರಣ (Average) ಹಾಗೂ ಕ್ಲಿಷ್ಟಕರ (Difficult) ಎಂದು ಶ್ರೇಣೀಕರಿಸಲಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ಪ್ರಶ್ನೆಕೋಠಿಯನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳ ಹೆಚ್ಚಿನ ಅಭ್ಯಾಸಕ್ಕೆ ಬಳಸುವಂತೆ ಕ್ರಮವಹಿಸುವುದು.

2025-26 ರ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳಲ್ಲಿ ನಡೆಸುವ ಪಾಠವಾರು ಕಿರು ಪರೀಕ್ಷೆ, ರೂಪಣಾತ್ಮಕ ಮೌಲ್ಯಮಾಪನಗಳು (FA-1,2,3 ಮತ್ತು 4) ಮತ್ತು ಸಂಕಲನಾತ್ಮಕ ಮೌಲ್ಯಮಾಪನ-01ಕ್ಕೆ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವಾಗ ಈ ಪ್ರಶ್ನೆಕೋಠಿಗಳನ್ನು ಬಳಸಿಕೊಳ್ಳುವುದು. ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು SATSನಲ್ಲಿ ನಮೂದಿಸುವುದರಿಂದ ಈ ಅಂಕಗಳ ಆಧಾರದ ಮೇಲೆ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಪರಿಹಾರ ಒದಗಿಸುವುದು.

11.ವಿದ್ಯಾರ್ಥಿಗಳ ನಿರಂತರ ಮೌಲ್ಯಮಾಪನ:

ಪಾಠ ಆಧಾರಿತ ಮೌಲ್ಯಾಂಕನ (ಘಟಕ ಪರೀಕ್ಷೆ) ಮತ್ತು ರೂಪಣಾತ್ಮಕ ಮೌಲ್ಯಾಂಕನಗಳನ್ನು (FA-1, 2, 3, 4) ಮಾಡಿ ವಿದ್ಯಾರ್ಥಿಗಳ ಪ್ರಗತಿಯನ್ನು ವಿಶ್ಲೇಷಿಸುವುದು ಹಾಗೂ SA-1 ಮತ್ತು ಪೂರ್ವಸಿದ್ಧತಾ ಪರೀಕ್ಷೆಗಳನ್ನು ವೆಬ್‌ಕಾಸ್ಟಿಂಗ್‌ ವೀಕ್ಷಣೆಯಲ್ಲಿ ನಡೆಸುವುದು.

12. Wakeup call:

ಪ್ರತಿದಿನ ಮುಂಜಾನೆ ವಿದ್ಯಾರ್ಥಿಗಳು ಸಕ್ರಿಯವಾಗಿ ಅಭ್ಯಾಸ ಮಾಡುತ್ತಿರುವುದನ್ನು ಪರಿಶೀಲಿಸಲು ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು Wakeup call ಮಾಡುವುದು.

13. ಕ್ರೀಡಾ ಅವಧಿ:

ವಿದ್ಯಾರ್ಥಿಗಳಲ್ಲಿ ಒತ್ತಡ ಕಡಿಮೆ ಮಾಡಲು ವಾರದಲ್ಲಿ ಕನಿಷ್ಠ ಒಂದು ಅವಧಿಯನ್ನು ಕ್ರೀಡೆಗೆ ಮೀಸಲಿಡುವುದು.

14. ಮೊಬೈಲ್ ಫೋನ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯ ಗೀಳನ್ನು ತಪ್ಪಿಸುವುದು:

ಮೊಬೈಲ್ ಫೋನ್ ಹಾಗೂ ಜಾಲತಾಣಗಳ ಬಳಕೆಯ ಗೀಳಿನಿಂದ ಉಂಟಾಗುವ ಅನಾಹುತಗಳ ಬಗ್ಗೆ ಶಿಕ್ಷಕರು ವಾರದಲ್ಲಿ ಕನಿಷ್ಠ ಎರಡು ಬಾರಿ ಎಚ್ಚರಿಕೆ ನೀಡಿ, ಅವುಗಳನ್ನು ಹೆಚ್ಚಾಗಿ ಬಳಸದಂತೆ ಸಲಹೆ ನೀಡುವುದು. ಹತ್ತನೇ ತರಗತಿಯ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ಪರೀಕ್ಷೆಯ ಕಡೆಗೆ ಹೆಚ್ಚಿನ ಗಮನ ಕೇಂದ್ರೀಕರಿಸುವಂತೆ ವಿದ್ಯಾರ್ಥಿಗಳನ್ನು ಪ್ರೆರೇಪಿಸುವುದು.

15. ಶಾಲೆಯಲ್ಲಿಯೇ ಆರೋಗ್ಯ ತಪಾಸಣೆ:

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ (HFW) ವತಿಯಿಂದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (RBSK)ದ ಮೂಲಕ ಹತ್ತನೇ ತರಗತಿಯ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನು ಜುಲೈ ಮಾಹೆಯಲ್ಲಿಯೇ ಹಮ್ಮಿಕೊಳ್ಳಲು ಕ್ರಮವಹಿಸುವುದು. ಈ ಮೂಲಕ ವಿದ್ಯಾರ್ಥಿಗಳಲ್ಲಿರುವ ಪೌಷ್ಟಿಕ ನ್ಯೂನ್ಯತೆ, ಇತರೆ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳುವುದು. ಜಂತು ಹುಳು ನಿವಾರಣೆಗೂ ಅಗತ್ಯ ಕ್ರಮವಹಿಸುವುದು. ಈ ಕುರಿತು ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಅಗತ್ಯ ಸಹಕಾರ ಒದಗಿಸಿ ಕಾರ್ಯ ಪೂರ್ಣಗೊಂಡಿರುವುದನ್ನು ಖಾತ್ರಿಪಡಿಸಿಕೊಳ್ಳುವುದು. ಅಲ್ಲದೇ RBSK Website ನಿಂದ ಪಡೆಯಲಾದ ವಿದ್ಯಾರ್ಥಿಗಳ ದತ್ತಾಂಶವನ್ನು SATS ತಂತ್ರಾಂಶದಲ್ಲಿ ಇಂಧೀಕರಿಸಲು ಕ್ರಮವಹಿಸಲಾಗಿದೆ. ಆರೋಗ್ಯ ತಪಾಸಣಾ ಸಂದರ್ಭದಲ್ಲಿ ಸಮಸ್ಯೆಗಳಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಕಂಡುಬಂದಲ್ಲಿ ನಿರಂತರ ಅನುಪಾಲನೆ ಮಾಡುವುದು.

16. ಶಾಲೆಯಲ್ಲಿಯೇ ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಕಾರ್ಯಾಗಾರಗಳ ಆಯೋಜನೆ:

ವಿದ್ಯಾರ್ಥಿಗಳಿಗೆ ಅಕ್ಟೋಬರ್ ಮಾಹೆಯ ಎರಡನೇ ವಾರದಲ್ಲಿ (ದಸರಾ ರಜೆ ನಂತರ) ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಕುರಿತು ಕಾರ್ಯಾಗಾರವನ್ನು ನಡೆಸುವುದು. ಮತ್ತು ಪಿ.ಯು.ಸಿ ನಂತರ ಪಡೆಯಬಹುದಾದ ವಿವಿಧ ವೃತ್ತಿಪರ ಕೋರ್ಸ್‌ಗಳ ಪರಿಚಯ ಮಾಡಿಕೊಡುವ ಮೂಲಕ ದೊರೆಯಬಹುದಾದ ವಿವಿಧ ವೃತ್ತಿಪರ ಅವಕಾಶಗಳ ಕುರಿತು ತಿಳಿಸುವುದು. ಶಿಕ್ಷಕರು ವಾರದಲ್ಲಿ ಒಂದು ದಿನ 10-15 ನಿಮಿಷಗಳ ಕಾಲ ವೃತ್ತಿಪರ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಅವರ ಕುತೂಹಲ, ಆಸೆ-ಆಕಾಂಕ್ಷೆಗಳ ಬಗ್ಗೆ ಮಾರ್ಗದರ್ಶನ ನೀಡುವುದು.

17.ಕಡಿಮೆ ಸಾಧನೆಯ ಶಾಲೆಗಳ ಗುರುತಿಸುವಿಕೆ:

ಕಳೆದ ಎರಡು ವರ್ಷಗಳಲ್ಲಿ ಕಡಿಮೆ ಫಲಿತಾಂಶವನ್ನು ಪಡೆದ ಶಾಲೆಗಳನ್ನು ಗುರುತಿಸಿ, ಆಯಾ ಶಾಲಾ ಹಂತದಲ್ಲಿರುವ ಸಮಸ್ಯೆಗಳನ್ನು ನಿಯಮಾನುಸಾರ ಪರಿಹರಿಸಲು ಜಿಲ್ಲಾ ಉಪನಿರ್ದೇಶಕರು(ಆಡಳಿತ) ಅಗತ್ಯ ಕ್ರಮ ಕೈಗೊಳ್ಳುವುದು. 2023-24 ಮತ್ತು 2024-253 ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶದ ವಿಶ್ಲೇಷಣೆ ಆಧಾರದ ಮೇಲೆ ಜಿಲ್ಲಾ ಸರಾಸರಿಗಿಂತ ಕಡಿಮೆ ಫಲಿತಾಂಶ ದಾಖಲಿಸಿರುವ ಶಾಲೆಗಳು ಫಲಿತಾಂಶ ಸುಧಾರಣೆಗಾಗಿ ದೀರ್ಘಾವಧಿ, ಮಧ್ಯಮಾವಧಿ ಮತ್ತು ಅಲ್ಪಾವಧಿ ಕ್ರಿಯಾ ಯೋಜನೆಗಳನ್ನು ರೂಪಿಸುವುದು. ಸಮಗ್ರವಾಗಿ ಮತ್ತು ವಿಷಯವಾರು ಶೂನ್ಯ ಫಲಿತಾಂಶಗಳನ್ನು ಪಡೆದ ಶಾಲೆಗಳಲ್ಲಿ ಅಗತ್ಯ ಪರಿಹಾರಗಳನ್ನು ಒದಗಿಸಲು ಸಾಧ್ಯವಾಗದಿದ್ದಲ್ಲಿ ಇಂತಹ ಶಾಲೆಗಳನ್ನು Watchlist ನಲ್ಲಿ ಹಾಕುವುದು. ಮಕ್ಕಳ ಕಲಿಕೆ ಮತ್ತು ಶಿಕ್ಷಕರ ಬೋಧನೆಯನ್ನು ನಿರಂತರವಾಗಿ ಪರಿಶೀಲಿಸಿ, ಮಾರ್ಗದರ್ಶನ ನೀಡುವುದು.

18. ನಿರಂತರ ಕಣಾವಲಿಸಬೇಕಾದ ಶಾಲೆಗಳು (Watchlist Schools): ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ SSLC ವಾರ್ಷಿಕ ಫಲಿತಾಂಶದಲ್ಲಿ ಶೂನ್ಯ ಫಲಿತಾಂಶ ಪಡೆದ ಶಾಲೆಗಳು, ರಾಜ್ಯ ಮತ್ತು ಜಿಲ್ಲಾ ಫಲಿತಾಂಶಕ್ಕಿಂತ ಕಡಿಮೆ ಪಡೆದಿರುವ ಶಾಲೆಗಳು ಮತ್ತು ನಿರಂತರವಾಗಿ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರು (ಅಭಿವೃದ್ಧಿ ಮತ್ತು ಆಡಳಿತ) ರವರು ನಿರಂತರವಾಗಿ ಭೇಟಿ ನೀಡಿ ಫಲಿತಾಂಶ ಸುಧಾರಣೆಗೆ ಕ್ರಮವಹಿಸುವುದು.

19. ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಶಾಲಾ ದತ್ತು ಕಾರ್ಯಕ್ರಮ:

WatchList ನಲ್ಲಿ ಗುರುತಿಸಿರುವ ಶಾಲೆಗಳನ್ನು ಶೈಕ್ಷಣಿಕ ಪ್ರಗತಿಗಾಗಿ ಶಿಕ್ಷಣ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಹಂತದ ವಿವಿಧ ಸ್ತರದ ಅಧಿಕಾರಿಗಳಿಗೆ ದತ್ತು ನೀಡುವುದು. ದತ್ತು ಪಡೆದ ಅಧಿಕಾರಿಗಳು ಈ ಶಾಲೆಗಳಿಗೆ ನಿರಂತರವಾಗಿ ಭೇಟಿ ನೀಡಿ ಶಿಕ್ಷಕರ ಬೋಧನೆ ಮತ್ತು ವಿದ್ಯಾರ್ಥಿಗಳ ಕಲಿಕೆ ಪರಿಶೀಲಿಸಿ ಅಗತ್ಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವುದು.

20.ಶುಕ್ರವಾರ ಶಾಲಾ ಭೇಟಿ (Friday at School):

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ರಾಜ್ಯ ಮತ್ತು ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಪ್ರತಿ ಶುಕ್ರವಾರ ಶಾಲೆಗಳಿಗೆ ಭೇಟಿ ನೀಡಿ ತರಗತಿ ಕಲಿಕಾ ಪ್ರಕ್ರಿಯೆ ಮತ್ತು ವಿದ್ಯಾರ್ಥಿಗಳ ಕಲಿಕಾ ಸಾಧನೆಯನ್ನು ಅವಲೋಕಿಸಿ ಪರಿಶೀಲನೆ ನಡೆಸಿ ಮಾರ್ಗದರ್ಶನ ನೀಡುವುದು, ಸದರಿ ಭೇಟಿ ಮಾಹಿತಿಗಳನ್ನು SATS ತಂತ್ರಾಂಶದ ಪರಿವೀಕ್ಷಣಾ ಆಪ್ (Inspection App)ನಲ್ಲಿ ಇಂದೀಕರಿಸುವುದು.

21.ಶಾಲೆಯಲ್ಲಿಯೇ ಹತ್ತನೇ ತರಗತಿಯ ವಿದ್ಯಾರ್ಥಿಗಳ ಉತ್ತಮ ಕಲಿಕೆಗಾಗಿ ಮಾಹೆವಾರು ಪ್ರಗತಿ ಪರಿಶೀಲನಾ ಸಭೆಗಳು:

ಹತ್ತನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಸಾಧನೆಯನ್ನು ಕೇಂದ್ರೀಕರಿಸಿ ಮಾಹೆವಾರು ಪುಗತಿ ಪರಿಶಿಲನಾ ಸಭೆಗಳನ್ನು ಜುಲೈ 20250 ಮಾಹೆಯಿಂದಲೇ ಜಿಲ್ಲಾ ಹಂತದಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ರಾಜ್ಯ ಹಂತದಲ್ಲಿ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಮತ್ತು ಅಪರ ಆಯುಕ್ತರುಗಳಾದ ಧಾರವಾಡ ಮತ್ತು ಕಲಬುರಗಿರವರು ಅವರವರ ಕಾರ್ಯವ್ಯಾಪ್ತಿಯಲ್ಲಿ ನಡೆಸುವುದು.

22. ಶಿಕ್ಷಕರಿಗೆ ಪುನಶ್ಚತನ ತರಬೇತಿ ಆಯೋಜನೆ:

ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಶಿಕ್ಷಕರಿಗೆ ಫಲಿತಾಂಶ ಉತ್ತಮಪಡಿಸಲು ಶಾಲೆಯ ದಿನಗಳನ್ನು ಹೊರತುಪಡಿಸಿ ಪುನಶ್ಚತನ ತರಬೇತಿಗಳನ್ನು ಆಯೋಜಿಸುವುದು.
23.ಎಸ್.ಎಸ್.ಎಲ್.ಸಿ ಪರೀಕ್ಷೆ-1 ಮತ್ತು ಪರೀಕ್ಷೆ-2ರ ವೇಳಾಪಟ್ಟಿಯನ್ನು ಮುಂಚಿತವಾಗಿ ಪ್ರಕಟಿಸುವ ಕುರಿತು.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು (KSEAB) ಪರೀಕ್ಷೆ-1 ಮತ್ತು ಪರೀಕ್ಷೆ -2ರ ವೇಳಾಪಟ್ಟಿಯನ್ನು ಆಗಸ್ಟ್ 2025ರ ಮಾಹೆಯ ಅಂತಿಮ ವಾರದಲ್ಲಿ ಪಕಟಿಸುತ್ತಿದ್ದು, ಇದರ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಒದಗಿಸುವ ಮೂಲಕ ಪರೀಕ್ಷೆಗೆ ಹೆಚ್ಚಿನ ತಯಾರಿ ನಡೆಸಲು ಸಾಕಷ್ಟು ಸಮಯ ದೊರೆಯಲಿದೆ. ಈ ಮೂಲಕ ವಿದ್ಯಾರ್ಥಿಗಳು ಪರೀಕ್ಷೆಯನ್ನು ಭಯ ಮುಕ್ತವಾಗಿ ಆತ್ಮ ವಿಶ್ವಾಸದಿಂದ ಎದುರಿಸಲು ಸಾಧ್ಯವಾಗುತ್ತದೆ. ಪರೀಕ್ಷೆಯ ವಿಧಿ-ವಿಧಾನಗಳ ಕುರಿತು ವಿವರವಾದ FAQಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ (KSEAB) ವೆಬ್‌ಸೈಟ್ (https://kseab.karnataka.gov.in) ನಲ್ಲಿ ಆಗಸ್ಟ್ ಅಂತ್ಯದೊಳಗೆ ನೀಡುವುದು.

24.ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪ್ರಕಟಿಸುವ ಕುರಿತು:

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ (KSEAB) ಜುಲೈ ಮಾಹೆಯ ಅಂತ್ಯಕ್ಕೆ 6 ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಉತ್ತರ ಕೀಲಿ ಸಹಿತ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ (KSEAB) ವೆಬ್‌ಸೈಟ್ (https://kseab.karnataka.gov.in) ನಲ್ಲಿ ಪಕಟಿಸುವುದು. ಇವುಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭ್ಯಾಸ ಮಾಡಿಸಿ ಪರೀಕ್ಷೆಯಲ್ಲಿ ಉತ್ತರಿಸುವ ವಿಧಾನ ತಿಳಿಸುವುದರೊಂದಿಗೆ ಪರೀಕ್ಷಾ ಭಯ ನಿವಾರಣೆಯಾಗಲು ಸಾಧ್ಯವಾಗುವುದು.

25.ವಿಷಯವಾರು ನೀಲಿ ನಕ್ಷೆ ಪ್ರಕಟಿಸುವ ಕುರಿತು:

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು (KSEAB) ಜುಲೈ ಮಾಹೆಯ ಅಂತ್ಯಕ್ಕೆ ಘಟಕವಾರು ಆಧಾರಿತ ನೀಲಿ ನಕ್ಷೆಯನ್ನು ಬಿಡುಗಡೆಗೊಳಿಸಲಿದ್ದು, ಇದರಲ್ಲಿ ಘಟಕವಾರು ಅಂಕಗಳು, ಪ್ರಶ್ನೆಯ ಸ್ವರೂಪ, ಕಠಿಣತೆಯ ಮಟ್ಟವನ್ನು ತಿಳಿಸಲಾಗುವುದು.

26. ಪೂರ್ವಸಿದ್ಧ ತಾ ಪರೀಕ್ಷೆಗಳನ್ನು ನಡೆಸುವ ಬಗ್ಗೆ:

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು (KSEAB) SA-1 ಹಾಗೂ 3 ಪೂರ್ವಸಿದ್ಧತಾ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲಿದ್ದು, ಎಲ್ಲಾ ಶಾಲೆಗಳು ಇವುಗಳನ್ನು ಬಳಸಿ 2026ರ ಜನವರಿ ಮೊದಲನೆ ವಾರದಲ್ಲಿ ಮೊದಲ ಪೂರ್ವ ಸಿದ್ಧತಾ ಪರೀಕ್ಷೆ, ಜನವರಿ ಕೊನೆಯ ವಾರದಲ್ಲಿ ಎರಡನೇ ಪೂರ್ವ ಸಿದ್ಧತಾ ಪರೀಕ್ಷೆ ಮತ್ತು ಫೆಬ್ರವರಿ ಕೊನೆಯ ವಾರದಲ್ಲಿ ಮೂರನೇ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸುವುದು. ಈ ಎಲ್ಲಾ ಪರೀಕ್ಷೆಗಳನ್ನು Webcasting ಸಹಿತವಾಗಿ ನಡೆಸುವುದು.

27. ಮೇಲುಸ್ತುವಾರಿ ಅಧಿಕಾರಿಗಳ ಜವಾಬ್ದಾರಿ:

ಎಲ್ಲಾ ಫಲಿತಾಂಶದ ಅಭಿವೃದ್ಧಿಗಾಗಿ ಕೈಗೊಳ್ಳುವ ಕಾರ್ಯಚಟುವಟಿಕೆಗಳ ಮೇಲುಸ್ತುವಾರಿಯನ್ನು ನಡೆಸುವುದು ಜಿಲ್ಲಾ ಹಾಗೂ ತಾಲ್ಲೂಕು ಹಂತದ ಎಲ್ಲಾ ಅಧಿಕಾರಿಗಳ ಜವಾಬ್ದಾರಿಯಾಗಿದ್ದು, ಉಪನಿರ್ದೇಶಕರು ಆಡಳಿತ ಮತ್ತು ಅಭಿವೃದ್ಧಿರವರು ಈ ಕಾರ್ಯವನ್ನು ನಿರ್ವಹಿಸುವುದು. DIET ಮತ್ತು CTEನ ಅಧಿಕಾರಿಗಳು ಸೋಮವಾರದಿಂದ ಒಂದೊಂದು ಶಾಲೆಗೆ ಭೇಟಿ ನೀಡಿ ಶುಕ್ರವಾರದವರೆಗೆ ಪ್ರತಿದಿನವೂ ಒಂದೊಂದು ಪರಿಶೀಲಿಸುವುದು.

28. ಜಿಲ್ಲಾ ಹಂತದಲ್ಲಿ ಪ್ರಗತಿ ಪರಿಶೀಲನಾ ಸಭೆ:

ಜಿಲ್ಲಾಧಿಕಾರಿಗಳು ಪ್ರತಿ ಎರಡು ತಿಂಗಳಿಗೊಮ್ಮೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಉಪನಿರ್ದೇಶಕರು ಆಡಳಿತ ಮತ್ತು ಅಭಿವೃದ್ಧಿ, ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸುವುದು. ಪ್ರತಿ ಪಗತಿ ಪರಿಶೀಲನಾ ಸಭೆಯಲ್ಲಿ, ಹಿಂದಿನ ಸಭೆಗಳಲ್ಲಿ ನಿರ್ಣಯಿಸಲಾದ ಅಂಶಗಳ ಆಧಾರದ ಮೇಲೆ ಕೈಗೊಂಡ ಅನುಪಾಲನಾ ಕ್ರಮಗಳನ್ನು ಕಡ್ಡಾಯವಾಗಿ ಪರಿಶೀಲಿಸುವುದು.

29. ಅನುತ್ತೀರ್ಣ ವಿದ್ಯಾರ್ಥಿಗಳ ಮರು ದಾಖಲಾತಿ:

ಸರ್ಕಾರದ ಆದೇಶ ಸಂಖ್ಯೆ: ಸಂಖ್ಯೆ: ಇಪಿ 90 ಎಸ್‌ಎಲ್‌ಬಿ 2024, ದಿನಾಂಕ:24.07.2024 ರಂತೆ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮರುದಾಖಲಾಗಲು ಅವಕಾಶ ನೀಡಲಾಗಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗುವಂತೆ ಕ್ರಮವಹಿಸುವುದು. ಈ ಕುರಿತಾಗಿ ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿ ವ್ಯಾಪಕ ಪುಚಾರ ಕೈಗೊಳ್ಳುವುದು.

ಈ ಮೇಲ್ಕಂಡ ಕಾರ್ಯಕ್ರಮಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿ ಅನುಷ್ಠಾನಗೊಳಿಸಿ ಎಸ್.ಎಸ್.ಎಲ್.ಸಿ ಫಲಿತಾಂಶ ವೃದ್ಧಿಗಾಗಿ ಎಲ್ಲಾ ಹಂತದ ಅಧಿಕಾರಿಗಳು ಕ್ರಮವಹಿಸುವುದು.

Share. Facebook Twitter LinkedIn WhatsApp Email

Related Posts

‘NHM ನೌಕರ’ರಿಗೆ ಗುತ್ತಿಗೆ ಅವಧಿ ವಿಸ್ತರಿಸಿದ ಆದೇಶ ನೀಡುವಂತೆ ಸರ್ಕಾರಕ್ಕೆ ‘KSHCOEA ಸಂಘ’ ಮನವಿ

11/07/2025 6:15 AM2 Mins Read

ALERT : ಮಹಿಳೆಯರೇ ಗಮನಿಸಿ : ಸಾರ್ವಜನಿಕ ಸ್ಥಳಗಳಲ್ಲಿ ಗುಪ್ತವಾಗಿ ನಿಮ್ಮ ವೀಡಿಯೋ ಚಿತ್ರೀಕರಿಸಿದ್ರೇ ತಕ್ಷಣವೇ ಈ ಸಂಖ್ಯೆಗೆ ಕರೆ ಮಾಡಿ

11/07/2025 6:09 AM1 Min Read

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ವಾರಸುದಾರರ ಹೆಸರಿಗೆ ಪಹಣಿ ನೋಂದಣಿ, ಮನೆ ಬಾಗಿಲಿಗೇ `ಪೌತಿ ಖಾತೆ’.!

11/07/2025 6:05 AM1 Min Read
Recent News

‘NHM ನೌಕರ’ರಿಗೆ ಗುತ್ತಿಗೆ ಅವಧಿ ವಿಸ್ತರಿಸಿದ ಆದೇಶ ನೀಡುವಂತೆ ಸರ್ಕಾರಕ್ಕೆ ‘KSHCOEA ಸಂಘ’ ಮನವಿ

11/07/2025 6:15 AM

BIG NEWS: ‘SSLC ವಿದ್ಯಾರ್ಥಿ’ಗಳ ಮಾರ್ಕ್ಸ್ ಹೆಚ್ಚಿಸಲು ‘ಶಿಕ್ಷಣ ಇಲಾಖೆ’ಯಿಂದ ಮಹತ್ವದ ಆದೇಶ | SSLC Exam 2025

11/07/2025 6:13 AM

ವಾಟ್ಸಾಪ್ ಮೂಲಕ ಜೂನಿಯರ್ ಗಳಿಗೆ ಕಿರುಕುಳ ನೀಡಿದರೆ `ರ‍್ಯಾಗಿಂಗ್’ ಗೆ ಸಮ : `UGC’ ಮಹತ್ವದ ಆದೇಶ

11/07/2025 6:12 AM

ALERT : ಮಹಿಳೆಯರೇ ಗಮನಿಸಿ : ಸಾರ್ವಜನಿಕ ಸ್ಥಳಗಳಲ್ಲಿ ಗುಪ್ತವಾಗಿ ನಿಮ್ಮ ವೀಡಿಯೋ ಚಿತ್ರೀಕರಿಸಿದ್ರೇ ತಕ್ಷಣವೇ ಈ ಸಂಖ್ಯೆಗೆ ಕರೆ ಮಾಡಿ

11/07/2025 6:09 AM
State News
KARNATAKA

‘NHM ನೌಕರ’ರಿಗೆ ಗುತ್ತಿಗೆ ಅವಧಿ ವಿಸ್ತರಿಸಿದ ಆದೇಶ ನೀಡುವಂತೆ ಸರ್ಕಾರಕ್ಕೆ ‘KSHCOEA ಸಂಘ’ ಮನವಿ

By kannadanewsnow0911/07/2025 6:15 AM KARNATAKA 2 Mins Read

ಬೆಂಗಳೂರು: NHM ಸಿಬ್ಬಂದಿಗಳ ಗುತ್ತಿಗೆ ಅವಧಿಯನ್ನು ಒಂದೊಂದೇ ತಿಂಗಳು ಮುಂದುವರೆಸುತ್ತಿದ್ದು ಇದರಿಂದ ಆತಂಕದಲ್ಲಿ ಸಿಬ್ಬಂದಿಗಳಿಗೂ ಸಹ ಹೃದಯಾಘಾತ ಆಗುವ ಮುನ್ನ…

BIG NEWS: ‘SSLC ವಿದ್ಯಾರ್ಥಿ’ಗಳ ಮಾರ್ಕ್ಸ್ ಹೆಚ್ಚಿಸಲು ‘ಶಿಕ್ಷಣ ಇಲಾಖೆ’ಯಿಂದ ಮಹತ್ವದ ಆದೇಶ | SSLC Exam 2025

11/07/2025 6:13 AM

ALERT : ಮಹಿಳೆಯರೇ ಗಮನಿಸಿ : ಸಾರ್ವಜನಿಕ ಸ್ಥಳಗಳಲ್ಲಿ ಗುಪ್ತವಾಗಿ ನಿಮ್ಮ ವೀಡಿಯೋ ಚಿತ್ರೀಕರಿಸಿದ್ರೇ ತಕ್ಷಣವೇ ಈ ಸಂಖ್ಯೆಗೆ ಕರೆ ಮಾಡಿ

11/07/2025 6:09 AM

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ವಾರಸುದಾರರ ಹೆಸರಿಗೆ ಪಹಣಿ ನೋಂದಣಿ, ಮನೆ ಬಾಗಿಲಿಗೇ `ಪೌತಿ ಖಾತೆ’.!

11/07/2025 6:05 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.