ಬೆಂಗಳೂರು: ರಾಜ್ಯದಲ್ಲಿ ಸದ್ಯಕ್ಕೆ ಇ-ಖಾತಾದ್ದೇ ಸದ್ದು. ಅದರಲ್ಲೂ ನಮ್ಮದು ಎ-ಖಾತಾ, ನನ್ನದು ಬಿ-ಖಾತಾ ಎಂಬುದಾಗಿ ಮಾತುಗಳು ಕೇಳಿ ಬರುತ್ತಿದೆ. ಸಾರ್ವಜನಿಕರಾದಂತ ನಿಮಗೆ ಏನಿದು ಎ-ಖಾತಾ ಅಂದ್ರೆ? ಏನಿದು ಬಿ-ಖಾತಾ ಅಂದ್ರೆ ಅನ್ನೋದು ಕೆಲವರಿಗೆ ಗೊತ್ತಿದ್ದರೇ, ಮತ್ತೆ ಕೆಲವರಿಗೆ ಗೊತ್ತಿಲ್ಲ. ಅವರಿಗೆ ಮಾಹಿತಿಗಾಗಿ ಏನಿದರು ಎರಡರ ನಡುವಿನ ವ್ಯತ್ಯಾಸ ಅಂತ ಮುಂದೆ ಓದಿ.
ಸಾರ್ವಜನಿಕರಿಗೆ ಸರಳವಾಗಿ ಎ, ಬಿ-ಖಾತಾ ನಡುವಿನ ವ್ಯತ್ಯಾಸವನ್ನು ಹೇಳಬಹುದಾದರೇ ಎ-ಖಾತಾ ಅಂದ್ರೆ ಡಿಸಿ ಕನ್ವರ್ಷನ್ ಲೇಔಟ್ ಆದರೇ, ಬಿ-ಖಾತಾ ಅಂದ್ರೆ ಕಂದಾಯ ಭೂಮಿ, ತಹಶೀಲ್ದಾರ್ ಲೇಔಟ್ ಆಗಿದೆ. ಎ-ಖಾತಾ ಮಾಲೀಕರಿಗೆ ಬ್ಯಾಂಕ್ ಮೂಲಕ ಶೀಘ್ರವೇ ಸಾಲ ಸೌಲಭ್ಯಗಳು ದೊರೆತದರೇ, ಬಿ-ಖಾತಾ ನಿವೇಶನಗಳಿಗೆ ಇದು ಸ್ವಲ್ಪ ಕಷ್ಟವೇ ಎಂದು ಹೇಳಲಾಗುತ್ತಿದೆ. ಆದರೂ ಬ್ಯಾಂಕ್ ಮ್ಯಾನೇಜರ್ ಮೇಲೆ ಇದು ನಿರ್ಧಾರವಾಗಿದೆ ಎಂಬುದಾಗಿಯೂ ತಿಳಿದು ಬಂದಿದೆ.
ಒಟ್ಟಾರೆಯಾಗಿ ಎ-ಖಾತ ನಿವೇಶನ ಅಂದ್ರೆ ಅದು ಡಿಸಿ ಕನ್ವರ್ಷನ್ ಲೇಔಟ್. ಸರಳವಾಗಿ ಹೇಳುವುದಾದರೆ, ಆಸ್ತಿಯು ಸಂಪೂರ್ಣವಾಗಿ ಕಾನೂನುಬದ್ಧವಾಗಿದ್ದರೆ, ಅವುಗಳನ್ನು ಎ ಖಾತಾ ಎಂದು ವರ್ಗೀಕರಿಸಲಾಗುತ್ತದೆ. ಆಸ್ತಿ ತೆರಿಗೆ ಸೇರಿದಂತೆ ನಿಗದಿತ ಮಾನದಂಡಗಳಿಗೆ ಅನುಸಾರವಾಗಿ ನಿರ್ಮಿಸಲಾಗಿರುವಂತ ಲೇಔಟ್ ಆಗಿರುತ್ತದೆ. ಬಿ-ಖಾತಾ ಅಂದ್ರೆ ಅಂದು ಕಂದಾಯ ಭೂಮಿ, ತಹಶೀಲ್ದಾರ್ ಲೇಔಟ್ ಆಗಿರುತ್ತದೆ. ಆಸ್ತಿ ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣವಾಗಿರುವ ಕಟ್ಟಡಗಳು, ಲೇಔಟ್‌ಗಳು, ಅಥವಾ ಕಂದಾಯ ನಿವೇಶನಗಳಾಗಿರುತ್ತವೆ. ಎ-ಖಾತಾ ಸೈಟ್ ಗಳ ಬೆಲೆ ಕೊಂಚ ದುಪ್ಪಟ್ಟಾಗಿದ್ದರೇ, ಬಿ-ಖಾತಾ ಬೆಲೆ ಕಡಿಮೆ. ಹೀಗಾಗಿ ಕೆಲವರು ಬಿ-ಖಾತಾ ಸೈಟ್ ಖರೀದಿಸೋದಕ್ಕೆ ಮುಂದಾದರೇ, ಮತ್ತೆ ಕೆಲವರು ಸ್ವಲ್ಪ ರೇಟ್ ಜಾಸ್ತಿ ಆದರೂ ಪರವಾಗಿಲ್ಲ ಇರಲಿ ಅಂತ ಎ-ಖಾತಾ ನಿವೇಶನಗಳನ್ನೇ ಖರೀದಿಸುತ್ತಾರೆ.
‘ಎ, ಬಿ-ಖಾತಾ’ ಪಡೆಯಲು ಏನೆಲ್ಲಾ ದಾಖಲೆಗಳನ್ನು ಸಲ್ಲಿಸಬೇಕು.?
ಎ-ಖಾತಾ ( A-Khata) ಪಡೆಯಲು ಸಲ್ಲಿಸಬೇಕಾದ ದಾಖಲೆಗಳು
1. ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತು ಮಾಡಿಸುವ ನೊಂದಾಯಿತ ಮಾರಾಟ ಪತ್ರಗಳು/ದಾನ ಪತ್ರ/ ವಿಭಾಗ * ಪತ್ರಗಳು ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರಗಳು/ಮಂಜೂರಾತಿ ಪತ್ರಗಳು ಕಂದಾಯ ಇಲಾಖೆಯಿಂದ 94 ಸಿ ಸಿ ಅಡಿ ನೀಡಲಾದ ಹಕ್ಕು ಪತ್ರ.
2. ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ಧೃಡೀಕೃತ ಪ್ರತಿ ಮತ್ತು ನಿವೇಶನಗಳ ಬಿಡುಗಡೆ ಪತ್ರ
3. ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ
4. ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ
5. ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ
6. ಮಾಲೀಕರ ಗುರುತಿನ ದಾಖಲೆ ಪ್ರತಿ.
ಬಿ-ಖಾತಾ ( B-Khata) ಪಡೆಯಲು ಸಲ್ಲಿಸಬೇಕಾದ ದಾಖಲೆಗಳು
1. ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತು ಪಡಿಸುವ ದಿನಾಂಕ: 10-09-2024ರ ಪೂರ್ವದಲ್ಲಿ ನೊಂದಾಯಿತ ಮಾರಾಟ ಪತ್ರಗಳು/ದಾನ ಪತ್ರ/ ವಿಭಾಗ ಪತ್ರಗಳು/ ಹಕ್ಕು ಖುಲಾಸೆ ಪತ್ರಗಳು.
2. ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ.
3. ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ
4. ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ
5. ಮಾಲೀಕರ ಗುರುತಿನ ದಾಖಲೆ ಪ್ರತಿ.
ಈ ಮೇಲಿನ ದಾಖಲೆಗಳನ್ನು ಈ ಪ್ರಕಟಣೆ ದಿನಾಂಕದಿಂದ 3 ತಿಂಗಳೊಳಗೆ ಸಲ್ಲಿಸಿ 2-ಖಾತೆಯನ್ನು ಪಡೆಯುವುದು.
ರಾಜ್ಯದ 137 ಅಕ್ರಮ ವಲಸೆಗಾರರ ವಿರುದ್ಧ ಕಾನೂನು ಕ್ರಮ: ಗೃಹ ಸಚಿವ ಡಾ.ಜಿ ಪರಮೇಶ್ವರ್
GOOD NEWS : ಇನ್ಮುಂದೆ ಹರಟೆ ಹೊಡೆಯಲು ಶಾಸಕರಿಗೂ ‘ಕ್ಲಬ್’ ವ್ಯವಸ್ಥೆ : ಸ್ಪೀಕರ್ ಯುಟಿ ಖಾದರ್ ಹೇಳಿಕೆ