ಬೆಂಗಳೂರು : ಯುಜಿ ನೀಟ್ (UG NEET-2024) ಅರ್ಹತಾ ಪರೀಕ್ಷೆಗೆ ಮಾತ್ರ ಹಾಜರಾಗುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮಹತ್ವದ ಮಾಹಿತಿಯೊಂದನ್ನು ನೀಡಿದೆ.
ಕೆಲವು ಅಭ್ಯರ್ಥಿಗಳು ಯುಜಿಸಿಇಟಿ-2024 ರ ಅರ್ಜಿಯಲ್ಲಿ ಕೇವಲ ವೈದ್ಯಕೀಯ / ದಂತವೈದ್ಯಕೀಯ / ಆಯುಷ್ ಕೋರ್ಸುಗಳನ್ನು ಮಾತ್ರ ಆಯ್ಕೆ ಮಾಡಿರುತ್ತಾರೆ. ಕೇವಲ UGNEET 2024 ಕ್ಕೆ ಹಾಜರಾಗುತ್ತಿರುವ ಅಭ್ಯರ್ಥಿಗಳಿಗೆ ಯುಜಿಸಿಇಟಿ ಪ್ರವೇಶ ಪತ್ರವನ್ನು ಪ್ರಾಧಿಕಾರದಿಂದ ನೀಡಲಾಗುವುದಿಲ್ಲ. ಅಂತಹ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ಸೈಟಿನಿಂದ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿ ಕೊಳ್ಳಲು ಪ್ರಯತ್ನಿಸಬಾರದು.
ವೈದ್ಯಕೀಯ / ದಂತವೈದ್ಯಕೀಯ / ಆಯುರ್ವೇದ / ಯುನಾನಿ / ಹೋಮಿಯೋಪತಿ ಕೋರ್ಸುಗಳ ಪ್ರವೇಶಕ್ಕೆ NEET – 2024 ರ ಫಲಿತಾಂಶ ಪ್ರಕಟಣೆಯ ನಂತರ ಅರ್ಹತೆ ಪಡೆಯುವ ಅಭ್ಯರ್ಥಿಗಳಿಗೆ ಪರಿಶೀಲನಾ ಪತ್ರವನ್ನು ನೀಡುವ ಕಾರ್ಯ ಪ್ರಾರಂಭಿಸಲಾಗುವುದು ಹಾಗು ಅಂತಹ ಅಭ್ಯರ್ಥಿಗಳು ನಿಯಮಾನುಸಾರ ವೈದ್ಯಕೀಯ ಕೌನ್ಸಿಲಿಂಗ್ನಲ್ಲಿ ಭಾಗವಹಿಸಬಹುದಾಗಿದೆ.