ಬೆಂಗಳೂರು: ಬಿಎಂಟಿಸಿಯಿಂದ ಕರೆಯಲಾಗಿದ್ದಂತ ನಿರ್ವಾಹಕರ ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ ಮೂಲ ದಾಖಲೆ/ದೇಹದಾರ್ಢ್ಯತೆ ಪರಿಶೀಲನೆಗೆ ಹಾಜರಾಗಲು ಕರೆಪತ್ರವನ್ನು ಬಿಡುಗಡೆ ಮಾಡಲಾಗಿದೆ. ಅದನ್ನು ಹೇಗೆ ಡೌನ್ ಲೋಡ್ ಮಾಡಿಕೊಳ್ಳಬೇಕು ಎನ್ನುವ ಬಗ್ಗೆ ಮುಂದೆ ಓದಿ.
ಈ ಕುರಿತಂತೆ ಬಿಎಂಟಿಸಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 371-ಜೆ (ಕಲ್ಯಾಣ ಕರ್ನಾಟಕ) ಮೀಸಲಾತಿಯಡಿ ನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಮೆರಿಟ್ ಹಾಗೂ ಮೀಸಲಾತಿ ಆಧಾರದ ಮೇಲೆ ಅರ್ಹತೆ ಪಡೆದವರ ಮೂಲ ದಾಖಲಾತಿ/ದೇಹದಾರ್ಢ್ಯತೆ ಪರಿಶೀಲನೆಗೆ 1:5ರ ಅನುಪಾತದಲ್ಲಿ ಅರ್ಹತಾ ಪಟ್ಟಿ ಹಾಗೂ ಅಂತಿಮ ಅಭ್ಯರ್ಥಿಯ ಕಟ್ಆಫ್ ವಿವರಗಳುಳ್ಳ ಪ್ರಕಟಣೆಯನ್ನು ಈಗಾಗಲೇ ಹೊರಡಿಸಲಾಗಿದೆ ಎಂದಿದೆ.
ಅದರಂತೆ, ಅರ್ಹ ಅಭ್ಯರ್ಥಿಗಳ ಮೂಲ ದಾಖಲೆ/ದೇಹದಾರ್ಢ್ಯತೆ ಪರಿಶೀಲನೆಗೆ ಹಾಜರಾಗಲು ಸಂಸ್ಥೆಯ ಅಧಿಕೃತ ವೆಬ್ಸೈಟ್ www.mybmtc.karnataka.gov.in ರಲ್ಲಿ ಅರ್ಜಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಕರೆಪತ್ರವನ್ನು ಡೌನ್ಲೊಡ್ ಮಾಡಿಕೊಂಡು, ಸೂಚಿಸಿರುವ ದಿನಾಂಕ, ಸಮಯ ಮತ್ತು ಸ್ಥಳದಲ್ಲಿ ಹಾಜರಾಗುವಂತೆ ಈ ಮೂಲಕ ತಿಳಿಸಿಲಾಗಿದೆ.
ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಹೋಗೋರಿಗೆ ಗುಡ್ ನ್ಯೂಸ್: 1,500 ಹೆಚ್ಚುವರಿ ‘KSRTC ಬಸ್’ ವ್ಯವಸ್ಥೆ | KSRTC Bus
Good News: ಶೀಘ್ರವೇ ‘ಗೃಹಲಕ್ಷ್ಮಿ ಯೋಜನೆ’ಯ ಜುಲೈ, ಆಗಸ್ಟ್ ತಿಂಗಳ ಹಣ ಖಾತೆಗೆ ಜಮಾ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್