ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಾದ್ಯಂತ ನವೆಂಬರ್ 15ರವರೆಗೆ ವಿದ್ಯುತ್ ವ್ಯತ್ಯಯಗೊಳ್ಳಲಿದೆ ಎಂದು ಸಾರ್ವಜನಿಕ ವಲುಯಕ್ಕೆ ಮಹತ್ವದ ಮಾಹಿತಿ ನೀಡಲಾಗಿದೆ.
BIGG NEWS: ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿ ರಕ್ತಪಾತ; ಬೈಕ್ ಅಡ್ಡಗಟ್ಟಿ ಚಾಕುವಿನಿಂದ ಇರಿದು ಯುವಕನ ಬರ್ಬರ ಕೊಲೆ
ಅಂಕೋಲಾ ನಗರದಲ್ಲಿ ಮಾತ್ರವಲ್ಲ ಗ್ರಾಮಾಂತರ ವಿಭಾಗಗಳ ಎಲ್ಲಾ ಕಡೆಗಳಲ್ಲೂ ವಿದ್ಯುತ್ ದುರಸ್ತಿ ಕಾರ್ಯ ಮುಂದುವರೆಯುತ್ತಿದೆ. ಹೀಗಾಗಿ ನವೆಂಬರ್ 15ನೇ ತಾರೀಕಿನವರೆಗೂ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮಾಹಿತಿ ನೀಡಲಾಗಿದೆ.
ವಿದ್ಯುತ್ ಮಾರ್ಗಗಳು ಮತ್ತು ಪರಿವರ್ತಕ ಕೇಂದ್ರಗಳು ನಿರ್ವಹಣೆ ಕೆಲಸವಿರುವುದರಿಂದ ಅಂಕೋಲಾ ತಾಲೂಕಿನ ಗ್ರಾಮಾಂತರ ವಿಭಾಗಗಳಲ್ಲಿ ನವೆಂಬರ್ 15ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ?
ನವೆಂಬರ್ 10 ರಿಂದ 11 ರಂದು ಬೆಳಿಗ್ಗೆ 8 ರಿಂದ 6ರವರೆಗೆ ಗುಂಡಬಾಳ ವ್ಯಾಪ್ತಿಯ ಈ ಕೆಳಗಿನ ಗ್ರಾಮಗಳಿಗೆ ಕರೆಂಟ್ ಇರುವುದಿಲ್ಲ
ಕುದ್ರಿಗೆ, ವಾಸರೆ, ಮೇಲಿನಗುಳಿ, ಕಾರೇಬೈಲ್, ಕೆಂಕಣಿ, ಸಂತೆ ಪೇಟೆ, ಮರಕಲ್, ತಳಗದ್ದೆ ನವೆಂಬರ್ 12 ಮತ್ತು 13ರಂದು ಗುಂಡಬಾಳಾ ಹಾಗೂ ಅಂಬಾರಕೊಡ್ಲ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮಗಳಲ್ಲಿ ಕರೆಂಟ್ ಇರುವುದಿಲ್ಲ.
BIGG NEWS: ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿ ರಕ್ತಪಾತ; ಬೈಕ್ ಅಡ್ಡಗಟ್ಟಿ ಚಾಕುವಿನಿಂದ ಇರಿದು ಯುವಕನ ಬರ್ಬರ ಕೊಲೆ
ಇಲ್ಲೆಲ್ಲ ಕರೆಂಟ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ
ದೇವಿಗದ್ದೆ, ಬೋಳುಕುಂಟೆ, ಹುಲಿದೇವರವಾಡ, ವಕ್ಕಳ ಬೆಳಸೆ, ಅಂಬುಗೋಣ, ಶಿರೂರು
ನವೆಂಬರ್ 14 ರಿಂದ 15ರವೆಗೆ ವಂದಿಗೆ ಹಾಗೂ ಅಂಕೋಲಾ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮಗಳಲ್ಲಿ ಕರೆಂಟ್ ಇರುವುದಿಲ್ಲ.
ಈ ಪ್ರದೇಶಗಳಲ್ಲೂ ಇರದು ವಿದ್ಯುತ್
ಶೆಟಗೇರಿ, ಕೇಣಿ ಹಡವ, ತೆಂಕಣಕೇರಿವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ವಿದ್ಯುತ್ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಈ ದಿನಾಂಕಗಳಲ್ಲಿ ಜನರು ವಿದ್ಯುತ್ ಸಂಬಂಧಿತ ಕೆಲಸಗಳಿದ್ದರೆ ಈ ವಾರದ ಮೊದಲೇ ಮಾಡಿ ಮುಗಿಸಿಕೊಳ್ಳುವುದು ಒಳ್ಳೆಯದು.
BIGG NEWS: ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿ ರಕ್ತಪಾತ; ಬೈಕ್ ಅಡ್ಡಗಟ್ಟಿ ಚಾಕುವಿನಿಂದ ಇರಿದು ಯುವಕನ ಬರ್ಬರ ಕೊಲೆ