ಬೆಂಗಳೂರು: ಏಪ್ರಿಲ್, ಮೇ 2022ರಲ್ಲಿ ನಡೆದಿದ್ದಂತ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಫಲಿತಾಂಶದ ( Karnataka 2nd PUC Results ) ಬಳಿಕ, ಮರು ಮೌಲ್ಯಮಾಪನಕ್ಕೆ, ಮರು ಎಣಿಕೆಗೆ ಸಲ್ಲಿಸಲಾಗಿದ್ದಂತ ವಿದ್ಯಾರ್ಥಿಗಳ ಫಲಿತಾಂಶವನ್ನು ಇಂದು ಪ್ರಕಟಿಸಲಾಗಿದೆ.

BIG NEWS: ಐಸಿಸ್ ಲಿಂಕ್: ಕರ್ನಾಟಕ ಸೇರಿದಂತೆ 6 ರಾಜ್ಯಗಳ 13 ಕಡೆ ಎನ್ಐಎ ಅಧಿಕಾರಿಗಳ ದಾಳಿ

ಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಏಪ್ರಿಲ್, ಮೇ 2022ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ದಿನಾಂಕ 18-06-2022ರಂದು ಪ್ರಕಟಿಸಲಾಗಿತ್ತು ಎಂದು ತಿಳಿಸಿದೆ.

BIG NEWS: ಮಂಗಳೂರಿನ ಸುರತ್ಕಲ್ ನಲ್ಲಿ ಫಾಜಿಲ್ ಹತ್ಯೆ ಪ್ರಕರಣ: ಉಡುಪಿಯಲ್ಲಿ ಅಪರಿಚಿತ ಕಾರು ಪತ್ತೆ

ಮರು ಮೌಲ್ಯಮಾಪನಕ್ಕೆ ಮತ್ತು ಮರು ಎಣಿಕೆಗೆ ಅರ್ಜಿಯನ್ನು ಸಲ್ಲಿಸಿದ್ದ ವಿದ್ಯಾರ್ಥಿಗಳ ಫಲಿತಾಂಶವನ್ನು ಇದೀಗ ಪ್ರಕಟಿಸಲಾಗಿದೆ. ಸದರಿ ಫಲಿತಾಂಶವನ್ನು ಇಲಾಖೆಯ ವೆಬ್ ಸೈಟ್ https://pue.karnataka.gov.in ನಲ್ಲಿ ವೀಕ್ಷಿಸಬಹುದಾಗಿದೆ ಎಂದು ಹೇಳಿದೆ.

ವರದಿ : ವಸಂತ ಬಿ ಈಶ್ವರಗೆರೆ

BREAKING NEWS: ರಾಜ್ಯದ ಮೂರು ಜಿಲ್ಲೆಯಲ್ಲಿ ಎನ್ಐಎ ಅಧಿಕಾರಿಗಳ ದಾಳಿ: ಮೂವರು ಶಂಕಿತ ಉಗ್ರರು ಅರೆಸ್ಟ್

Share.
Exit mobile version