ಬೆಂಗಳೂರು : ಭೂ ಸ್ವಾದಿನಕ್ಕೆ ಒಳಪಟ್ಟ ಜಮೀನಿಗೆ ಪರಿಹಾರದ ರೂಪದಲ್ಲಿ ಎರಡು ಕೋಟಿಗೂ ಅಧಿಕ ಹಣ ಬಂದಿತ್ತು. ಈ ಹಣವನ್ನು ತವರಿಗೆ ಕಳುಹಿಸಿದ್ದಾಳೆಂದು ಕೋಪಗೊಂಡ ಪತಿ ಕುಡಿದ ಮತ್ತಿನಲ್ಲಿ ಮಚ್ಚಿನಿಂದ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ನೆಲಮಂಗಲ ತಾಲೂಕಿನ ಗೊಟ್ಟಿಗೆರೆ ಗ್ರಾಮದಲ್ಲಿ ನಡೆದಿದೆ.

ಹತ್ಯೆಗೆ ಒಳಗದ ಮಹಿಳೆಯನ್ನ ಜಯಲಕ್ಷ್ಮಿ(36) ಎಂದು ಹೇಳಲಾಗುತ್ತಿದ್ದು, ಪತ್ನಿಯನ್ನು ಹತ್ಯೆ ಮಾಡಿದ ಆರೋಪಿಯನ್ನ ಪತಿ ಶ್ರೀನಿವಾಸ್​ ಎಂದು ತಿಳಿಬಂದಿದೆ. ಇದೀಗ ಘಟನೆಗೆ ಸಂಬಂಧಿಸಿದಂತೆ ದಾಬಸ್ ಪೇಟೆ ಪೊಲೀಸರು ಶ್ರೀನಿವಾಸ್ ನನ್ನ ಬಂಧಿಸಿದ್ದಾರೆ.

ದಾಬಸ್ ಪೇಟೆ ಕೈಗಾರಿಕಾ ಪ್ರದೇಶಕ್ಕಾಗಿ ಶ್ರೀನಿವಾಸ್ ಅವರ 1 ಎಕರೆ ಜಮೀನು ಭೂ ಸ್ವಾಧೀನಕ್ಕೆ ಒಳಗಾಗಿತ್ತು, ಪರಿಹಾರವಾಗಿ 2 ಕೋಟಿಗೂ ಹೆಚ್ಚು ಹಣ ಶ್ರೀನಿವಾಸ್ ಕುಟುಂಬಕ್ಕೆ ಬಂದಿತ್ತು. ಇದರಲ್ಲಿ ಬಹುಪಾಲು ಹಣವನ್ನ ಹೆಂಡತಿ ತವರು ಮನೆಗೆ ಕಳುಹಿಸಿದ್ದಾಳೆ ಎಂಬುದು ಗಂಡ ಶ್ರೀನಿವಾಸನ ಆರೋಪವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ನಿತ್ಯ ಗಂಡ ಹೆಂಡತಿ ನಡುವೆ ಜಗಳವಾಗುತ್ತಿತ್ತು, ಕುಡಿದ ನಶೆಯಲ್ಲಿದ್ದ ಗಂಡ ಜಗಳದ ಆವೇಶದಲ್ಲಿ ಮಚ್ಚಿನಿಂದ ಹೆಂಡತಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.

ಈ ವೇಳೆ ಶವವನ್ನು ಹೂತು ಹಾಕಲು ಶ್ರೀನಿವಾಸ ರಾತ್ರಿ ಗುಂಡಿ ತೋಡಲು ಆರಂಭಿಸಿದಾನೆ.ಇದು ಮಕ್ಕಳಿಗೆ ತಿಳಿದಿದೆ ಈ ವೇಳೆ ಶ್ರೀನಿವಾಸ ನಾನೇ ಕೊಂದಿರುವುದಾಗಿ ಹೇಳಿ ಈ ವಿಷಯವನ್ನು ಯಾರಿಗು ಹೇಳದಂತೆ ಬೆದರಿಕೆ ಒಡ್ಡಿದ್ದಾನೆ. ಮಕ್ಕಳು ಹೆದರಿ ತಮ್ಮ ಸಂಬಂಧಿಕರಿಗೆ ತಿಳಿಸಿದ್ದಾರೆ.ಮೃತಳ ತವರು ಮನೆಯವರು ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಆರೋಪಿ ಶ್ರೀನಿವಾಸ್ ನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲು ಮಾಡಿದ್ದಾರೆ.

Share.
Exit mobile version