ತುಮಕೂರು/ಉತ್ತರ ಕನ್ನಡ, ಬೆಳಗಾವಿ: ಈಗಾಗಲೇ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದಂತ ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದರು. ಈ ಬೆನ್ನಲ್ಲೇ ತುಮಕೂರು, ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಉಗ್ರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಂತ ಇಬ್ಬರು ಶಂಕಿತರನ್ನು ಎನ್ಐಎ ಅಧಿಕಾರಿಗಳು ಬಂಧಿಸಿರೋದಾಗಿ ತಿಳಿದು ಬಂದಿದೆ.

ತುಮಕೂರು ಜಿಲ್ಲೆಯ ಮರಳೊರುದಿಣ್ಣೆ ಪ್ರದೇಶದ ಮನೆಯಲ್ಲಿ ವಾಸವಿದ್ದಂತ ಶಂಕಿತ ಉಗ್ರನ ನಿವಾಸದ ಮೇಲೆ ಇಂದು ಮುಂಜಾನೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೆಹಲಿ, ಬೆಂಗಳೂರು ಮೂಲದ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ, ಓರ್ವ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

BIG NEWS: ಮಂಗಳೂರಿನ ಸುರತ್ಕಲ್ ನಲ್ಲಿ ಫಾಜಿಲ್ ಹತ್ಯೆ ಪ್ರಕರಣ: ಉಡುಪಿಯಲ್ಲಿ ಅಪರಿಚಿತ ಕಾರು ಪತ್ತೆ

ಮಹಾರಾಷ್ಟ್ರ ಮೂಲದ ಯುನಾನಿ ಕಾಲೇಜಿನ ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ದಿರೋದಾಗಿ ತಿಳಿದು ಬಂದಿದೆ. ಬಂಧತ ವಿದ್ಯಾರ್ಥಿ ಐಎಸ್ಐಎಸ್ ಉಗ್ರ ಸಂಘಟನೆ ಜೊತೆಗೆ ನಂಟು ಹೊಂದಿದ್ದ ಎನ್ನಲಾಗಿದೆ.

ಮತ್ತೊಂದೆಡೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಮುಂಜಾನೆಯೇ ಎನ್ಐಎ ಅಧಿಕಾರಿಗಳು ದಾಳಿನಡೆಸಿದ್ದು, ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದಂತ ಶಂಕಿತ ವ್ಯಕ್ತಿಯನ್ನು ಬಂಧಿಸಿರೋದಾಗಿ ತಿಳಿದು ಬಂದಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಮುಂಜಾನೆ 4.15ಕ್ಕೆ ದೆಹಲಿ, ಬೆಂಗಳೂರಿನ ಎನ್ಐಎ ತಂಡದ ಅಧಿಕಾರಗಳಿಂದ ( NIA Officer ) ಅಬ್ದುಲ್ ಮುಕ್ತದೀರ್ ಎಂಬಾತನ ನಿವಾಸದ ಮೇಲೆ ದಾಳಿಯನ್ನು ನಡೆಸಲಾಗಿದೆ.

ದೆಹಲಿಯ ನೂತನ ಪೊಲೀಸ್ ಕಮಿಷನರ್ ಆಗಿ ಸಂಜಯ್ ಅರೋರಾ ನೇಮಕ, ನಾಳೆ ಅಧಿಕಾರ ಸ್ವೀಕಾರ

ಇದೀಗ ಅಬ್ದುಲ್ ಮುಕ್ತದೀರ್ ಅನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿರೋದಾಗಿ ಮಾಹಿತಿ ತಿಳಿದು ಬಂದಿದೆ. ಈತ ಉಗ್ರ ಚಟುವಟಿಕೆಗೆ ನೇಮಕಗೊಳ್ಳೋದಕ್ಕಾಗಿ ಯುವಕರನ್ನು ಪ್ರೇರೇಪಣೆ ಮಾಡುತ್ತಿದ್ದ ಎಂಬುದಾಗಿ ತಿಳಿದು ಬಂದಿದೆ.

ಉತ್ತರ ಕನ್ನಡ ಜಿಲ್ಲಾ ಪೊಲೀಸರ ಸಹಕಾರದಿಂದ ಅಬ್ದುಲ್ ಮುಕ್ತದೀರ್ ವಶಕ್ಕೆ ಎನ್ಐಎ ಪಡೆದಿದೆ ಎನ್ನಲಾಗುತ್ತಿದೆ.  ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Shocking news: ‘ಕಳ್ಳ ಪೊಲೀಸ್​ ಆಟ’ಕ್ಕೆ ರಿವಾಲ್ವರ್‌ ಬಳಕೆ: ಉತ್ತರ ಪ್ರದೇಶದ ಬಿಜೆಪಿ ಮುಖಂಡನ ಪುತ್ರನಿಂದ ಬಾಲಕನ ಹತ್ಯೆ

Share.
Exit mobile version