ಬೆಂಗಳೂರು: ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತರಿಗೆ ಉಚಿತ ಚಿಕಿತ್ಸೆ ಕಲ್ಪಿಸುವಂತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಈ ಆರೋಗ್ಯ ಸಂಜೀವಿನಿ ಯೋಜನೆ ಕುರಿತಂತೆ ಸರ್ಕಾರಿ ನೌಕರರಿಗೆ ಸಂಘದಿಂದ ಮಹತ್ವದ ಸ್ಪಷ್ಟನೆಯನ್ನು ನೀಡಲಾಗಿದೆ. ಅದೇನು ಅಂತ ಮುಂದೆ ಓದಿ.
ಈ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಬಗ್ಗೆ ಈ ಕೆಳಕಂಡಂತೆ ಸ್ಪಷ್ಟನೆಯನ್ನು ನೀಡಿದೆ.
1. ರಾಜ್ಯ ಸರ್ಕಾರಿ ನೌಕರರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯು ದಿನಾಂಕ: 01-10-2025 ರಿಂದ ಜಾರಿಗೆ ಬಂದಿರುತ್ತದೆ.
2. ಈ ಯೋಜನೆಯಲ್ಲಿ ಸರ್ಕಾರಿ ನೌಕರರು ಹಾಗೂ ಅವಲಂಬಿತ ಕುಟುಂಬ ಸದಸ್ಯರು ಒಳರೋಗಿಯಾಗಿ ಸುಮಾರು 2000 ಕಾಯಿಲೆಗಳಿಗೆ ನಗದುರಹಿತ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ
3. ಮುಂದಿನ ಹಂತದಲ್ಲಿ ಹೊರ ರೋಗಿಗಳಿಗೂ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗುವುದು
4. ಗಂಡ ಹೆಂಡತಿ ಇಬ್ಬರೂ ಸರ್ಕಾರಿ ನೌಕರರಾಗಿದ್ದರೆ ಒಬ್ಬರು ಮಾತ್ರ ವಂತಿಕೆ ನೀಡುವುದು
5. ಮಹಿಳಾ ಸರ್ಕಾರಿ ನೌಕರರ ತಂದೆ-ತಾಯಿಗಳು ಈ ಯೋಜನೆ ವ್ಯಾಪ್ತಿಗೆ ಒಳಪಡಲಿದ್ದಾರೆ.
6. ಈ ಯೋಜನೆ ಬೇಡವೆಂದು ಬರೆದುಕೊಡಲು ಈ ಹಿಂದೆಯು ಅವಕಾಶ ನೀಡಲಾಗಿತ್ತು ಮತ್ತೊಮ್ಮೆ ದಿನಾಂಕ:18-10-2025ರಂದು ಕೊನೆಯ ದಿನಾಂಕ ನೀಡಲಾಗಿತ್ತು. ಬರೆದು ಕೊಡದಿರುವ ಎಲ್ಲಾ ನೌಕರರು ಈ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ.
7. ಈ ಯೋಜನೆ ವ್ಯಾಪ್ತಿಗೆ ಬರುವ ನೌಕರರು ಮತ್ತು ಅವಲಂಬಿತರು ನಗದುರಹಿತ ಚಿಕಿತ್ಸೆ ಪಡೆಯಲು ಆಯಾ ಕಚೇರಿಯ ಡಿ.ಡಿ.ಓ ಗಳ ಮೂಲಕ ಹೆಚ್.ಆರ್.ಎಂ.ಎಸ್
ತಂತ್ರಾಂಶದಲ್ಲಿ ಮಾಹಿತಿಗಳನ್ನು ನೊಂದಾಯಿಸಬೇಕು.
8. ಈಗಾಗಲೆ ಕೆ.ಎ.ಎಸ್.ಎಸ್ ಯೋಜನೆಗೆ ಬೇಡವೆಂದು ಬರೆದುಕೊಟ್ಟಿರುವ ನೌಕರರು ಮುಂದೆ ಈ ಯೋಜನೆ ವ್ಯಾಪ್ತಿಯ ಸೇರ್ಪಡೆಗೆ ಅವಕಾಶವಿರುವುದಿಲ್ಲ.
9. ಮುಂದಿನ ದಿನಗಳಲ್ಲಿ ವೈದ್ಯಕೀಯ ವೆಚ್ಚಗಳ ಮರುಪಾವತಿಯ ಸೌಲಭ್ಯವನ್ನು ಹಿಂಪಡೆಯುತ್ತದೆ.
10.ದಿನಾಂಕ: 27-08-2024ರ ಆದೇಶದಲ್ಲಿ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೈದ್ಯಕೀಯ ಭತ್ಯೆಯನ್ನು ರೂ. 200/- ಗಳಿಂದ ರೂ. 500/- ಗಳಿಗೆ ಹೆಚ್ಚಿಸುವುದರ ಜೊತೆಗೆ ಸದರಿ ಆದೇಶದಲ್ಲಿ ಈ ಕೆಳಕಂಡಂತೆ ವಿವರಿಸಲಾಗಿದೆ.
“ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಸೌಲಭ್ಯ ಅನುಷ್ಠಾನಗೊಂಡ ನಂತರದಲ್ಲಿ ವೈದ್ಯಕೀಯ ಭತ್ಯೆಯ ಈ ಆದೇಶವು ಜಾರಿಯಲ್ಲಿರುವುದು ಕೊನೆಗೊಳ್ಳುತ್ತದೆ ಮತ್ತು ಯಾವುದೇ ಸರ್ಕಾರಿ ನೌಕರನು ವೈದ್ಯಕೀಯ ಭತ್ಯೆ ಸೌಲಭ್ಯವನ್ನು ಪಡೆಯಲು ಅರ್ಹನಿರುವುದಿಲ್ಲವೆಂದು 2024 ರಲ್ಲಿ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಸರ್ಕಾರ ಆದೇಶ ಹೊರಡಿಸಿರುತ್ತದೆ.
11. ಕೇಂದ್ರ ಸಕಾರವು ದಿನಾಂಕ:03-10-2025ರ ತನ್ನ ಆದೇಶದಲ್ಲಿ ದಿನಾಂಕ:13-10-2025 ರಿಂದ ಅನ್ವಯಿಸುವಂತೆ ಸಿ.ಜಿ.ಹೆಚ್.ಎಸ್ ದರಗಳನ್ನು ಪರಷ್ಕರಿಸಿದ್ದು, ಈ ದರಗಳನ್ನು ರಾಜ್ಯ ಸರ್ಕಾರವು ಸಿ.ಜಿ.ಹೆಚ್.ಎಸ್ ಪರಿಷ್ಕೃತ ದರಗಳನ್ನು ಕೆ.ಎ.ಎಸ್.ಎಸ್ ಯೋಜನೆಗೆ ಅಳವಡಿಸಿಕೊಳ್ಳುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೀಘ್ರ ಪರಿಷ್ಕೃತ ದರಗಳು ಜಾರಿಗೆ ಬರುವುದರಿಂದ ರಾಜ್ಯದ ಪ್ರತಿಷ್ಠತ ಎಲ್ಲಾ ಆಸ್ಪತ್ರೆಗಳು ಕೆ.ಎ.ಎಸ್.ಎಸ್ ಯೋಜನೆಯ ವ್ಯಾಪ್ತಿಗೆ ಬರಲು ಎಂಪ್ಯಾನಲ್-ಎಂ.ಓ.ಯು ಮಾಡಿಕೊಳ್ಳುತ್ತವೆ.
12.ರಾಜ್ಯ/ಜಿಲ್ಲೆ/ತಾಲ್ಲೂಕು ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳೊಂದಿಗೆ ಈಗಾಗಲೆ ಅಧಿಕಾರಿಗಳು ಸಭೆ ನಡೆಸಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳು ಈ ಯೋಜನೆಯಲ್ಲಿ ಸೇರ್ಪಡೆಯಾಗಲಿವೆ. 13.ಯಾವುದೇ ಹೊಸ ಯೋಜನೆಗಳು ಜಾರಿಗೆ ಬರುವ ಸಂದರ್ಭದಲ್ಲಿ ಸ್ವಲ್ಪ ಗೊಂದಲಗಳು ಸಹಜ- ಹಾಗಾಗಿ ಆರಂಭದಲ್ಲಿ ಸ್ವಲ್ಪ ಗೊಂದಲಗಳಿದ್ದು, ಎಲ್ಲವೂ ಸುಗಮವಾಗಲಿದೆ ಎಂಬುದಾಗಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್ ಷಡಾಕ್ಷರಿ ತಿಳಿಸಿದ್ದಾರೆ.


BREAKING: ಪ್ರಚೋದನಕಾರಿ ಭಾಷಣ: RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ FIR ದಾಖಲು
BIG NEWS : ಅಕ್ರಮವಾಗಿ `BPL’ ರೇಷನ್ ಕಾರ್ಡ್ ಪಡೆದವರಿಗೆ ಸರ್ಕಾರದಿಂದ ಬಿಗ್ ಶಾಕ್.!








